Horoscope Today: ಶನಿದೇವನ ಕೃಪಾದೃಷ್ಟಿಯಿಂದ ಇಂದು ಈ ರಾಶಿಗೆ ಹಣದ ಮಳೆ-ವೃತ್ತಿಯಲ್ಲಿ ಇನ್ಕ್ರಿಮೆಂಟ್ ಭಾಗ್ಯ
Horoscope Today 05-08-2023: ಮೇಷ ರಾಶಿಯ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ವ್ಯಾಪಾರ ವರ್ಗವು ಅನುಭವಿ ವ್ಯಕ್ತಿಯ ಸಲಹೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
Horoscope Today 05-08-2023, Rashifal in Kannada: ಶನಿವಾರದಂದು ಸಿಂಹ ರಾಶಿಗೆ ಪ್ರಮುಖ ಅವಕಾಶ ಬರಲಿದೆ. ಅದರ ಮೂಲಕ ಜೀವನ ಬೆಳಗಲಿದೆ. ಕುಂಭ ರಾಶಿಯ ಜನರ ವ್ಯವಹಾರದಲ್ಲಿ ಏರಿಳಿತದ ಕಾಣಲಿದೆ. ಮೀನ ರಾಶಿಯ ಜನರಿಗೆ ದಿನಾಂತ್ಯಕ್ಕೆ ಶುಭ ಸುದ್ದಿ ಸಿಗಲಿದೆ.
ಇದನ್ನೂ ಓದಿ: ಮುಂದಿನ 2 ವರ್ಷ ಈ ರಾಶಿಯ ಕೈಹಿಡಿದು ನಡೆಸುವಳು ಧನಲಕ್ಷ್ಮೀ: ಹಣ-ಯಶಸ್ಸಿನ ಸುರಿಮಳೆ: ಉದ್ಯೋಗದಲ್ಲಿ ಬಡ್ತಿ!
ಮೇಷ ರಾಶಿ - ಮೇಷ ರಾಶಿಯ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ವ್ಯಾಪಾರ ವರ್ಗವು ಅನುಭವಿ ವ್ಯಕ್ತಿಯ ಸಲಹೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಷಭ ರಾಶಿ - ಈ ರಾಶಿಯ ಉದ್ಯೋಗದಲ್ಲಿರುವವರು ತಮ್ಮ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಗಂಭೀರವಾಗಿ ಅನುಸರಿಸಬೇಕು. ಪ್ರಶಂಸೆಗೆ ಒಳಗಾಗಬಹುದು. ವ್ಯಾಪಾರ ವಿಷಯಗಳಲ್ಲಿ ಪರಿಸ್ಥಿತಿಯು ಒಂದೇ ಆಗಿರುತ್ತದೆ, ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು.
ಮಿಥುನ - ಈ ರಾಶಿಯ ಜನರು ಉದ್ಯೋಗದ ಶುಭ ಸುದ್ದಿಯನ್ನು ಪಡೆಯಬಹುದು. ವ್ಯಾಪಾರಕ್ಕೆ ಪ್ರಾಮುಖ್ಯತೆ ನೀಡಿ, ಶನಿ ಆಶೀರ್ವಾದ ನಿಮ್ಮ ಕುಟುಂಬದ ಮೇಲಿದೆ.
ಕರ್ಕಾಟಕ ರಾಶಿ – ಈ ರಾಶಿಯ ಜನರು ಎಚ್ಚರದಿಂದಿರಿ. ಜೊತೆಗೆ ಪ್ರಾಮಾಣಿಕವಾಗಿರಬೇಕು. ಸಂಬಂಧದ ಬಲವನ್ನು ಹೆಚ್ಚಿಸಿಕೊಳ್ಳಿ. ಜೊತೆಗೆ ಮನೆಯ ವಾತಾವರಣವನ್ನು ಸಂತೋಷದಲ್ಲಿರುತ್ತದೆ.
ಸಿಂಹ ರಾಶಿ: ಈ ರಾಶಿಯ ಜನರಿಗೆ ಇಂದು ಧನಲಾಭವಾಗಲಿದೆ. ಕೆಲಸ ಮಾಡುವಾಗ ಒಗ್ಗಟ್ಟಿರಲಿ. ಆರೋಗ್ಯದ ವಿಷಯದಲ್ಲಿ ಕೊಂಚ ಕಾಳಜಿ ವಹಿಸುವುದು ಅವಶ್ಯಕ.
ಕನ್ಯಾ ರಾಶಿ - ಕನ್ಯಾರಾಶಿ ಜನರು ವ್ಯಾಪಾರದ ವಿಸ್ತರಣೆಗಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕಠಿಣ ಪರಿಶ್ರಮದ ಆಧಾರದ ಮೇಲೆ ಮಾತ್ರ ವ್ಯವಹಾರದ ವಿಸ್ತರಣೆ ಸಾಧ್ಯ. ಮನಸ್ಸಿನ ಏಕಾಗ್ರತೆಗೆ ಧ್ಯಾನ ಬಹಳ ಮುಖ್ಯ,
ತುಲಾ - ಈ ರಾಶಿಯ ಜನರು ಅಪಖ್ಯಾತಿಗೆ ತುತ್ತಾಗಬಹುದು. ಧನಲಾಭ ಕಡಿಮೆಯಿರಲಿದೆ. ಯುವಕರು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರಯಾಣದಲ್ಲಿ ಎಚ್ಚರವಹಿಸಿ, ಗಾಯಗಳಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರ ಅದೃಷ್ಟ ಮತ್ತು ವೃತ್ತಿಬದುಕು ಗಟ್ಟಿಯಾಗಲಿದೆ. ವ್ಯಾಪಾರದ ವಿಸ್ತರಣೆಯೂ ಆಗಲಿದೆ. ಆರೋಗ್ಯದಲ್ಲಿ ಸಣ್ಣ ವಿಷಯಗಳ ಬಗ್ಗೆಯೂ ಗಮನಹರಿಸಿ.
ಧನು ರಾಶಿ - ಧನು ರಾಶಿಯ ಜನರು ಅಧಿಕೃತ ಕಾರ್ಯಗಳನ್ನು ಸಾಕಷ್ಟು ಸಭ್ಯತೆಯಿಂದ ಪೂರ್ಣಗೊಳಿಸುವತ್ತ ಗಮನ ಹರಿಸಬೇಕು. ಧನಲಾಭದ ಸೂಚನೆಯಿದೆ.
ಮಕರ ರಾಶಿ - ಮಕರ ರಾಶಿಯ ಜನರು ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು. ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳು ಉಂಟಾಗಬಹುದು, ಬುದ್ಧಿವಂತಿಕೆಯಿಂದ ಸಮಸ್ಯೆಗಳಿಂದ ಹೊರಬರಲು ಪ್ರಯತ್ನಿಸಿ.
ಕುಂಭ ರಾಶಿ - ಕುಂಭ ರಾಶಿಯವರಿಗೆ ಕೆಲಸದಲ್ಲಿ ಸಮಸ್ಯೆ ಎದುರಾದರೆ, ಅವುಗಳಿಂದ ಮುಕ್ತಿ ಪಡೆಯಲು ದಾರಿ ಹುಡುಕಿ, ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಜನರ ವ್ಯವಹಾರದಲ್ಲಿ ಏರಿಳಿತದ ಕಾಣಲಿದೆ. ಕೆಲವು ಒಳ್ಳೆಯ ಸುದ್ದಿಗಳು ಬರುವ ಸಾಧ್ಯತೆಯಿದೆ.
ಮೀನ ರಾಶಿ - ಮೀನ ರಾಶಿಯ ಜನರು ದಿನಾಂತ್ಯಕ್ಕೆ ಶುಭವಾರ್ತೆ ಕೇಳುವರು. ಮಾತಿನಲ್ಲಿ ಸಂಯಮವನ್ನು ಇಟ್ಟುಕೊಳ್ಳಬೇಕು. ಘರ್ಷಣೆಯ ಸಾಧ್ಯತೆಯಿದೆ, ಬೆಂಕಿ ಅಪಘಾತದ ಸಾಧ್ಯತೆಯಿದೆ.
ಇದನ್ನೂ ಓದಿ: ಯಾವುದೇ ಹಿಟ್ ಸಿನಿಮಾ ಮಾಡದೇ ಸ್ಟಾರ್ ಗಿರಿ ಪಡೆದ ನಟರ ಮಕ್ಕಳಿವರು..! ಫೋಟೋಸ್ ನೋಡಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ