ಅಂಗಾರಕ ಯೋಗ 2022 ಪರಿಣಾಮ: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ತನ್ನ ರಾಶಿಯನ್ನು ನಿಗದಿತ ಸಮಯದಲ್ಲಿ ಬದಲಾಯಿಸುತ್ತದೆ. ಇಂದು  ಜೂನ್ 27 ರಂದು ಮಂಗಳ ಗ್ರಹ ತನ್ನ ರಾಶಿಯನ್ನು ಬದಲಾಯಿಸಲಿದೆ. ಈ ಮೂಲಕ ಮಂಗಳನು ತಮ್ಮದೇ ಆದ ರಾಶಿಚಕ್ರ ಚಿಹ್ನೆ ಮೇಷವನ್ನು ಪ್ರವೇಶಿಸುತ್ತಾರೆ, ಅಲ್ಲಿ ನೆರಳು ಗ್ರಹ ರಾಹು ಈಗಾಗಲೇ ಇದೆ. ಮಂಗಳನ ಪ್ರವೇಶದೊಂದಿಗೆ ರಾಹು-ಮಂಗಳರ ಸಂಯೋಗದಿಂದ ಅಂಗಾರಕ ಯೋಗ ಸೃಷ್ಟಿಯಾಗಲಿದೆ. ಈ ಯೋಗವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅಂಗಾರಕ ಯೋಗದ ಪರಿಣಾಮವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಇರುತ್ತದೆ, ಆದರೆ ಅದರ ನಕಾರಾತ್ಮಕ ಪರಿಣಾಮವು ವಿಶೇಷವಾಗಿ 3 ರಾಶಿಗಳ ಮೇಲೆ ಗರಿಷ್ಠವಾಗಿರುತ್ತದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ ರಾಶಿಚಕ್ರದ ಜನರು ಜಾಗರೂಕರಾಗಿರಿ :
ಮೇಷ ರಾಶಿಯಲ್ಲಿ ರಾಹು-ಮಂಗಳರ ಸಂಯೋಗದಿಂದ ರೂಪುಗೊಂಡ ಅಂಗಾರಕ ಯೋಗ ಆಗಸ್ಟ್ 10 ರವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಗಸ್ಟ್ 10ರ ವರೆಗೆ ರಾಹು-ಮಂಗಳ ಇಬ್ಬರೂ ಮೂರು ರಾಶಿಯವರನ್ನು ಬಿಡದೆ ಕಾಡಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...


ಇದನ್ನೂ ಓದಿ- Mangal Gochar 2022: ಇಂದಿನಿಂದ ಖುಲಾಯಿಸಲಿದೆ ಈ ಮೂರು ರಾಶಿಯವರ ಅದೃಷ್ಟ


ಇಂದಿನಿಂದ 3 ರಾಶಿಯವರ ಸಂಕಷ್ಟ ಹೆಚ್ಚಿಸಲಿದ್ದಾರೆ ರಾಹು-ಮಂಗಳ :
ವೃಷಭ ರಾಶಿ: 

ರಾಹು-ಮಂಗಳರ ಸಂಯೋಗದಿಂದ ಏರ್ಪಟ್ಟ ಅಂಗಾರಕ ಯೋಗದಿಂದ ವೃಷಭ ರಾಶಿಯವರಿಗೆ ಧನ ನಷ್ಟ ಉಂಟಾಗುವುದು. ಈ ಸಮಯದಲ್ಲಿ, ನಿಮಗೆ ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ, ಇದು ನಿಮ್ಮ ಬಜೆಟ್ ಅನ್ನು ಹಾಳುಮಾಡುತ್ತದೆ. ಇದಲ್ಲದೇ ಒಡಹುಟ್ಟಿದವರೊಂದಿಗೆ ಕಲಹ ಉಂಟಾಗಬಹುದು. ಸಿಹಿಯಾಗಿ ಮಾತನಾಡಿ ವಿವಾದಗಳಿಂದ ದೂರವಿರಿ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ವ್ಯಾಪಾರಿಗಳು ಯಾವುದೇ ದೊಡ್ಡ ವ್ಯವಹಾರಗಳನ್ನು ಮಾಡುವುದನ್ನು ತಪ್ಪಿಸಬೇಕು. 


ಮಕರ ರಾಶಿ:  
ಅಂಗಾರಕ ಯೋಗವು ಮಕರ ರಾಶಿಯವರಿಗೆ ಅನೇಕ ಸಮಸ್ಯೆಗಳನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಸಮಸ್ಯೆಗಳಿರಬಹುದು. ಆದ್ದರಿಂದ ಈ ಸಮಯವನ್ನು ತಾಳ್ಮೆಯಿಂದ ಕಳೆಯಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಇದನ್ನೂ ಓದಿ- ಜಾತಕದ ಈ ಮನೆಯಲ್ಲಿ ಶನಿ ಇದ್ದರೆ ವ್ಯಕ್ತಿಯ ಏಳಿಗೆ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ .!


ಕುಂಭ ರಾಶಿ:  ಕುಂಭ ರಾಶಿಯವರು ರಾಹು-ಮಂಗಳ ಸಂಯೋಗದ ಸಮಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಉದ್ಯೋಗಗಳನ್ನು ಬದಲಾಯಿಸಬಹುದು. ವ್ಯಾಪಾರದಲ್ಲಿ ನಷ್ಟವಾಗದಂತೆ ಎಚ್ಚರಿಕೆ ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.