Rahu-Shukra Yuti 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಸಹ ನಿಗದಿತ ಸಮಯದಲ್ಲಿ ತಮ್ಮ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಈ ರೀತಿ ಗ್ರಹಗಳ ರಾಶಿ ಪರಿವರ್ತನೆಯೊಂದಿಗೆ ಒಂದೇ ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಕೂಡಿದಾಗ ಗ್ರಹಗಳ ಸಂಯೋಗದಿಂದಾಗಿ ದ್ವಾದಶ ರಾಶಿಗಳ ಮೇಲೆ ಧನಾತ್ಮಕ-ಋಣಾತ್ಮಕ ಪರಿಣಾಮಗಳು ಕಂಡು ಬರುತ್ತದೆ. ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಒಂದೇ ರಾಶಿಯಲ್ಲಿ ಪಾಪ ಗ್ರಹ ರಾಹು ಹಾಗೂ ಐಷಾರಾಮಿ  ಜೀವನದ ಅಂಶವಾಗಿರುವ ಶುಕ್ರ ಸಂಯೋಜನೆಗೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಸದ್ಯ ಪಾಪ ಗ್ರಹ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮಾರ್ಚ್ ತಿಂಗಳ ಆರಂಭದಲ್ಲಿ ಐಷಾರಾಮಿ  ಜೀವನದ ಅಂಶವಾಗಿರುವ ಶುಕ್ರನೂ ಕೂಡ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದಾಗಿ ಮೀನ ರಾಶಿಯಲ್ಲಿ ರಾಹು-ಶುಕ್ರ ಯುತಿ ನಿರ್ಮಾಣವಾಗುತ್ತಿದೆ. ಇದರ ಶುಭ ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಜೀವನದ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯ ಜನರಿಗೆ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Laxmi Narayan Yog: ಫೆಬ್ರವರಿ ತಿಂಗಳಿನಲ್ಲಿ ವಿಶೇಷ ಲಕ್ಷ್ಮೀ ನಾರಾಯಣ ಯೋಗ, 5 ರಾಶಿಯವರಿಗೆ ಸಿರಿವಂತರಾಗುವ ಯೋಗ


ಬರೋಬ್ಬರಿ 12 ವರ್ಷಗಳ ಬಳಿಕ ರಾಹು-ಶುಕ್ರ ಯುತಿ: ಶೀಘ್ರದಲ್ಲೇ ಈ ರಾಶಿಯವರ ಮನೆಗೆ ಅದೃಷ್ಟ ಲಕ್ಷ್ಮಿ ಪ್ರವೇಶ:
ವೃಷಭ ರಾಶಿ: 

ರಾಹು-ಶುಕ್ರರ ಸಂಯೋಗವು ವೃಷಭ ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮಗಳನ್ನು ತರಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗಲಿದ್ದು  ಬಹು ದಿನಗಳ ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಉತ್ತಮ ಉಳಿತಾಯವೂ ಸಾಧ್ಯವಾಗಲಿದೆ. 


ಮಿಥುನ ರಾಶಿ: 
ರಾಹು ಮತ್ತು ಶುಕ್ರರ ಸಂಯೋಗವು ಮಿಥುನ ರಾಶಿಯವರ ಜೀವನದಲ್ಲಿ ಬಹಳಷ್ಟು ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಮಿಥುನ ರಾಶಿಯ ವ್ಯಾಪಾರಸ್ಥರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹೊಸ ಕೆಲಸದ ಆಫರ್ ದೊರೆಯಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. 


ಇದನ್ನೂ ಓದಿ- Shani Ast 2024: ಕೆಲವೇ ದಿನಗಳಲ್ಲಿ ಅಸ್ತಮಿಸಲಿದ್ದಾನೆ ಶನಿ, ನಾಲ್ಕು ರಾಶಿಯವರಿಗೆ ಕಷ್ಟದ ದಿನಗಳು ಆರಂಭ


ಧನು ರಾಶಿ: 
ರಾಹು-ಶುಕ್ರ ಯುತಿಯು ಧನು ರಾಶಿಯವರಿಗೆ ಫಲಪ್ರದವಾಗಿರಲಿದೆ. ಈ ಸಮಯದಲ್ಲಿ ನೀವು ಭೌತಿಕ ಸಂತೋಷವನ್ನು ಪಡೆಯಲಿದ್ದೀರಿ. ಮಾತ್ರವಲ್ಲ, ಕೌಟುಂಬಿಕ ಸುಖ-ಸಂತೋಷಗಳು ಹೆಚ್ಚಾಗಲಿವೆ. ಆಸ್ತಿ ವ್ಯವಹಾರದಲ್ಲಿ ಭಾರೀ ಲಾಭವಾಗಲಿದೆ. ಹಣಕಾಸಿನ ಪ್ರಗತಿಯಿಂದಾಗಿ ಮನಸ್ಸು ಸಂತೋಷವಾಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.