Shani Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತನ ರಾಶಿ ಪರಿವರ್ತನೆಯು ಪ್ರತಿ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ನ್ಯಾಯದ ದೇವರಾದ ಶನಿಯು ಪಾಪಗಳಿಗೆ ತಕ್ಕಂತೆ ಶಿಕ್ಷೆ ನೀಡುವುದರಿಂದ ಇದನ್ನು ತೊಂದರೆ ನೀಡುವ ಗ್ರಹವೆಂತಲೂ ಕರೆಯುವುದುಂಟು. ಆದರೆ, ಶನಿ ಮಹಾತ್ಮನ ಕೃಪೆ ಇದ್ದವರಿಗೆ ಅದೃಷ್ಟದ ಭಾರೀ ಬೆಂಬಲ ದೊರೆಯಲಿದ್ದು ಜಾಕ್‌ಪಾಟ್ ಹೊಡೆಯಲಿದೆ ಎಂಬುದು ಕೂಡ ಸುಳ್ಳಲ್ಲ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು ಮೂರು ದಶಕಗಳ ಬಳಿಕ ಅಂದರೆ 30 ವರ್ಷಗಳ ಬಳಿಕ ಶನಿದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜನವರಿ 17, 2023 ರಂದು, ಶನಿಯು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಹೊಸ ವರ್ಷದಲ್ಲಿ  ಶನಿ ರಾಶಿ ಪರಿವರ್ತನೆಯಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಶಶ ಮಹಾಪುರುಷ ರಾಜಯೋಗವು ನಿರ್ಮಾಣವಾಗಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಇದನ್ನು ಮೂರು ರಾಶಿಯವರಿಗೆ ಬಹಳ ಶುಭ. ಈ ಸಮಯದಲ್ಲಿ ಅವರ ಇಷ್ಟಾರ್ಥಗಳೆಲ್ಲಾ ಈಡೇರಲಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.


ಇದನ್ನೂ ಓದಿ- Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ ಶನಿ ಕೃಪೆಯಿಂದ ಗೋಲ್ಡನ್ ಡೇಸ್


ಜನವರಿ 17ರಂದು ಶನಿ ಸಂಚಾರದಿಂದ ರೂಪುಗೊಳ್ಳಲಿದೆ ಶಶ ಮಹಾಪುರುಷ ರಾಜಯೋಗ, 3 ರಾಶಿಯವರಿಗೆ ಭಾರೀ ಅದೃಷ್ಟ:
ವೃಷಭ ರಾಶಿಯವರಿಗೆ ದೊಡ್ಡ ಹುದ್ದೆ ಪ್ರಾಪ್ತಿ:

ಮೂರು ದಶಕಗಳ ಬಳಿಕ ಕುಂಭ ರಾಶಿಗೆ ಶನಿ ಸಂಚಾರದಿಂದ ರೂಪುಗೊಳ್ಳುತ್ತಿರುವ ಶಶಮಹಾಪುರುಷ ರಾಜಯೋಗದ ಪರಿಣಾಮವಾಗಿ ವೃಷಭ ರಾಶಿಯವರಿಗೆ ಸುವರ್ಣ ಸಮಯ ಆರಂಭವಾಗಲಿದೆ. ವಾಸ್ತವವಾಗಿ, ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಮತ್ತು ಶನಿ ಇಬ್ಬರೂ ಅತ್ಯುತ್ತಮ ಸ್ನೇಹಿತರು. ಹಾಗಾಗಿ, ಈ ಶನಿಯಿಂದ ರೂಪುಗೊಳ್ಳುತ್ತಿರುವ ಈ ರಾಜಯೋಗವು ವೃಷಭ ರಾಶಿಯವರಿಗೆ ವಿದೇಶ ವ್ಯವಹಾರಗಳಲ್ಲಿ ಭಾರೀ ಲಾಭವನ್ನು ತರಲಿದೆ. ಉದ್ಯೋಗಸ್ಥರಿಗೆ ದೊಡ್ಡ ಹುದ್ದೆ ಪ್ರಾಪ್ತಿಯಾಗಲಿದೆ.ಈ ಸಮಯದಲ್ಲಿ ಇವರ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ.


ತುಲಾ ರಾಶಿಯವರಿಗೆ ಸರ್ಕಾರಿ ವಲಯದಿಂದ ಲಾಭ:
ತುಲಾ ರಾಶಿಯವರಿಗೂ ಶುಕ್ರನೇ ಅಧಿಪತಿ. ಹಾಗಾಗಿ,  ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ಮಹಾಪುರುಷ ರಾಜಯೋಗವು ತುಲಾ ರಾಶಿಯವರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿದ್ದಾನೆ. ಈ ಸಮಯದಲ್ಲಿ ಈ ರಾಶಿಯವರಿಗೆ ಸರ್ಕಾರಿ ವಲಯದಿಂದ ಭಾರೀ ಲಾಭವಾಗಲಿದೆ. ಹೊಸ ಕೆಲಸವನ್ನು ಆರಂಭಿಸಲು ತುಂಬಾ ಮಂಗಳಕರ ಸಮಯ. 


ಇದನ್ನೂ ಓದಿ- Shani Gochar 2023: 30 ವರ್ಷಗಳ ಬಳಿಕ ಈ ರಾಶಿಯವರಿಗೆ ವಿಶೇಷ ಕೃಪೆ ತೋರಲಿದ್ದಾನೆ ಶನಿ ದೇವ


ಧನು ರಾಶಿಯವರಿಗೆ ಉತ್ತಮ ಯಶಸ್ಸು:
ಶನಿ ಸಂಕ್ರಮಣದಿಂದ ರೂಪುಗೊಳ್ಳಲಿರುವ ಶಶ ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಬಲವಾದ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದರೊಂದಿಗೆ ಅತ್ಯಂತ ಕಷ್ಟಕರ ಕೆಲಸಗಳೂ ಕೂಡ ನಿರಾಯಾಸವಾಗಿ ಪೂರ್ಣಗೊಳ್ಳಲಿದ್ದು ಸಮಾಜದಲ್ಲಿ ಗೌರವವೂ ಪ್ರಾಪ್ತಿಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.