ಬೆಂಗಳೂರು : ಹೊಸ ವರ್ಷ 2023 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದಲ್ಲಿ ಕೆಲವು ಪ್ರಮುಖ ಗ್ರಹಗಳ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಇಲ್ಲಿ ಕರ್ಮ ಫಲದಾತನಾದ ಶನೀಶ್ವರನಿಗೆ ಪ್ರಮುಖ ಸ್ಥಾನ. ಶನಿ ದೇವನು ನ್ಯಾಯ ಮತ್ತು ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ ಎನ್ನುವುದು ನಂಬಿಕೆ. ಹೊಸ ವರ್ಷ ಆರಂಭದಲ್ಲಿಯೇ ಅಂದರೆ  ಜನವರಿ 17, 2023 ರಂದು ಶನಿ ಮಹಾತ್ಮ ಕುಂಭ ರಾಶಿಗೆ ಕಾಲಿಡಲಿದ್ದಾನೆ.  ಕುಂಭ ರಾಶಿ ಶನಿ ಮಹಾತ್ಮನ ಸ್ವಂತ ರಾಶಿ. 30 ವರ್ಷಗಳ ಬಳಿಕ ಶನಿದೇವ ತನ್ನದೇ ರಾಶಿಯಾಗಿರುವ ಕುಂಭವನ್ನು ಪ್ರವೇಶಿಸುತ್ತಿದ್ದಾನೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ ವಿಪರೀತ ರಾಜಯೋಗ ನಿರ್ಮಾಣವಾಗುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.  ಅದರಲ್ಲೂ ಮೂರು ರಾಶಿಯವರ ಮೇಲೆ ಈ ವಿಪರೀತ ರಾಜಯೋಗ ಅತ್ಯಂತ ಮಂಗಳಕರ ಪರಿಣಾಮವನ್ನು ಉಂಟು ಮಾಡಲಿದೆ. 


COMMERCIAL BREAK
SCROLL TO CONTINUE READING

ವೃಷಭ ರಾಶಿ :
ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಶುಕ್ರ ಸಂತೋಷ, ವೈಭವ ಮತ್ತು ಎಲ್ಲಾ ರೀತಿಯ ಸೌಕರ್ಯಗಳನ್ನು ಕರುಣಿಸುತ್ತಾನೆ. ಜನವರಿ 17, 2023 ರಂದು, ಶನಿಯ ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ರೂಪುಗೊಳ್ಳುವ ವಿಪರೀತ ರಾಜಯೋಗದಿಂದ ವೃಷಭ ರಾಶಿಯವರಿಗೆ ಶುಭ ಫಲ ಸಿಗಲಿದೆ.  ಇವರ ಜಾತಕದಲ್ಲಿ, ಈ ಸಂಕ್ರಮವು 10 ನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯನ್ನು ಉದ್ಯೋಗ ಮತ್ತು ಕೆಲಸದ ಕ್ಷೇತ್ರವೆಂದು ಕರೆಯಲಾಗುತ್ತದೆ. ವೃಷಭ ರಾಶಿಯವರಿಗೆ ಹೊಸ ವರ್ಷದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಉತ್ತಮ ಹಣ ಗಳಿಸುವ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. 


ಇದನ್ನೂ ಓದಿ : Chanakya Niti : ಸಂತೋಷದ ಕುಟುಂಬಕ್ಕಾಗಿ ಚಾಣಕ್ಯನ ಈ 4 ನೀತಿಗಳನ್ನು ಅನುಸರಿಸಿ!


ಮೇಷ ರಾಶಿ  :
ಹೊಸ ವರ್ಷದಲ್ಲಿ ಈ ರಾಶಿಯವರ ಜಾತಕದ ಐದನೇ ಮನೆಯಲ್ಲಿ ವಿಪರೀತ ರಾಜಯೋಗ ರೂಪುಗೊಳ್ಳುತ್ತದೆ. ಜಾತಕದ ಐದನೇ ಸ್ಥಾನವನ್ನು ಪ್ರೀತಿ-ಸಂಬಂಧ ಮತ್ತು ಮಕ್ಕಳು ಎಂದು ಕರೆಯಲಾಗುತ್ತದೆ. ಹೊಸ ವರ್ಷದಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಹೊಸ ವರ್ಷದಲ್ಲಿ, ನಿಮ್ಮ ಭೌತಿಕ ಸಂತೋಷ  ಹೆಚ್ಚಾಗಲಿದೆ. 


ಧನು ರಾಶಿ :
ಧನು ರಾಶಿಯವರ ಸಾಡೆಸಾತಿ  2023ರಲ್ಲಿ ಅಂತ್ಯಗೊಳ್ಳಲಿದೆ. ಹೊಸ ವರ್ಷದಲ್ಲಿ ರೂಪುಗೊಳ್ಳುತ್ತಿರುವ ವಿಪರೀತ ರಾಜಯೋಗವು  ಶುಭ ಸಂಕೇತವನ್ನು ನೀಡಲಿದೆ. 2023 ರಲ್ಲಿ ಶನಿದೇವನು ಈ ರಾಶಿಯ ಮೂರನೇ ಮನೆಯಲ್ಲಿ ಸಾಗುತ್ತಾನೆ. ಜಾತಕದ ಮೂರನೇ ಸ್ಥಾನವು ಧೈರ್ಯ ಮತ್ತು ಶೌರ್ಯದ ಪ್ರತೀಕವಾಗಿದೆ. ಈ ಕಾರಣದಿಂದಾಗಿ ಇಡೀ ವರ್ಷ ಹೊಸ ರೀತಿಯ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ  ಬಡ್ತಿ ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದೆ.  ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಚುರುಕು ಪಡೆಯಲಿವೆ. 


ಇದನ್ನೂ ಓದಿ :  Vastu Shastra : ಈ ಉಪ್ಪು ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ, ಹಣದ ಭರ್ಜರಿ ಲಾಭ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.