Shani Asta Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಶನಿಯ ಸಂಚಾರದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿ 17 ರಂದು  ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿಯು ಇದೀಗ ಈ ತಿಂಗಳಾಂತ್ಯದಲ್ಲಿ ಅಂದರೆ ಜನವರಿ 30, 2023 ರಂದು ಅಸ್ತಮಿಸಲಿದ್ದಾನೆ. ಕೇವಲ 15 ದಿನಗಳ ಅಂತರದಲ್ಲಿ ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಆದಾಗ್ಯೂ, ಈ ಸಮಯದಲ್ಲಿ ಶನಿ ದೇವನು ನಾಲ್ಕು ರಾಶಿಯವರಿಗೆ ಹಣದ ಸುರಿಮಳೆಯನ್ನೇ ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ತಿಂಗಳಾಂತ್ಯದಲ್ಲಿ ಅಸ್ತಮಿಸಲಿರುವ ಶನಿ, ಈ ನಾಲ್ಕು ರಾಶಿಯವರಿಗೆ ನೀಡಲಿದ್ದಾನೆ ಬಂಪರ್ ಲಾಭ:
ಮೇಷ ರಾಶಿ: 

ಹದಿನೈದು ದಿನಗಳ ಅಂತರದಲ್ಲಿ ಶನಿ ಸಂಚಾರದಲ್ಲಿನ ಈ ಬದಲಾವಣೆಯು ಮೇಷ ರಾಶಿಯ ಜನರಿಗೆ ಬಹಳ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ. ವ್ಯಾಪಾರ-ವ್ಯವಹಾರದಲ್ಲಿಯೂ ಭಾರೀ ಲಾಭವಾಗಲಿದೆ.


ಇದನ್ನೂ ಓದಿ- ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರನ ಪ್ರವೇಶ, 4 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು


ವೃಷಭ ರಾಶಿ:
ಶನಿ ಅಸ್ತಮವು ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಭಾರೀ ಪ್ರಯೋಜನವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದರೆ, ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ಬಹು ದಿನಗಳ ಕನಸು ನನಸಾಗಲಿದೆ. 


ಕನ್ಯಾ ರಾಶಿ:
ಅಸ್ತಮ ಶನಿಯು ಕನ್ಯಾ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ ನೀದಲಿದ್ದಾನೆ. ದೀರ್ಘ ಸಮಯದಿಂದ ನೀವು ನಿರೀಕ್ಷಿಸುತ್ತಿದ್ದ ಯಶಸ್ಸು ಈಗ ನಿಮ್ಮದಾಗಲಿದೆ. ಕುಟುಂಬದವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿದ್ದು, ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. 


ಇದನ್ನೂ ಓದಿ- Shani Gachar 2023: ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುವ ಶನಿ ನಿಮ್ಮ ಮೇಲೆ ಏನು ಪರಿಣಾಮ ಬೀರಲಿದ್ದಾನೆ?


ಮಕರ ರಾಶಿ:
ಕುಂಭ ರಾಶಿಯಲ್ಲಿ ಶನಿ ಅಸ್ತಮವು ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಬಹುಕಾಲದಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.