Akshaya Tritiya: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ (Akshaya Tritiya) ದಿನವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯದ ಇಡೀ ದಿನ ಶುಭವಾಗಿರುತ್ತದೆ. ಹಾಗಾಗಿ, ಯಾವುದೇ ಶುಭ ಕಾರ್ಯಗಳಿಗಾಗಿ ಶುಭ ಮುಹೂರ್ತವನ್ನು ನೋಡುವ ಅಗತ್ಯವಿಲ್ಲ ಎನ್ನಲಾಗುತ್ತದೆ. ಈ ಬಾರಿ ಬರೋಬ್ಬರಿ ನೂರು ವರ್ಷಗಳ ಬಳಿಕ ಅಕ್ಷಯ ತೃತೀಯದಲ್ಲಿ ಶುಭಕರ ಗಜಕೇಸರಿ ಯೋಗ (Gajakesari Yoga) ಮತ್ತು ಶಶ ಯೋಗಗಳು (Shasha Yoga) ರೂಪುಗೊಳ್ಳುತ್ತಿವೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ (Jyotishya Shastra) ಪ್ರಕಾರ,  ಅಕ್ಷಯ ತೃತೀಯದಂದು ಗಜಕೇಸರಿ ಯೋಗ ಮತ್ತು ಶಶ ಯೋಗದ ರಚನೆಯು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು ಅವರ ಜೀವನದಲ್ಲಿ ಸುವರ್ಣ ಯುಗ ಆರಂಭವಾಗಲಿದೆ ಎಂದು ನಂಬಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯೋಣ... 


ಇದನ್ನೂ ಓದಿ- Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ತುಂಬುತ್ತೆ ಖಜಾನೆ


ಅಕ್ಷಯ ತೃತೀಯದಲ್ಲಿ ಅಪರೂಪದ ಯೋಗಗಳ ನಿರ್ಮಾಣ: ಈ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭ:- 
ಮೇಷ ರಾಶಿ: 

ಅಕ್ಷಯ ತೃತೀಯ ದಿನದಂದು ರಚನೆಯಾಗುತ್ತಿರುವ ಗಜಕೇಸರಿ ಯೋಗ (Gajakesari Yoga) ಮತ್ತು ಶಶ ಯೋಗಗಳು ಮೇಷ ರಾಶಿಯ ಜನರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿಯ ವಾತಾವರಣ ಇರಲಿದೆ. 


ವೃಷಭ ರಾಶಿ: 
ನೂರು ವರ್ಷಗಳ ಬಳಿಕ ಅಕ್ಷಯ ತೃತೀಯ ದಿನದಂದು ನಿರ್ಮಾಣವಾಗುತ್ತಿರುವ ಶುಭ ಯೋಗಗಳು (Shubha Yogas) ವೃಷಭ ರಾಶಿಯವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ. ಅಕ್ಷಯ ತೃತೀಯ ದಿನದಿಂದ ವೃಷಭ ರಾಶಿಯವರಿಗೆ ತಾಯಿ ಲಕ್ಷ್ಮಿ ಆಶೀರ್ವಾದ ದೊರೆಯಲಿದ್ದು ಕೈ ಹಾಕುವ ಕೆಲಸಗಳಲ್ಲಿ ನಿಮ್ಮ ಊಹೆಗೂ ಮೀರಿದ ಫಲಗಳನ್ನು ಕಾಣುವಿರಿ. ಜೀವಂದಲ್ಲಿ ಪ್ರಗತಿಯ ಹೊಸ ಹಾದಿ ತೆರೆಯಲಿದೆ. ಒಟ್ಟಾರೆಯಾಗಿ, ನಿಮ್ಮ ಜೀವನದಲ್ಲಿ ನಾಳೆಯಿಂದ ಸುವರ್ಣ ಸಮಯ ಆರಂಭವಾಗಲಿದೆ ಎಂತಲೇ ಹೇಳಬಹುದು. 


ಇದನ್ನೂ ಓದಿ- Akshaya Tritiya 2024: ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸುವುದು ಏಕೆ?


ಮೀನ ರಾಶಿ: 
2024ರ ಅಕ್ಷಯ ತೃತೀಯದಲ್ಲಿ (Akshaya Tritiya) ರಚನೆಯಾಗುತ್ತಿರುವ ಗಜಕೇಸರಿ ಮತ್ತು ಶಶ ಯೋಗಗಳು ಮೀನ ರಾಶಿಯ ಜನರ ಜೀವನದಲ್ಲಿ ಅಪಾರ ಹಣ, ಆಸ್ತಿ, ಸ್ಥಾನಮಾನ, ಪ್ರತಿಷ್ಠೆಯನ್ನು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ಜೀವನದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.