Shani-Chandra Yuti: ಜ್ಯೋತಿಷ್ಯದಲ್ಲಿ ಚಂದ್ರ ಗ್ರಹವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಚಂದ್ರನು ಅತ್ಯಂತ ವೇಗವಾಗಿ ಚಲಿಸುವ ಗ್ರಹ ಕೂಡ ಹೌದು. ಪ್ರತಿ ತಿಂಗಳ 10 ದಿನಗಳಿಗೊಮ್ಮೆ ಚಂದ್ರನು ಬೇರೆ ರಾಶಿಗೆ ಕಾಲಿಡುತ್ತಾನೆ. ಅಂತೆಯೇ ಇಂದು ಮುಂಜಾನೆ 06:02ಕ್ಕೆ ಮಕರ ರಾಶಿಯಿಂದ ಹೊರಟ ಚಂದ್ರನು ಕುಂಭ ರಾಶಿಯನ್ನು ಪ್ರವೇಶಿಸಿ ಎರಡೂವರೆ ದಿನಗಳ ಕಾಲ ಈ ರಾಶಿಯಲ್ಲಿ ಇರಲಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಪ್ಪು ಮಾಡಿದ್ರೂ ಈ ರಾಶಿಯವರನ್ನ ಬಿಟ್ಟುಕೊಡಲ್ಲ ಶನಿದೇವ! ಅಷ್ಟೈಶ್ವರ್ಯ ಕರುಣಿಸಿ ಜೀವನ ಬೆಳಗುತ್ತಾನೆ ಸೂರ್ಯಪುತ್ರ!


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹ ಕೂಡ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದ ವಿಷ ಯೋಗವು ಉಂಟಾಗಲಿದೆ. ಆದರೆ ಕೆಲವೊಂದು ರಾಶಿಗಳು ಎಚ್ಚರ ವಹಿಸುವ ಮೂಲಕ ತಮ್ಮ ಕಾರ್ಯ ಸಿದ್ಧಿ ಮಾಡಿಕೊಳ್ಳಬಹುದು.


ಕನ್ಯಾ ರಾಶಿ: ಕನ್ಯಾ ರಾಶಿಯವರು ವಿಷ ಯೋಗದ ಸಮಯದಲ್ಲಿ ಶ್ರದ್ಧೆ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ನೀವು ಅಂದುಕೊಂಡ ಕಾರ್ಯ ಸಾಕಾರಗೊಳ್ಳಲಿದೆ. ಜೊತೆಗೆ ನಿಮ್ಮ ಗುರಿ ಸಾಧಿಸಲು ನಿಮಗೆ ಸಹಾಯ ಮಾಡಿತ್ತದೆ.  


ವೃಶ್ಚಿಕ ರಾಶಿ: ವಿಷ ಯೋಗದ ಸಮಯದಲ್ಲಿ ಸಮಸ್ಯೆಗಳು ಎದುರಾದರೂ ಸಹ ಮುನ್ನಡೆದರೆ ಒಳಿತು ಲಭಿಸುತ್ತದೆ. ದೃತಿಗೆಡದೆ ಕೆಲಸ ಮಾಡಿ. ಭವಿಷ್ಯದಲ್ಲಿ ಸೋಲೆಂಬುದು ಬಳಿಯೂ ಸುಳಿಯದು.


ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ! ರಾಜರಂತಹ ಬದುಕು… ಹೊಡೆಯಲಿದೆ ಬಂಪರ್ ಲಾಟರಿ


ಕುಂಭ ರಾಶಿ: ಶನಿ ಮತ್ತು ಚಂದ್ರನ ಸಂಯೋಗದಿಂದ ಕುಂಭ ರಾಶಿಯ ಜನರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಒಂದು ಬಾರಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು ಎಂಬಂತೆ, ಭವಿಷ್ಯದಲ್ಲಿ ಅಭಿವೃದ್ಧಿ ನಡೆಯಲಿದೆ. ಮುಂದೆ ಧನಲಾಭ, ಯಶಸ್ಸು ಹುಡುಕಿಕೊಂಡು ಬರಲಿದೆ.


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.