Shani Margi: ಪ್ರತಿಯೊಬ್ಬರಿಗೂ ಕರ್ಮಗಳಿಗೆ ತಕ್ಕ ಫಲ ನೀಡುವ ಶನಿ ದೇವನ ಹೆಸರು ಕೇಳಿದರೆ ಸಾಕು ಜನ ಕನಸಿನಲ್ಲಿಯೂ ಬೆಚ್ಚಿಬೀಳುತ್ತಾರೆ. ನವಗ್ರಹಗಳಲ್ಲಿ ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿರುವ ಶನಿ ದೇವನು ಸುಮಾರು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ವರ್ಷದ ಆರಂಭದಲ್ಲಿ ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿದೇವನು, ಸದ್ಯ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಇನ್ನೂ ಕೆಲವೇ ದಿನಗಳಲ್ಲಿ ಎಂದರೆ ನವೆಂಬರ್ 4, 2023ರಂದು ಶನಿಯ ನೇರ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಶಶ ರಾಜಯೋಗವೂ ನೀರ್ಮಾಣವಾಗಲಿದೆ. 


COMMERCIAL BREAK
SCROLL TO CONTINUE READING

ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಪ್ರತಿಯೊಬ್ಬರ ಜೀವನದಲ್ಲಿ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ನವೆಂಬರ್ ಮೊದಲ ವಾರದಲ್ಲಿ ತನ್ನ ಮಾರ್ಗ ಬದಲಾಯಿಸಿ ನೇರ ಸಂಚಾರವನ್ನು ಆರಂಭಿಸಲಿರುವ ಶನಿಯು ಕೆಲವು ರಾಶಿಯವರ ಸಂಕಷ್ಟಗಳನ್ನು ಹೆಚ್ಚಿಸಿದರೆ, ಇನ್ನೂ ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Ketu Gochar: ಈ ರಾಶಿಯವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಲಿದ್ದಾನೆ ಕೇತು


ಶನಿ ಮಾರ್ಗಿ: ಈ ಮೂರು ರಾಶಿಯವರಿಗೆ ಭಾಗ್ಯೋದಯದ ಸಮಯ: 
ವೃಷಭ ರಾಶಿ: 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಗಿ ಶನಿಯು ವೃಷಭ ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ತರಲಿದ್ದಾನೆ. ನವೆಂಬರ್ ಮೊದಲ ವಾರದ ಬಳಿಕ ನಿಮ್ಮ ವ್ಯಾಪಾರ-ವ್ಯವಹಾರ ವೃದ್ಧಿಯಾಗಲಿದ್ದು ಹಣಕಾಸಿನ ಹರಿವು ಹೆಚ್ಚಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಕನಸಿನ ಉದ್ಯೋಗ ಪ್ರಾಪ್ತಿಯಾಗಲಿದೆ. 


ಸಿಂಹ ರಾಶಿ: 
ಶನಿಯ ನೇರ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬಲವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಕುಟುಂಬದಲ್ಲಿ ಸುಖ-ಸಂತೋಷ ಹೆಚ್ಚಾಗಲಿದ್ದು, ಆರೋಗ್ಯವೂ ವೃದ್ಧಿಯಾಗಲಿದೆ. 


ಇದನ್ನೂ ಓದಿ- Vastu Tips: ಮನೆಯ 4 ಜಾಗಗಳಲ್ಲಿ ಈ ಬಿಳಿ ವಸ್ತು ಇಟ್ಟರೆ ಎಂದಿಗೂ ಎದುರಾಗಲ್ಲ ಹಣಕಾಸಿನ ಸಮಸ್ಯೆ


ಕುಂಭ ರಾಶಿ: 
ಸ್ವ ರಾಶಿಯಲ್ಲಿ ಶನಿ ಮಹಾತ್ಮನ ನೇರ ಸಂಚಾರವು ಈ ರಾಶಿಯವರಿಗೆ ಅನುಕೂಲಕರ ಫಲಗಳನ್ನು ನೀಡಲಿದೆ. ಮಾರ್ಗಿ ಶನಿಯಿಂದ ನಿರ್ಮಾಣವಾಗಲಿರುವ ಶಶ ರಾಜಯೋಗವು ಕುಂಭ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಳಿದ್ದು, ಇದರಿಂದ ವ್ಯಾಪಾರ-ವ್ಯವಹಾರದಲ್ಲಿ ಏಳ್ಗೆಯನ್ನೂ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆಯನ್ನೂ ಕಾಣಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.