ದಿನಭವಿಷ್ಯ 11-11-2024: ಸೋಮವಾರದಂದು ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ: 6 ರಾಶಿಯವರಿಗೆ ಜಾಕ್ ಪಾಟ್!
Today Horoscope 11th November 2024: ಸೋಮವಾರದದ ಈ ದಿನ ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಸೋಮವಾರದದ ಈ ದಿನ ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ, ವಣಿಜ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ದಿನ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ನಿಮ್ಮ ಪ್ರಮುಖ ಗುರಿಗಳನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ವೃತ್ತಿ-ವ್ಯವಹಾರದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರಿ. ಪ್ರಗತಿಯ ಅವಕಾಶಗಳು ಹೆಚ್ಚಾಗುತ್ತವೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಆಡಳಿತಾತ್ಮಕ ಚಟುವಟಿಕೆಗಳು ವೇಗವನ್ನು ಪಡೆಯಲಿವೆ. ಎಲ್ಲರ ಬೆಂಬಲದಿಂದ ಕಾರ್ಯಗಳನ್ನು ಪೂರ್ಣಗೊಳಿಸಲು ಯಶಸ್ವಿಯಾಗುವಿರಿ. ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನಿಕಟ ಸಂಬಂಧವನ್ನು ನಿರ್ಮಿಸುವ ಅವಕಾಶಗಳಿವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವ್ಯವಹಾರ ವಿಸ್ತರಣೆಯಿಂದ ಲಾಭವಾಗಲಿದೆ. ವ್ಯಾಪಾರ ಅಭಿವೃದ್ಧಿ, ಪ್ರಗತಿಯ ಹೊಸ ದಾರಿ ತೆರೆಯಲಿವೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಲಾಭವಾಗಲಿದೆ. ವೈಯಕ್ತಿಕ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ತಾಳ್ಮೆಯಿಂದ ಕೆಲಸಗಳನ್ನು ಮುಂದುವರೆಸುವುದರಿಂದ ಶುಭವಾಗಲಿದೆ. ಶಿಸ್ತು ಮತ್ತು ನಿಯಮಗಳ ಅನುಸರಣೆಗೆ ಒಟ್ಟು ನೀಡಿ. ಅನಾವಶ್ಯಕ ವಾದ-ವಿವಾದಗಳಿಂದ ದೂರವಿರಿ. ಕೆಲಸದಲ್ಲಿ ಬುದ್ದಿವಂತಿಕೆಯಿಂದ ಇರುವುದು ಅವಶ್ಯಕ.
ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ-ವ್ಯವಹಾರದಲ್ಲಿ ಸಂಬಂಧಗಳನ್ನು ಬಳಪಡಿಸುವತ್ತ ನಿಗಾವಹಿಸಿ. ಆಸ್ತಿ ಖರೀದಿ ಯೋಗವಿದೆ. ವೃತ್ತಿಪರರೌ ನಾಯಕತ್ವ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರಿಂದ ಶುಭ. ಸ್ನೇಹಿತರ ಬೆಂಬಲದೊಂದಿಗೆ ನೀವು ಇತರರೊಂದಿಗೆ ಸಂಪರ್ಕ ಸಾಧಿಸುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ವ್ಯಾಪಾರ ಚಟುವಟಿಕೆಗಳು ಸ್ಥಿರವಾಗಿರುತ್ತದೆ. ಗಂಭೀರ ವಿಷಯಗಳಲ್ಲಿ ಆಲೋಚಿಸಿ ಮುಂದುವರೆಯುವುದರಿಂದ ಶುಭವಾಗಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ನೀವಿಂದು ವೈಯಕ್ತಿಕ ಸಂಬಂಧಗಳನ್ನು ಸುಧಾರಿಸುತ್ತೀರಿ. ಕೆಲಸದ ವಿಷಯಗಳಲ್ಲಿ ಜಾಗರೂಕರಾಗಿರಿ. ಪ್ರಯಾಣ ಮತ್ತು ಮನರಂಜನೆಗೆ ಹೆಚ್ಚಿನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಶಿಸ್ತು ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವಸ್ತು ಸಂಪನ್ಮೂಲಗಳಿಗೆ ಒಟ್ಟು ನೀಡುತ್ತೀರಿ. ಸ್ನೇಹದಲ್ಲಿ ನಂಬಿಕೆ ಬೆಳೆಯುತ್ತದೆ. ನೀವು ಕುಟುಂಬದ ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ವೈಯಕ್ತಿಕ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಿ. ಸಂಬಂಧಗಳಲ್ಲಿ ಸಕಾರಾತ್ಮಕತೆ ತುಂಬಲಿದೆ. ಆದಾಯ ಹೆಚ್ಚಳವಾಗಲಿದೆ.
ಇದನ್ನೂ ಓದಿ- ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನ
ಧನು ರಾಶಿಯವರ ಭವಿಷ್ಯ (Sagittarius Horoscope):
ಸಾಮಾಜಿಕ ಪ್ರಯತ್ನಗಳಲ್ಲಿ ಶಕ್ತಿ ಹೆಚ್ಚಾಗಲಿದೆ. ಸಹಕಾರಿ ಕೆಲಸಗಳಲ್ಲಿ ಆಸಕ್ತಿ ಕಾಣಬಹುದು. ವೈಯಕ್ತಿಕ ಜವಾಬ್ದಾರಿಗಳನ್ನು ಪೂರೈಸುವಾಗ ಸಮಯಕ್ಕೆ ಮಾನ್ಯತೆ ನೀಡಿ. ವಿಶ್ಲೇಷಣಾತ್ಮಕ ವಿಚಾರಗಳಲ್ಲಿ ಆಸಕ್ತಿ ಬೆಳೆಯುತ್ತದೆ. ನಿಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಮನೆಯಲ್ಲಿ ಸುಖ-ಸಂತೋಷ ಹೆಚ್ಚಾಗುತ್ತದೆ. ಭೌತಿಕ ಸುಖ ಹೆಚ್ಚಾಗುವುದರಿಂದ ಮನಸ್ಸಿಗೆ ಉಲ್ಲಾಸ ತುಂಬಲಿದೆ. ಅತಿಥಿಗಳ ಆಗಮನವು ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು. ಸಾಂಪ್ರದಾಯಿಕ ಚಟುವಟಿಕೆಗಳಿಂದ ಪ್ರಗತಿಯನ್ನು ಕಾಣುವಿರಿ. ಆತ್ಮವಿಶ್ವಾಸದಿಂದ ಮುಂದುವರೆದರೆ ಯಶಸ್ಸು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯಶಸ್ಸು. ನಿಮ್ಮ ಸಂವಹನ ಮತ್ತು ನಡವಳಿಕೆಯು ಸಾಮಾಜಿಕ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ನಿಮ್ಮ ದಾರಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗಲಿವೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮ್ಮ ಖರ್ಚುಗಳು ಮತ್ತು ಹೂಡಿಕೆಗಳು ಹೆಚ್ಚಾಗಬಹುದು. ಪ್ರಮುಖ ಕಾರ್ಯಗಳಲ್ಲಿ ಗಮನ ಕೇಂದ್ರೀಕರಿಸುವುರಿ ಅವಶ್ಯಕವಾಗಿದೆ. ದೊಡ್ಡ ಗುರಿಗಳನ್ನು ಮುಂದಿಟ್ಟು ಮುಂದುವರೆಯುವುದರಿಂದ ಶೌಭ. ಪ್ರಭಾವಶಾಲಿ ವ್ಯಕ್ತಿಯ ಭೇಟಿ ಸಾಧ್ಯತೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.