ಇನ್ನು ಮೂರೇ ದಿನಗಳಲ್ಲಿ ಶಶ ಮಹಾಪುರುಷ ಯೋಗದಿಂದ ಈ ರಾಶಿಯವರನ್ನು ಸಿರಿವಂತರನ್ನಾಗಿಸಲಿದ್ದಾನೆ ಶನಿ
ಕುಂಭ ರಾಶಿಗೆ ಶನಿ ಪ್ರವೇಶ ಮಾಡುವುದರೊಂದಿಗೆ `ಶಶ ಮಹಾಪುರುಷ ಯೋಗ`ವನ್ನು ನಿರ್ಮಾಣ ಮಾಡುತ್ತಿದೆ. ಈ ಯೋಗವು ಮೂರು ರಾಶಿಯವರ ಅದೃಷ್ಟವನ್ನು ಖುಲಾಯಿಸಲಿದೆ.
ಬೆಂಗಳೂರು : ನ್ಯಾಯದ ದೇವರು ಶನಿ ತನ್ನ ಮೂಲ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯು ಎರಡೂವರೆ ವರ್ಷಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. 11 ರಾಶಿಗಳಲ್ಲಿ ಸಂಕ್ರಮಿಸಿದ ನಂತರ ತನ್ನದೇ ಆದ ರಾಶಿಯನ್ನು ತಲುಪುತ್ತಾನೆ. ಜನವರಿ 17 ರಂದು ಶನಿ ಸಂಕ್ರಮಣ ನಡೆಯಲಿದೆ. ಕುಂಭ ರಾಶಿಗೆ ಶನಿ ಪ್ರವೇಶಿಸುತ್ತಿರುವುದು ಜ್ಯೋತಿಷ್ಯದಲ್ಲಿ ಪ್ರಮುಖ ಘಟನೆಯಾಗಿದೆ. ಕುಂಭ ರಾಶಿಗೆ ಶನಿ ಪ್ರವೇಶ ಮಾಡುವುದರೊಂದಿಗೆ 'ಶಶ ಮಹಾಪುರುಷ ಯೋಗ'ವನ್ನು ನಿರ್ಮಾಣ ಮಾಡುತ್ತಿದೆ. ಈ ಯೋಗವು ಮೂರು ರಾಶಿಯವರ ಅದೃಷ್ಟವನ್ನು ಖುಲಾಯಿಸಲಿದೆ.
ಶನಿ ಸಂಚಾರದಿಂದ ತೆರೆಯಲಿದೆ ಈ ರಾಶಿಯವರ ಅದೃಷ್ಟ ಬಾಗಿಲು :
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಶನಿ ಮತ್ತು ಶುಕ್ರ ಇಬ್ಬರ ನಡುವೆ ಕೂಡಾ ಉತ್ತಮ ಸ್ನೇಹವಿದೆ. ಹೀಗಾಗಿ ವೃಷಭ ರಾಶಿಯವರಿಗೆ ಶನಿ ಸಂಕ್ರಮಣ ಮತ್ತು ಶನಿ ಮಹಾಪುರುಷ ರಾಜಯೋಗವು ಬಹಳ ಶುಭಕರವಾಗಿರುತ್ತದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನ ಸಿಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಲಿದೆ.
ಇದನ್ನೂ ಓದಿ : Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ
ತುಲಾ ರಾಶಿ : ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಶನಿ ಮತ್ತು ಶುಕ್ರನ ಸ್ನೇಹದಿಂದ ಈ ರಾಶಿಯವರಿಗೆ ಶನಿಯು ಬಹಳಷ್ಟು ಲಾಭಗಳನ್ನು ನೀಡುತ್ತಾನೆ. ಶನಿಯ ರಾಶಿ ಬದಲಾವಣೆಯು ತುಲಾ ರಾಶಿಯವರ ವೃತ್ತಿಜೀವನದ ಪ್ರಗತಿಯಲ್ಲಿ ಬರುವ ಅಡೆತಡೆ ನಿವಾರಣೆಯಾಗುತ್ತದೆ. ಎಲ್ಲಾ ಕಾರ್ಯಗಳಲ್ಲಿ ತ್ವರಿತ ಪ್ರಗತಿ ಸಿಗಲಿದೆ. ಸರ್ಕಾರಿ ನೌಕರಿ ಪಡೆಯುವ ಕನಸು ಕಂಡವರ ಕನಸು ನನಸಾಗಲಿದೆ.
ಧನು ರಾಶಿ : ಶನಿ ಸಂಕ್ರಮಣದೊಂದಿಗೆ ಧನು ರಾಶಿಯವರ ಜಾತಕದಲ್ಲಿನ ಏಳೂವರೆ ವರ್ಷಗಳ ಶನಿ ದೆಸೆ ಕೂಡಾ ಕೊನೆಗೊಳ್ಳುತ್ತವೆ. ಇದರೊಂದಿಗೆ, ಎಲ್ಲಾ ಅಡೆತಡೆಗಳು ಮತ್ತು ಸಂಕಟಗಳು ದೂರವಾಗುತ್ತವೆ. ಮಾನಸಿಕ ಒತ್ತಡ, ದೈಹಿಕ ನೋವು ದೂರವಾಗುತ್ತದೆ. ಕಷ್ಟಗಳಿಂದ ಮುಕ್ತಿ ಸಿಗಲಿದೆ. ಇನ್ನು ಮುಂದೆ ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸಲಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜನರಿಗೆ ಶನಿ ಸಂಕ್ರಮಣವು ವರದಾನವಾಗಿದೆ.
ಇದನ್ನೂ ಓದಿ : Sankranti 2023:ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುವುದರ ಪ್ರತೀತಿ ಏನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.