ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು
ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.
ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.
ಇದನ್ನೂ ಓದಿ: ಹಾಸನದಲ್ಲಿ ಖಾಕಿ ವೇಷ ಧರಿಸಿ ಮಹಿಳೆಯಿಂದ ಮಹಾಮೋಸ
ಹಲವಾರು ಸಹಸ್ರಮಾನಗಳ ಹಿಂದೆ, ಶಿವನು ತನ್ನ ಮೊದಲ ಶಿಷ್ಯರಾದ ಸಪ್ತಋಷಿಗಳಿಗೆ ದೇವಿಯ ಸಮ್ಮುಖದಲ್ಲಿ ಈ ಪ್ರಕ್ರಿಯೆಯನ್ನು ಕಲಿಸಿದನೆಂದು ಹೇಳಲಾಗುತ್ತದೆ.ಸಪ್ತಋಷಿಗಳು ಪ್ರಪಂಚದ ಮೂಲೆ ಮೂಲೆಗಳಿಗೆ ಸಾಗಿ ಯೋಗ ವಿಜ್ಞಾನವನ್ನು ಜನರಿಗೆ ಅರ್ಪಿಸಲು ಪ್ರಯಾಣಿಸುತ್ತಿರುವಾಗ, ಶಿವನ ಉಪಸ್ಥಿತಿಗಾಗಿ ಮತ್ತು ಅವನ ಅನುಗ್ರಹವನ್ನು ಆಹ್ವಾನಿಸುವ ಸಾಧನವಾಗಿ ಇದನ್ನು ಅವರಿಗೆ ಅರ್ಪಿಸಲಾಗಿತ್ತು.
ಇದನ್ನೂ ಓದಿ: ಪ್ರಿಯಾಂಕ ಜಾರಕಿಹೊಳಿಗೆ ಚಿಕ್ಕೋಡಿ ಲೋಕಸಭೆ ಟಿಕೆಟ್..!
ಸಾವಿರಾರು ವರ್ಷಗಳಿಂದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ಪ್ರಕ್ರಿಯೆಯನ್ನು ಇನ್ನೂ ಅಷ್ಟೇ ಪಾವಿತ್ರ್ಯತೆಯಲ್ಲಿ ಸಂರಕ್ಷಿಸಲಾಗಿದೆ. ಪ್ರತಿ ವರ್ಷ, ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಡುತ್ತಾರೆ. ಇದು ಕಾಶಿ ದೇವಾಲಯದ ಹೊರಗೆ ಈ ಪ್ರಕ್ರಿಯೆಯನ್ನು ನಡೆಸುವ ಏಕೈಕ ನಿದರ್ಶನವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.