Vakri Shani Gochar 2022 : ಜ್ಯೋತಿಷ್ಯದ ಪ್ರಕಾರ, ಶನಿಯು ಎರಡೂವರೆ ವರ್ಷಗಳ ನಂತರ  ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಆದರೆ ವಿಶೇಷ ಸಂದರ್ಭಗಳಲ್ಲಿ, ಶನಿಯು ಈ ಸಮಯಕ್ಕಿಂತ ಮುಂಚೆಯೇ ಸಾಗುತ್ತದೆ. ಜುಲೈ 12 ರಂದು, ಶನಿಯು ಹಿಮ್ಮುಖವಾಗಿ ಚಲಿಸುತ್ತಾ, ಕುಂಭ ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು 23 ಅಕ್ಟೋಬರ್ 2022 ರವರೆಗೆ ಈ ಸ್ಥಾನದಲ್ಲಿರುತ್ತಾನೆ. ಇದರಿಂದ ಈ  3 ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗ ರೂಪಗೊಳ್ಳಲಿದೆ. ಈ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ : ಮಹಾಪುರುಷ ಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಇವರಿಗೆ ಇದ್ದಕ್ಕಿದ್ದಂತೆ ಹಣ ಹರಿದು ಬರುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ಹೊಸ ಉದ್ಯೋಗ ಸಿಗಬಹುದು. ಪ್ರಸ್ತುತ ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಂಪೂರ್ಣ ಅವಕಾಶಗಳಿವೆ. ಆದಾಯ ಹೆಚ್ಚಲಿದೆ. ಒಟ್ಟಾರೆಯಾಗಿ, ಈ ಸಮಯವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : Samsaptak Yog : ಕರ್ಕ ರಾಶಿಗೆ ಸೂರ್ಯನ ಪ್ರವೇಶ : ಈ 4 ರಾಶಿಯವರ ಮೇಲಿದೆ ದುಷ್ಪರಿಣಾಮ!


ಮಿಥುನ ರಾಶಿ : ಈ ಮಿಥುನ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ವಿಶೇಷವಾಗಿ ಮಿಥುನ ರಾಶಿಯ ಉದ್ಯಮಿಗಳು ದೊಡ್ಡ ಲಾಭವನ್ನು ಪಡೆಯುತ್ತಾರೆ. ನೀವು ಹಣ ಗಳಿಸುತ್ತೀರಿ, ಹಾಗೆ ಲಾಭ ಹೆಚ್ಚಾಗಲಿದೆ. ನೀವು ಗೌರವವನ್ನು ಪಡೆಯುತ್ತೀರಿ. ಈ ಸಮಯವು ಕೆಲವು ಸಾಧನೆಗಳನ್ನು ತರುತ್ತದೆ. ರಾಜಕೀಯ ಕ್ಷೇತ್ರದಿಂದ ಲಾಭವಾಗಬಹುದು. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವಿದೇಶದಲ್ಲಿ ಕೆಲಸ ಮಾಡುವವರಿಗೂ ದೊಡ್ಡ ಲಾಭ ಸಿಗುವ ಸಾಧ್ಯತೆ ಇದೆ.


ಕನ್ಯಾ ರಾಶಿ : ಈ ರಾಜಯೋಗವು ಕನ್ಯಾ ರಾಶಿಯವರಿಗೆ ಹಠಾತ್ ಧನಲಾಭವನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ಅದರಲ್ಲೂ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಸ್ಥಳದಲ್ಲಿ ಪ್ರವೇಶ ಪಡೆಯಬಹುದು. ಪ್ರವಾಸಕ್ಕೆ ಹೋಗಬಹುದು.


ಇದನ್ನೂ ಓದಿ : Shani Dev : ಶ್ರಾವಣ ಎರಡನೇ ಶನಿವಾರದಂದು ಈ 5 ರಾಶಿಯವರು ತಪ್ಪದೆ ಮಾಡಿ ಈ ಕೆಲಸ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.