Shani Vakri 2023: ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಕರ್ಮಫಲದಾತ ಶನಿ ದೇವನ ಹೆಸರು ಕೇಳಿದರೆ ಸಾಕು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆದರೆ, ಶನಿ ದೇವನು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯ ಜೀವನದಲ್ಲಿ ಸಂತೋಷದ ಹೊಳೆಯನ್ನೇ ಹರಿಸುತ್ತಾನೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಕೈ ತುಂಬಾ ಹಣ, ಸಂಪತ್ತು, ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಮೂರು ದಶಗಳ ಬಳಿಕ ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸಿರುವ ಶನಿಯು ಇತ್ತೀಚೆಗಷ್ಟೇ ಎಂದರೆ ಜೂನ್ 17, 2023 ರಂದು ಅದೇ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇನ್ನೂ ಎರಡೂವರೆ ತಿಂಗಳು ನವೆಂಬರ್ 4, 2023 ರವರೆಗೆ ಇದೇ ಸ್ಥಿತಿಯಲ್ಲಿರುವ ಶನಿ ದೇವನು ಈ ಸಮಯದಲ್ಲಿ ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತಾನೆ. ಆದರೂ, ಈ ಸಮಯದಲ್ಲಿ ಶನಿ ದೇವನು ಮೂರು ರಾಶಿಯವರ ಮೇಲೆ ವಿಶೇಷ ಕೃಪೆ ತೋರಲಿದ್ದು, ಅವರ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಕೈ ತುಂಬಾ ಹಣ-ಸಂಪತ್ತನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- ಪಿತಾ-ಪುತ್ರರ ಮುಖಾಮುಖಿಯಿಂದ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣ: ಈ ರಾಶಿಯವರಿಗೆ ಧನಹಾನಿ


ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ:- 
ವೃಷಭ ರಾಶಿ: 

ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಐಷಾರಾಮಿ ಜೀವನಕಾರಕನಾದ ಶುಕ್ರ ಹಾಗೂ ಕರ್ಮಫಲದಾತ ಶನಿಯ ನಡುವೆ ಮಿತೃತ್ವವಿದೆ. ಹೀಗಾಗಿ, ಪ್ರಸ್ತುತ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ದೇವನು ಈ ಸಮಯದಲ್ಲಿ ವೃಷಭ ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಸ್ವಂತ ಬುಸ್ಸಿನೆಸ್ಸ್ ಮಾಡುವವರಿಗೆ ಬಂಪರ್ ಲಾಭವಾಗಲಿದೆ. ಅದೇ ಸಮಯದಲ್ಲಿ, ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರಿಗೂ ಅತ್ಯುತ್ತಮ ಸಮಯ ಇದು ಎಂತಲೇ ಹೇಳಬಹುದು. 


ತುಲಾ ರಾಶಿ: 
ವಕ್ರೀ ಶನಿಯು ತುಲಾ ರಾಶಿಯವರಿಗೂ ಕೂಡ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಬಹಳ ಸಮಯದಿಂದ ಅಶುಭ ಸುದ್ದಿಗಳನ್ನೇ ಕೇಳುತ್ತಿದ್ದ ನಿಮಗೆ ಒಂದರ ನಂತರ ಒಂದರಂತೆ ಇದೀಗ ಒಳ್ಳೆಯ ಸುದ್ದಿಗಳ ಸುರಿಮಳೆಯೇ ಆಗಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿಯು ಕೌಟುಂಬಿಕ ಸುಖವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಐಷಾರಾಮಿ ಜೀವನ ನಿಮ್ಮದಾಗಲಿದ್ದು, ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಉದ್ಯೋಗ-ವ್ಯವಹಾರದಲ್ಲಿ ಅನಿರೀಕ್ಷಿತ ಬಂಪರ್ ಲಾಭವು ನಿಮ್ಮನ್ನು ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸಹಾಯಕವಾಗಿವೆ. 


ಇದನ್ನೂ ಓದಿ- ಮೇಷ ರಾಶಿಯಲ್ಲಿ ಗುರು-ರಾಹು ಯುತಿ: ಈ ಮೂರು ರಾಶಿಯವರ ಜೀವನದಲ್ಲಿ ಎದುರಾಗಲಿದೆ ಸಂಕಷ್ಟ


ಮಕರ ರಾಶಿ: 
ಮಕರ ರಾಶಿಯ ಅಧಿಪತಿ ಗ್ರಹ ಶನಿಯ ಹಿಮ್ಮುಖ ಚಲನೆಯು ಈ ರಾಶಿಯವರಿಗೂ ಕೂಡ ಶುಭ ಫಲಗಳನ್ನೇ ನೀಡಲಿದೆ. ಇನ್ನೂ ಎರಡೂವರೆ ತಿಂಗಳುಗಳ ಕಾಲ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಶುಭ ಫಲಗಳು ನಿಮ್ಮದಾಗಲಿದ್ದು ಬಂಪರ್ ಹಣಕಾಸಿನ ಪ್ರಯೋಜನವನ್ನೂ ಕೂಡ ಕಾಣುವಿರಿ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಟೆಗಳು ಹೆಚ್ಚಾಗಲಿವೆ. ನೀವು ಸ್ವಲ್ಪ ತಾಳ್ಮೆಯಿಂದ ಗೌರವಯುತವಾಗಿ ನಡೆದುಕೊಂಡರೆ ಸಂತೋಷದ ಜೀವನವನ್ನು ಅನುಭವಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.