Rahu Transit 2023 Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಪಾಪ ಗ್ರಹಗಳಲ್ಲಿ ಒಂದಾದ ರಾಹು ಗ್ರಹವನ್ನು ನೆರಳು ಗ್ರಹ ಎಂತಲೂ ಕರೆಯಲಾಗುತ್ತದೆ. ಕಲಿಯುಗದ ರಾಜ ಎಂತಲೂ ಬಣ್ಣಿಸಲ್ಪಡುವ ರಾಹುವಿನಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ  ಪ್ರಕಾರ, ಅತ್ಯಂತ ಪ್ರಭಾವಶಾಲಿಯಾದ ರಾಹು ಗ್ರಹವು ಶನಿ ನಂತರ ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಅಕ್ಟೋಬರ್ 30, 2023 ರಂದು, ಮಧ್ಯಾಹ್ನ 12:30 ರ ನಂತರ, ರಾಹುವು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೀನ ರಾಶಿಗೆ ರಾಹು ಪ್ರವೇಶವು ಎಲ್ಲಾ 12 ರಾಶಿ ಚಕ್ರಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆದರೂ, ಮೂರು ರಾಶಿಯವರಿಗೆ ರಾಹು ವಿಶೇಷ ಅನುಗ್ರಹ ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

2023 ರಲ್ಲಿ ರಾಹು ರಾಶಿ ಪರಿವರ್ತನೆಯು ಮೂರು ರಾಶಿಯ ಜನರಿಗೆ ವಿಶೇಷ ಆಶೀರ್ವಾದವನ್ನು ನೀಡಲಿದೆ. ಈ ಸಮಯದಲ್ಲಿ ಆ ಮೂರು ರಾಶಿಯ ಜನರು ಅವರ ವೃತ್ತಿ ಜೀವನದಲ್ಲಿ, ಬಲವಾದ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವ್ಯಾಪಾರ-ವ್ಯವಹಾರದಲ್ಲಿ ಆದಾಯ ಹೆಚ್ಚಾಗಲಿದ್ದು ಭಾರೀ ಧನ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...


2023ರಲ್ಲಿ ಮೀನ ರಾಶಿಯಲ್ಲಿ ರಾಹು ಸಂಚಾರ: ಮೂರು ರಾಶಿಯವರಿಗೆ ಬಂಪರ್ ಧನ ಲಾಭ
ಮಿಥುನ ರಾಶಿ:

2023ರಲ್ಲಿ ರಾಹು ಸಂಕ್ರಮವು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ರಾಹು ಸಂಚಾರದ ಪ್ರಭಾವದಿಂದಾಗಿ ಮಿಥುನ ರಾಶಿಯವರು ಈ ಸಮಯದಲ್ಲಿ ಉದ್ಯೋಗದ ವಿಷಯದಲ್ಲಿ ತಾವು ಬಯಸಿದ ಕೆಲಸ ಪಡೆಯಬಹುದು. ಜೊತೆಗೆ ಹಣಕಾಸಿನ ಲಾಭವೂ ಆಗಲಿದೆ. ಈಗಾಗಲೇ ಉದ್ಯೋಗದಲ್ಲಿರುವವರು, ಪ್ರಮೋಷನ್ ಪಡೆಯುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ವಿಶೇಷ ಲಾಭಗಳಿರುತ್ತವೆ. ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಪ್ರಶಂಸಿಸಲಾಗುತ್ತದೆ.


ಇದನ್ನೂ ಓದಿ- Budh Gochar Effect: ಇನ್ನು 24ಗಂಟೆಗಳಲ್ಲಿ ಈ ನಾಲ್ಕು ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು


ಕನ್ಯಾ ರಾಶಿ: 
ರಾಹುವಿನ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಜನರು ಪಾಲುದಾರಿಕೆ ಕೆಲಸಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಹಣದ ಲಾಭ ಸಿಗಲಿದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಹೊಸ ಮನೆ ಮತ್ತು ಹೊಸ ವಾಹನ ಖರೀದಿ ಯೋಗವೂ ಇದೆ.


ಇದನ್ನೂ ಓದಿ- Budhaditya Yog: ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ಯೋಗ, 6 ರಾಶಿಯವರಿಗೆ ಕೈತುಂಬಾ ಹಣ, ಭಾರೀ ಯಶಸ್ಸು


ಕುಂಭ ರಾಶಿ: 
2023ರಲ್ಲಿ  ಮೀನ ರಾಶಿಯಲ್ಲಿ ರಾಹುವಿನ ಪ್ರವೇಶವು ಕುಂಭ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರಿಗೆ ಹಠಾತ್ ಧನ ಯೋಗವಿದೆ.  ಅನಿರೀಕ್ಷಿತ ವಿತ್ತೀಯ ಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಯಾರಿಗಾದರೂ ಸಾಲ ನೀಡಿದ ಹಣವನ್ನು ಸಹ ಹಿಂತಿರುಗಿಸಬಹುದು. ಈ ಸಮಯದಲ್ಲಿ ವೃತ್ತಿ ರಂಗದಲ್ಲಿ ಯಶಸ್ಸಿನ ಜೊತೆಗೆ ಬಡ್ತಿ ಯೋಗವೂ ಇದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.