ಈ ರಾಶಿಯವರ ಜೀವನದಲ್ಲಿ ಎದುರಾಗುವುದು ಸಂಕಷ್ಟಭರಿತ ದಿನಗಳು.! ಹೆಜ್ಜೆ ಹೆಜ್ಜೆಗೂ ಕಾಡುತ್ತಾರೆ ರಾಹು ಕೇತು
ಈ ರಾಶಿಗಳು ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ 4 ರಾಶಿಯ ಜನರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗುತ್ತದೆ.
ಬೆಂಗಳೂರು : ನೆರಳು ಗ್ರಹ ಎಂದೇ ಪರಿಗಣಿಸಲಾಗಿರುವ ರಾಹು-ಕೇತು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿವೆ. ಈ ಎರಡೂ ಗ್ರಹಗಳನ್ನು ಪಾಪಿ ಗ್ರಹಗಳೆಂದೆ ಕರೆಯಲಾಗುತ್ತದೆ. ಒಬ್ಬರ ಜಾತಕದಲ್ಲಿ ಈ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ, ಆ ವ್ಯಕ್ತಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಎರಡು ಗ್ರಹಗಳು ನಿಧಾನವಾಗಿ ಚಲಿಸುವ ಗ್ರಹಗಳಾಗಿವೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತಲುಪಲು ಸುಮಾರು ಒಂದೂವರೆ ವರ್ಷಗಳು ಬೇಕಾಗುತ್ತದೆ. ಅಕ್ಟೋಬರ್ 30, 2023 ರಂದು ಎರಡೂ ಗ್ರಹಗಳು ಮೀನ ರಾಶಿಯನ್ನು ಪ್ರವೇಶಿಸುತ್ತವೆ. ಈ ರಾಶಿಗಳು ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ 4 ರಾಶಿಯ ಜನರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗುತ್ತದೆ.
ಮೇಷ ರಾಶಿ :
ರಾಹು-ಕೇತು ಸಂಚಾರವು ಮೇಷ ರಾಶಿಯವರಿಗೆ ಶುಭಕರವಾಗಿರುವುದಿಲ್ಲ. ಈ ಸಮಯದಲ್ಲಿ, ಈ ರಾಶಿಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವರ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವೆಚ್ಚಗಳು ಅಧಿಕವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ : 'ಶನಿ' ರಾಶಿಯಲ್ಲಿ ಶುಕ್ರನ ಪ್ರವೇಶ: ಧನ ಲಾಭದಿಂದ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ!
ವೃಷಭ ರಾಶಿ :
ರಾಹು-ಕೇತುಗಳ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತದೆ. ಇವರ ಜೀವನದಲ್ಲಿ ಪ್ರತಿ ಹಂತದಲ್ಲೂ ತೊಂದರೆಗಳು ಎದುರಾಗಬಹುದು. ಅನಗತ್ಯವಾಗಿ ಪ್ರಯಾಣ ಬೆಳೆಸಬೇಕಾದ ಸಂದರ್ಭ ಎದುರಾಗಬಹುದು. ವ್ಯರ್ಥ ಖರ್ಚುಗಳಿಂದ ಆರ್ಥಿಕ ಸ್ಥಿತಿ ಹದಗೆಡಬಹುದು. ಇದರಿಂದಾಗಿ ಆರ್ಥಿಕ ಬಿಕ್ಕಟ್ಟು ಅನುಭವಿಸಬೇಕಾಗಬಹುದು.
ಕನ್ಯಾರಾಶಿ :
ರಾಹು-ಕೇತುಗಳ ಸಂಚಾರವು ಕನ್ಯಾ ರಾಶಿಯವರ ಜೀವನದಲ್ಲಿ ಕೂಡಾ ತೊಂದರೆಗಳನ್ನು ಉಂಟುಮಾಡುತ್ತದೆ. ವ್ಯಾಪಾರಸ್ಥರು ವ್ಯವಹಾರದಲ್ಲಿ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಡವಳಿಕೆ ಮತ್ತು ಮಾತಿನ ಮೇಲೆ ಹಿಡಿತ ಇಟ್ಟುಕೊಂಡರೆ ಒಳ್ಳೆಯದು. ಇಲ್ಲವಾದರೆ ಸಹೋದ್ಯೋಗಿಗಳೊಂದಿಗಿನ ಸಂಬಂಧ ಹಾಳಾಗಬಹುದು.
ಇದನ್ನೂ ಓದಿ : ಫೆಬ್ರುವರಿ 15 ಬಳಿಕ ಈ ಜನರಿಗೆ ಬಂಬಾಟ್ ಲಾಟರಿ ಭಾಗ್ಯ, ಅಪಾರ ಧನವೃಷ್ಟಿಯಿಂದ ತಿಜೋರಿ ಫುಲ್ !
ಮೀನ ರಾಶಿ :
ಈ ಎರಡೂ ಛಾಯಾ ಗ್ರಹಗಳು ಮೀನ ರಾಶಿಯನ್ನು ಪ್ರವೇಶಿಸಲಿವೆ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ಸಾಲ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಇಲ್ಲವಾದರೆ ಸಾಲ ಮರುಪಾವತಿ ಮಾಡುವಾಗ ಸಮಸ್ಯೆ ಉಂಟಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.