Sharad Purnima Upay: ಅತ್ಯಂತ ಶಕ್ತಿಶಾಲಿ ಹುಣ್ಣಿಮೆ ಎಂದು ಪರಿಗಣಿಸಲಾಗಿರುವ 'ಶರದ್ ಪೂರ್ಣಿಮಾ' ಈ ವರ್ಷ ಅಕ್ಟೋಬರ್ 16ರಂದು ಇರಲಿದೆ. ಈ "ಪವರ್ಫುಲ್ ಹುಣ್ಣಿಯ" ದಿನದಂದು ಇಡೀ ವರ್ಷದಲ್ಲೇ ಅತ್ಯಂತ ಶಕ್ತಿಶಾಲಿ ಚಂದ್ರನನ್ನು ಕಾಣಬಹುದು. ಈ ದಿನ ಒಂದು ವಿಶೇಷ ಪರಿಹಾರ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಸಂಪತ್ತು ಕೂಡ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. 


COMMERCIAL BREAK
SCROLL TO CONTINUE READING

ಶರದ್ ಪೂರ್ಣಿಮಾ ದಿನದಂದು ಮನೆಯಲ್ಲಿ 'ಹಾಲಿನ ಪಾಯಸ' ತಯಾರಿಸಿ ಅದನ್ನು ಚಂದ್ರನ ಬೆಳಕಿನಲ್ಲಿಟ್ಟು ಸಾಧ್ಯವಾದರೆ ಬೆಳ್ಳಿ ನಾಣ್ಯವನ್ನು ಇದರಲ್ಲಿ ಹಾಕಿ ಕೈ ಮುಗಿದು ನಿಮ್ಮ ಮನೋಕಾಮನೆಗಳನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿ ಈ ಪಾಯಸವನ್ನು ಸೇವಿಸಿದರೆ ಹಲವು ಪ್ರಯೋಜನಗಳಿವೆ. 


ಒಂದೊಮ್ಮೆ ನಿಮಗೆ ಚಂದ್ರನ ಮುಂದಿಟ್ಟು ತಿನ್ನಲು ಸಾಧ್ಯವಾಗದಿದ್ದರೆ ಹಾಲಿನ ಪಾಯಸವನ್ನು ಚಂದ್ರನಿಗೆ ತೋರಿಸಿ "ಓಂ ಚಾಂದ್ರಾಯ ನಮಃ" ಮಂತ್ರವನ್ನು 21 ಬಾರಿ ಪಠಿಸಿ ಬಳಿಕ ಈ ಪಾಯಸವನ್ನು ಸೇವಿಸುವುದರಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು. 


ಇದನ್ನೂ ಓದಿ- ಅಡುಗೆಮನೆಯ ಈ ದಿಕ್ಕಿನಲ್ಲಿ 'ಒಲೆ' ಇದ್ದರೆ ಆದಾಯಕ್ಕಿಂತ ಖರ್ಚೆ ಹೆಚ್ಚು, ಮುಗಿಯುವುದೇ ಇಲ್ಲ ಹಣಕಾಸಿನ ತೊಂದರೆ...!


ಶರದ್ ಪೂರ್ಣಿಮಾ ದಿನ ಪಾಯಸ ತಯಾರಿಸಿ ಸೇವಿಸುವುದರ ಪ್ರಯೋಜನ: 
ಅನಾರೋಗ್ಯದಿಂದ ಮುಕ್ತಿ: 

ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶರದ್ ಪೂರ್ಣಿಮಾ ದಿನದಂದು 'ಹಾಲಿನ ಪಾಯಸ' ತಯಾರಿಸಿ ಅದನ್ನು ಚಂದ್ರನ ಬೆಳಕಿನಲ್ಲಿಟ್ಟು ಕೈ ಮುಗಿದು ಸೇವಿಸಿದರೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಪರಿಹಾರ ಪಡೆಯಬಹುದು. 


ಇಷ್ಟಾರ್ಥ ಸಿದ್ಧಿ: 
ಶರದ್ ಪೂರ್ಣಿಮಾ ದಿನದಂದು ಚಂದ್ರನಿಗೆ ಪ್ರಾರ್ಥಿಸಿ ಹಾಲಿನ ಪಾಯಸ ಸೇವಿಸುವುದರಿಂದ ಮನೋಕಾಮನೆಗಳು ಈಡೇರುತ್ತವೆ. ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. 


ಇದನ್ನೂ ಓದಿ- Weekly Horoscope: ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಆದಾಯದಿಂದ ಸಂತಸ, 3 ರಾಶಿಯ ಜನರಿಗೆ ಎಚ್ಚರಿಕೆ ಅಗತ್ಯ 


ಗರ್ಭಿಣಿಯರಿಗೆ ಒಳ್ಳೆಯದು: 
ಶರದ್ ಪೂರ್ಣಿಮಾ ದಿನ ಕೈಗೊಳ್ಳುವ ಈ ಪರಿಹಾರವು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಇದರಿಂದ ತಾಯಿಯ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೆ, ಹುಟ್ಟುವ ಮಗು ಸುಂದರವಾಗಿ ಆರೋಗ್ಯಕರವಾಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.