Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿಯ ಈ ದಿನ ಬುಧವಾರ ಮೂಲಾ ನಕ್ಷತ್ರ, ಸೌಭಾಗ್ಯ, ಶೋಭನ ಯೋಗ, ಗರಜ ಕರಣ ಇರಲಿದೆ.  ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿಯು ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ ಫಲಗಳನ್ನು ನೀಡಲಿದ್ದಾಳೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ದಿನ ಅಷ್ಟು ಉತ್ತಮವಾಗಿಲ್ಲ. ನಿಮ್ಮ ಹಣ ಬೇರೆಡೆ ಸಿಲುಕುವ ಸಾಧ್ಯತೆ ಇರಲಿದೆ. ಶತ್ರುಗಳು ನಿಮ್ಮ ತೊಂದರೆಗಳನ್ನು ಹೆಚ್ಚಿಸಲಿದ್ದಾರೆ. ಆದಾಗ್ಯೂ, ನಯವಾಗಿ ವರ್ತಿಸುವುದು ನಿಮಗೆ ಲಾಭದಾಯಕ. ವಾಹನ ಖರೀದಿ ಯೋಗವೂ ಇದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರಲಿದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಹೊಸ ಆಸ್ತಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಂಬಂಧ ಶುಭ ಸುದ್ದಿಯನ್ನು ಕೇಳುವಿರಿ. ಬೇರೆಯವರಿಂದ ಪಡೆದ ಹಣವನ್ನು ಸಮಯಕ್ಕೆ ಹಿಂದಿರುಗಿಸಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮವಾದ ದಿನ. ನಿಮ್ಮ ಕೆಲಸಕ್ಕೆ ಕುಟುಂಬದವರಿಗೆ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಪ್ರೀತಿಯಲ್ಲಿರುವವರಿಗೆ ನಿಮ್ಮ ಮದುವೆ ಪ್ರಸ್ತಾಪಗಳನ್ನು ಮನೆಯವರ ಮುಂದೆ ಪ್ರಸ್ತುತ ಪಡಿಸಲು ಸಕಾಲವಾಗಿರುತ್ತದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಸವಾಲಿನ ದಿನ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಲ್ಲಾ ರೀತಿಯಲ್ಲೂ ಯೋಚಿಸಿ ನಿರ್ಧರಿಸಿ. ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ವಿವಾದಗಳು ಉಂಟಾಗಬಹುದು. ವ್ಯವಹಾರದಲ್ಲಿ ಜಾಗರೂಕರಾಗಿರಿ. 


ಇದನ್ನೂ ಓದಿ- ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಾಮಾಜಿಕ ಬದುಕಿನಲ್ಲಿರುವವರಿಗೆ ಇಂದು ಅತ್ಯುತ್ತಮವಾದ ದಿನ. ಅಧ್ಯಾತ್ಮಿಕ ಕೆಲಸಗಳಲ್ಲಿ ಖ್ಯಾತಿ ಗಳಿಸುವಿರಿ. ಮನೆಯ  ಅಲಂಕಾರಕ್ಕಾಗಿ ಹಣ ವ್ಯಯಿಸಬೇಕಾಗಬಹುದು. ಒಟ್ಟಾರೆಯಾಗಿ ಇದು ನಿಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರುವ ಶುಭ ದಿನ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರು ಇಂದು ಸಮನ್ವಯ ಕಾಪಾಡಿಕೊಳ್ಳುವುದು ಒಳ್ಳೆಯದು. ಇಲ್ಲವೇ ಕೆಲವು ಪ್ರಮುಖ ಕೆಲಸಗಳಲ್ಲಿ ನಿಮ್ಮ ಪರಿಸ್ಥಿತಿ ಬಿಗಡಾಯಿಸಬಹುದು. ಕುಟುಂಬದೊಂದಿಗೆ ಹೊರ ಹೋಗಲು ಯೋಜನೆ ರೂಪಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ಜನರಿಗೆ ಇಂದು ದೂರದ ಊರಿನಿಂದ ಶುಭ ಸುದ್ದಿ ಕೇಳಿಬರಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಲಿದೆ. ಮಕ್ಕಳ ಪ್ರಗತಿಯಿಂದ ಮನೋಲ್ಲಾಸ. ಆಸ್ತಿ ವ್ಯವಹಾರಗಳು ನೀವಂದುಕೊಂಡಂತೆಯೇ ಕೈಗೂಡುವುದರಿಂದ ಸಂತಸ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಬೇರೆಯವರೊಂದಿಗೆ ಅನಾವಶ್ಯಕ ವಾದಗಳನ್ನು ತಪ್ಪಿಸಿದರೆ ಒಳ್ಳೆಯದು. ಆರೋಗ್ಯದ ಬಗ್ಗೆ ಗಮನಹರಿಸಬೇಕು. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ವ್ಯಾಪಾರಸ್ಥರಿಗೆ ಕೆಲವು ಒಳ್ಳೆಯ ಸುದ್ದಿಗಳು ಕೇಳಿ ಬರಬಹುದು. ಯೋಜಿತ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. 


ಇದನ್ನೂ ಓದಿ- ಎಂತದ್ದೇ ಸನ್ನಿವೇಶದಲ್ಲಿ ಹಿಡಿದ ಕೆಲಸ ಸಾಧಿಸದೆ ಬಿಡುವವರಲ್ಲ ಈ ರಾಶಿಯವರು..! 


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ದೈನಂದಿನ ದಿನಚರಿಯ ಬಗ್ಗೆ ಸಂಪೂರ್ಣ ಗಮನಹರಿಸಿ. ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಶುಭ ಸಮಯ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿದ್ನ ಕೂಯಿದ ದಿನ. ಕುಟುಂಬದ ಸಮಸ್ಯೆಗಳ ಬಗ್ಗೆ ನಿಮ್ಮ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸಿ. ಆರೋಗ್ಯ ಸಮಸ್ಯೆಗಳಿಂದ ಕೊಂಚ ಪರಿಹಾರವನ್ನು ಪಡೆಯುವಿರಿ. ಅನಗತ್ಯ ವಿಚಾರಗಳಿಗೆ ಚಿಂತಿಸುವುದನ್ನು ತಪ್ಪಿಸಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯವರಿಗೆ ಇಂದು ಶುಭ ದಿನ. ಹೊಸ ಕೆಲಸ-ಕಾರ್ಯಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭವನ್ನು ಪಡೆಯುವಿರಿ. ಕುಟುಂಬಸ್ಥರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಬಹುದಿನಗಳಿಂದ ಬಾಧಿಸುತ್ತಿದ್ದ ಮಾನಸಿಕ ಒತ್ತಡದಿಂದ ಪರಿಹಾರ ಕಾಣುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಕುಟುಂಬಸ್ಥರೊಂದಿಗೆ ಕುಳಿತು ಒಳ್ಳೆಯ ಸಮಯವನ್ನು ಆನಂದಿಸುವಿರಿ. ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ದಿನ. ಸಾಲಗಳನ್ನು ಹಿಂದಿರುಗಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.