ರಾಜಭಂಗ ಯೋಗದ ಮೂಲಕ ಬೆಳಗುವುದು ಈ ರಾಶಿಯವರ ಭಾಗ್ಯ! ಉಕ್ಕಿ ಬರುವುದು ಧನ ಸಂಪತ್ತು
ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ರಾಜಭಂಗ ಯೋಗ ನಿರ್ಮಾಣವಾಗುತ್ತದೆ. 3 ರಾಶಿಯವರು ಮಾತ್ರ ಈ ಸಮಯದಲ್ಲಿ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 16, ರಂದು ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 7, ರಂದು, ಶುಕ್ರ ಕೂಡಾ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗೆ ಕರ್ಕಾಟಕ ರಾಶಿ ಪ್ರವೆಶೀಸಿದ ಶುಕ್ರ ಅಕ್ಟೋಬರ್ 2 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಕಾರಣದಿಂದಾಗಿ ಕರ್ಕಾಟಕದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗವಿರುತ್ತದೆ. ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ರಾಜಭಂಗ ಯೋಗ ನಿರ್ಮಾಣವಾಗುತ್ತದೆ. ಈ ಯೋಗದ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ. ಆದರೆ 3 ರಾಶಿಯವರು ಮಾತ್ರ ಈ ಸಮಯದಲ್ಲಿ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ.
ರಾಜಭಂಗ ಯೋಗವು ಈ ರಾಶಿಯವರ ಅದೃಷ್ಟ ಬೆಳಗುತ್ತದೆ :
ಮೇಷ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮೇಷ ರಾಶಿಯವರಿಗೆ ಎಲ್ಲಾ ವಿಷಯಗಳಲ್ಲಿ ಲಾಭವನ್ನು ನೀಡುತ್ತದೆ. ಈ ಜನರ ಜೀವನದಲ್ಲಿ ಭೌತಿಕ ಸಂತೋಷ ಹೆಚ್ಚಾಗುತ್ತದೆ. ಜೊತೆಗೆ ಆದಾಯವೂ ಹೆಚ್ಚುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಹೊಂದಲು ಉತ್ತಮ ಅವಕಾಶಗಳು ಎದುರಾಗುತ್ತದೆ. ಹೊಸ ಉದ್ಯೋಗ ಪ್ರಸ್ತಾಪ ಬರಬಹುದು. ವಾಹನ-ಆಸ್ತಿ ಖರೀದಿಸುವ ಯೋಗವಿದೆ.
ಇದನ್ನೂ ಓದಿ : 50 ವರ್ಷಗಳ ನಂತರ ಒಟ್ಟಿಗೆ ಸೇರುತ್ತಿದೆ ಮೂರು ಗ್ರಹಗಳು ! ಮೂರು ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ
ಕರ್ಕಾಟಕ ರಾಶಿ : ಈ ಯೋಗವು ಕರ್ಕಾಟಕ ರಾಶಿಯವರಿಗೆ ಮಂಗಳಕರವಾಗಿರಲಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಲಾಭ ಇರುತ್ತದೆ. ಪ್ರತಿಷ್ಠೆ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಅಧಿಕಾರಿಗಳೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.
ತುಲಾ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡ ರಾಜಭಂಗ ರಾಜಯೋಗವು ತುಲಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರಿಗೆ ಇದರಿಂದ ಬಹಳಷ್ಟು ಲಾಭವಾಗಲಿದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಉನ್ನತ ಸ್ಥಾನ, ದೊಡ್ಡ ಮಟ್ಟದ ಇನ್ಕ್ರಿಮೆಂಟ್ ದೊರೆಯಬಹುದು. ಇದ್ದಕ್ಕಿದ್ದಂತೆ ಒಲಿದು ಬರುವ ಧನಲಕ್ಷ್ಮಿಯಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು.
ಇದನ್ನೂ ಓದಿ : ಮೂರು ರಾಶಿಗಳಲ್ಲಿ ಅಪರೂಪದ ರಾಜಯೋಗ! ಧನ ಧಾನ್ಯ ಹರಿಸುವಳು ಧನ ಲಕ್ಷ್ಮೀ, ಸಿರಿ ಸಂಪತ್ತಿಗೆ ಕೊರತೆಯಾಗದಂತೆ ಕಾಯುವಳು ಮಹಾಲಕ್ಷ್ಮೀ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.