Rahu Ketu Rashi Parivartane: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹಣದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ ಜೀವ ರಾಶಿಗಳ ಮೇಲೂ ಮಹತ್ವದ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಅಂತೆಯೇ, ಜ್ಯೋಯಿತಿಷ್ಯ ಶಾಸ್ತ್ರದಲ್ಲಿ, ರಾಹು-ಕೇತು ಗ್ರಹಗಳನ್ನು ನೆರಳು ಗ್ರಹಗಳು, ಕ್ರೂರ-ಪಾಪ ಗ್ರಹಗಳು ಎಂದು ಕೆರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೂ ಕಷ್ಟ ಕಾರ್ಪಣ್ಯಗಳಿಂದ ಕೂಡಿರುತ್ತದೆ. ಅಂತೆಯೇ ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು-ಕೇತು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಸುಖ-ಸಂತೋಷಕ್ಕೆ, ಹಣಕ್ಕೆ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುವ ರಾಹು-ಕೇತು ಗ್ರಹಗಳು ಇನ್ನೂ ಹತ್ತು ದಿನಗಳಲ್ಲಿ ಎಂದರೆ 30 ಅಕ್ಟೋಬರ್ 2023 ರಂದು ತಮ್ಮ ರಾಶಿಯನ್ನು ಬದಲಾಯಿಸಲಿವೆ. 18 ಮೇ 2025ರವರೆಗೂ ಇದೇ ಸ್ಥಿತಿಯಲ್ಲಿರುವ ರಾಹು-ಕೇತು ಈ ಸಮಯದಲ್ಲಿ ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾರೆ ಎಂದು ಹೇಳಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಅಕ್ಟೋಬರ್ 30ರ ಬಳಿಕ ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಅಪಾರ ಧನ-ಸಂಪತ್ತು: 
ಮೇಷ ರಾಶಿ: 

ರಾಹು-ಕೇತು ರಾಶಿ ಪರಿವರ್ತನೆಯು ಮೇಷ ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ತರಲಿವೆ. ಮುಂದಿನ ಒಂದೂವರೆ ವರ್ಷಗಳ ಕಾಲ ನಿಮಗೆ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಳಿವೆ. ಮಾತ್ರವಲ್ಲ, ಇದನ್ನು ಸದುಪಯೋಗ ಪಡಿಸಿಕೊಂಡರೆ ನೀವು ಯಶಸ್ಸಿನ ಹೊಸ ಉತ್ತುಂಗವನ್ನು ಏರುವಿರಿ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ದೂರ ಪ್ರಯಾಣಗಳು ಲಾಭದಾಯಕವಾಗಿರಲಿವೆ. 


ಇದನ್ನೂ ಓದಿ- ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿಗಾಗಿ ಶುಕ್ರವಾರದ ವಿಶೇಷ ಪರಿಹಾರಗಳಿವು


ಕರ್ಕಾಟಕ ರಾಶಿ: 
ರಾಹು-ಕೇತು ಸಂಚಾರವು ಕರ್ಕಾಟಕ ರಾಶಿಯವರಿಗೆ ಆನಂದದ ದಿನಗಳನ್ನು ತರಲಿವೆ. ಈ ಸಂದರ್ಭದಲ್ಲಿ ನಿಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆತು ಕೌಟುಂಬಿಕ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಹುದು. ವೃತ್ತಿ ಬದುಕಿನಲ್ಲೂ ಒಳ್ಳೆಯ ಅವಕಾಶಗಳು ಕಂಡು ಬರಲಿದ್ದು ಅದೃಷ್ಟದ ಸಂಪೂರ್ಣ ಬೆಂಬಲದೊಂದಿಗೆ ಅಂದುಕೊಂಡದ್ದನ್ನು ಸಾಧಿಸುವಿರಿ. 


ಸಿಂಹ ರಾಶಿ: 
ರಾಹು-ಕೇತು ಸಂಚಾರದಲ್ಲಿನ ಬದಲಾವಣೆಯು ಸಿಂಹ ರಾಶಿಯವರಿಗೆ ಮದುವೆ ಸಂಬಂಧಿತ ಕಾರ್ಯಗಳಲ್ಲಿ ಎದುರಾಗಿದ್ದ ತೊಡಕುಗಳಿಂದ ಮುಕ್ತಿಯನ್ನು ನೀಡಲಿದೆ. ಈ ಸಂದರ್ಭದಲ್ಲಿ ಸಂಗಾತಿಯೊಂದಿಗಿನ ನಿಮ್ಮ ಭಿನ್ನಾಭಿಪ್ರಾಯವು ದೂರವಾಗಲಿದ್ದು, ಸುಖ ಸಾಂಸಾರಿಕ ಜೀವನವನ್ನು ಅನುಭವಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಕಾಣುವಿರಿ. 


ತುಲಾ ರಾಶಿ: 
ರಾಹು-ಕೇತು ರಾಶಿ ಪರಿವರ್ತನೆಯು ತುಲಾ ರಾಶಿಯವರ ಬದುಕಿನಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಯೋಚಿಸಿದರೆ ಉತ್ತಮ. ಆರೋಗ್ಯವೂ ಉತ್ತಮವಾಗಿರಲಿದೆ. 


ಇದನ್ನೂ ಓದಿ- 2025 ರವರೆಗೆ ಈ ರಾಶಿಗಳ ಮೇಲೆ ಶನಿಯ ಕೃಪೆ.. ಝಣಝಣಿಸಲಿದೆ ಕಾಂಚಾಣ, ಕೀರ್ತಿ-ಸಂಪತ್ತು ಪ್ರಾಪ್ತಿ!


ಮೀನ ರಾಶಿ: 
ಅಕ್ಟೋಬರ್ 30ರ ಬಳಿಕ ರಾಹು-ಕೇತು ಮೀನ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ನೀಡಲಿದ್ದಾರೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಇಷ್ಟದ ಸ್ಥಳದಿಂದ ಜಾಬ್ ಆಫರ್ ಬರಬಹುದು. ಅಷ್ಟೇ ಅಲ್ಲದೆ, ಉದಯೋನ್ಮುಖ ಉದ್ಯಮಿಗಳಿಗೆ ಭರ್ಜರಿ ಲಾಭವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.