September 2023 Love Horoscope : ಅನೇಕ ಜನರು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದು, ಅದರಿಂದ ತಿಳಿದು ಬರುವ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ. ಕೆಲವು ಜನರು ವೈಯಕ್ತಿಕ ಜೀವನದಲ್ಲಿ ಬೆಳವಣಿಗೆಗಳನ್ನು ಊಹಿಸಲು, ಮುಂಬರುವ ಸಮಸ್ಯೆ ತಿಳಿಯಲು, ಇರುವ ಸಮಸ್ಯೆಗೆ ಪರಿಹಾರ ತಿಳಿಯಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ.. ಈ ಪೈಕಿ ಪ್ರೇಮಿಗಳೂ ಸಹ ಲವ್‌ ಚಾತಕದ ಮೊರೆ ಹೋಗಿ ತಮ್ಮ ಪ್ರೇಮ ಜೀವನದ ಬಗ್ಗೆ ತಿಳಿಯುತ್ತಾರೆ. ಸಧ್ಯ ಈ ತಿಂಗಳು 12 ರಾಶಿಚಕ್ರದವರ ಪ್ರೀತಿಯ ಜೀವನ ಹೇಗಿರುತ್ತದೆ..? ಯಾರು ಲವ್‌ನಲ್ಲಿ ಬೀಳುತ್ತಾರೆ ಅಂತ ತಿಳಿಯೋಣ.


COMMERCIAL BREAK
SCROLL TO CONTINUE READING

ಮೇಷ : ಸೆಪ್ಟೆಂಬರ್‌ನಲ್ಲಿ, ಮೇಷ ರಾಶಿಯು ಅವರು ತಮ್ಮ ಹೃದಯದ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಸದಾ ಕರ್ತವ್ಯ ಬದ್ಧರಾಗಿರುವ ಇವರ ಪ್ರೇಮ ಜೀವನ ಸ್ವಲ್ಪಮಟ್ಟಿಗೆ ಉತ್ತಮವಾಗಿರಲಿದೆ. ಅವರು ತಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಇದರಿಂದ ಸಂತೋಷದಾಯಕ ಅನುಭವ ಪಡೆಯುತ್ತಾರೆ.


ಇದನ್ನೂ ಓದಿ: ಎಂಥಾ ಸಂಕಷ್ಟದಲ್ಲೂ ಈ ನಕ್ಷತ್ರದಲ್ಲಿ ಜನಿಸಿದವರ ಕೈಬಿಡಲ್ಲ ಪರಮೇಶ್ವರ: ಮೀನಾಮೇಷ ಎಣಿಸದೆ ಸಕಲ ಸಂಪತ್ತು ಕರುಣಿತ್ತಾರೆ ವಿಶ್ವಾಂಭರ


ವೃಷಭ ರಾಶಿ: ಈ ರಾಶಿಯವರು ಸೆಪ್ಟೆಂಬರ್‌ನಲ್ಲಿ ಲವ್‌ನಲ್ಲಿ ಬಿಳುವ ಸಾಧ್ಯತೆ ಇದೆ. ಕೆಲವೊಮ್ಮೆ ತಮ್ಮನ್ನು ನಂಬದ ವೃಷಭ ರಾಶಿಯವರು ಈ ತಿಂಗಳು ತಮ್ಮ ಪ್ರೀತಿಪಾತ್ರರ ಮೇಲೆ ನಂಬಿಕೆ ಇಡುತ್ತಾರೆ. ಲವ್ ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿಕೊಳ್ಳುತ್ತಾರೆ. 


ಮಿಥುನ ರಾಶಿ : ಈ ತಿಂಗಳು, ಮಿಥುನ ರಾಶಿಯವರು ಜೀವನ ಮತ್ತು ಪ್ರೀತಿಯ ಪಾಠಗಳನ್ನು ಕಲಿಯಲಿದ್ದಾರೆ. ಪ್ರೀತಿಯಲ್ಲಿ ಜಗಳವಾಗುವುದನ್ನು ತಪ್ಪಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ಇದು ಅವರ ಪ್ರೀತಿಪಾತ್ರರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 


ಕರ್ಕಾಟಕ ರಾಶಿ : ಸೆಪ್ಟೆಂಬರ್ ತಿಂಗಳು ಕರ್ಕಾಟಕ ರಾಶಿಯವರಿಗೆ ಉಡುಗೊರೆ ಬರುತ್ತವೆ. ಈ ರಾಶಿಚಕ್ರದ ಚಿಹ್ನೆಗಳು ತಮ್ಮ ಗೆಳೆಯ ಅಥವಾ ಗೆಳತಿಗೆ ಭಾವನಾತ್ಮಕವಾಗಿ ಹತ್ತಿರವಾಗುವ ಸಾಧ್ಯತೆ ಹೆಚ್ಚು. 


ಇದನ್ನೂ ಓದಿ: ಈ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯಬೇಕಾದರೆ ಇವರು ಚಿನ್ನದ ಉಂಗುರ ಧರಿಸಲೇ ಬೇಕು


ಸಿಂಹ ರಾಶಿ : ಸೆಪ್ಟೆಂಬರ್ ಸಿಂಹ ರಾಶಿಯವರಿಗೆ ಪ್ರೀತಿಯ ತಿಂಗಳು. ಸಿಂಹ ರಾಶಿಯವರು ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸಲು ಮತ್ತು ವಿಶೇಷ ಭಾವನೆ ಮೂಡಿಸಲು ಈ ಪ್ರಯತ್ನಿಸುತ್ತಾರೆ.


ಕನ್ಯಾರಾಶಿ : ಈ ತಿಂಗಳು, ಕನ್ಯಾ ರಾಶಿಯವರು ತಮ್ಮ ಪ್ರೀತಿಪಾತ್ರರ ಜೊತೆ ಕಾಲಕಾಲಕ್ಕೆ ಮನಸ್ತಾಪ ಉಂಟು ಮಾಡಿಕೊಳ್ಳುತ್ತಾರೆ. ಆದರೆ, ಕಾಳಜಿ ವಹಿಸಿಕೊಂಡು ಜಗಳ ಮಾಡದೆ ಸರಿಪಡಿಸಿಕೊಳ್ಳಬೇಕು. 


ತುಲಾ ರಾಶಿ : ಎಂದಿನಂತೆ, ತುಲಾ ರಾಶಿಯವರ ಪ್ರೇಮ ಜೀವನವು ಈ ತಿಂಗಳು ಶಾಂತವಾಗಿರುತ್ತದೆ. ಯಾವುದೇ ಅಸಮಾಧಾನವಿದ್ದರೆ, ಜಗಳಗಳನ್ನು ತಪ್ಪಿಸಲು ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡಿ. 


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಈ ತಿಂಗಳು ತಮ್ಮ ಹೃದಯ ಹೇಳುವುದನ್ನು ಕೇಳಲಿದ್ದಾರೆ. ಅವರು ತಮ್ಮ ಪ್ರೀತಿಪಾತ್ರರ ಜೊತೆಗೆ ಅವರು ಹಿಂದೆಂದೂ ಯಾರಿಗೂ ಹೇಳದ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. 


ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಈ ರಾಶಿಯವರ ಸುವರ್ಣ ದಿನಗಳು ಆರಂಭ ! ಸೋಲೆಲ್ಲಾ ಗೆಲುವಾಗುವ ಸಮಯ


ಮಕರ ರಾಶಿ : ಈ ರಾಶಿಯವರು ಈ ತಿಂಗಳು ತಮ್ಮ ಪ್ರೇಮ ಜೀವನದಲ್ಲಿ ಪ್ರಾಯೋಗಿಕ ವಿಧಾನಗಳನ್ನು ಅನುಸರಿಸುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಜೀವನದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಾರೆ. 


ಕುಂಭ ರಾಶಿ : ಈ ತಿಂಗಳು ತಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿದುಕೊಳ್ಳುವ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಭೌತಿಕತೆಯನ್ನು ಮೀರಿ, ಅವರು ತಮ್ಮ ಗೆಳೆಯ/ಗೆಳತಿಯೊಂದಿಗೆ ಭಾವನಾತ್ಮಕ ಬಂಧವನ್ನು ಸೃಷ್ಟಿಸಲು ಬಯಸುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ತಮ್ಮ ಆತ್ಮೀಯರೊಂದಿಗೆ ಚರ್ಚಿಸಲಿದ್ದಾರೆ. 


ಮೀನ ರಾಶಿ : ಈ ರಾಶಿಯವರು ಇತರರನ್ನು ಅರ್ಥಮಾಡಿಕೊಳ್ಳುವಲ್ಲಿ ಉತ್ತಮರು. ತಮ್ಮ ಪ್ರೀತಿಪಾತ್ರರನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪ್ರೇಮ ಜೀವನಕ್ಕೆ ಆದ್ಯತೆ ನೀಡುತ್ತಾರೆ. ಕೆಲವು ಕಷ್ಟದ ಕ್ಷಣಗಳು ಬಂದರೂ ಅದನ್ನು ಬದಿಗೊತ್ತಿ ಶುದ್ಧ ಪ್ರೀತಿಯಲ್ಲಿ ಮಾತ್ರ ಪ್ರೀತಿಸುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.