ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಪ್ರತಿ ತಿಂಗಳು ಚತುರ್ದಶಿಯ ದಿನದಂದು ಶಿವರಾತ್ರಿ ಆಚರಿಸಲಾಗುತ್ತದೆ. ಅವುಗಳನ್ನು ಮಾಸ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನ ವಿಧಿವಿಧಾನಗಳ ಮೂಲಕ ಶಿವಾನಿಗೆ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಉಪವಾಸ ವೃತವನ್ನು ಕೂಡ ಕೈಗೊಳ್ಳಲಾಗುತ್ತದೆ. ಆದರೆ, ಶ್ರಾವಣ ಮಾಸದಲ್ಲಿ ಬರುವ ಶಿವರಾತ್ರಿಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಶ್ರಾವಣ ಮಾಸ ಕೂಡ ಎರಡು ತಿಂಗಳುಗಳದ್ದಾಗಿದ್ದು, ಒಟ್ಟು ಎರಡು ಶಿವರಾತ್ರಿಗಳು ಬರುತ್ತಿವೆ. ಅಂದರೆ ಒಟ್ಟು 59 ದಿನಗಳ ಕಾಲ ಶಾವನ ಮಾಸ ಇರಲಿದೆ. ಶ್ರಾವಣ ಶಿವರಾತ್ರಿ ಜುಲೈ 15 ರಂದು ಆಚರಿಸಲಾಗುತ್ತಿದ್ದು, ಈ ದಿನ ಕವಡೆ ಯಾತ್ರೆ ಕೂಡ ಅಂತ್ಯವಾಗಲಿದೆ. ಶಿವರಾತ್ರಿಯ ದಿನ ಶಿವನನ್ನು ಆರಾಧಿಸುವುದರ ಜೊತೆ ಕೆಲ ಜೋತಿಷ್ಯ ಉಪಾಯಗಳನ್ನು ಮಾಡಿದರೆ, ಅದರಿಂದ ವಿಶೇಷ ಲಾಭ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

COMMERCIAL BREAK
SCROLL TO CONTINUE READING

ಯಾವ ಯಾವ ದಿನ ಶಿವರಾತ್ರಿ ಇರಲಿದೆ
ವೈದಿಕ ಪಂಚಾಂಗದ ಪ್ರಕಾರ ಮೊದಲ ಶ್ರಾವಣ ಶಿವರಾತ್ರಿ ಜುಲೈ 15 ರಂದು ಇದ್ದರೆ, ಎರಡನೇ ಶಿವರಾತ್ರಿ ಆಗಸ್ಟ್ 14 ರಂದು ಇರಲಿದೆ. ಪ್ರತಿಯೊಂದು ಶಿವರಾತ್ರಿಯ ವಿಶೇಷ ಮಹತ್ವ ಇರಲಿದೆ. 
 


ಈ ಜೋತಿಷ್ಯ ಉಪಾಯಗಳನ್ನು ಮಾಡಿ
ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ

ಎರಡೂ ಶಿವರಾತ್ರಿಗಳ ದಿನ ಶಿವಲಿಂಗಕ್ಕೆ ಪಂಚಾಮೃತ ಸ್ನಾನ ಮಾಡಿಸಿ. ಪಂಚಾಮೃತ ಹಾಲು, ಮೊಸರು, ಸಕ್ಕರೆ, ಬಾಳೆಹಣ್ಣು ಮತ್ತು ತುಪ್ಪದಿಂದ ತಯಾರಿಸಿದ್ದಾಗಿರಬೇಕು. ಇದರಿಂದ ಶಿವ ಪ್ರಸನ್ನನಾಗುತ್ತಾನೆ ಮತ್ತು ಶಿವನ ಆಶೀರ್ವಾದದಿಂದ  ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ,

ಶಿವನಿಗೆ ಬೆಲ್ಪತ್ರಿ ಅರ್ಪಿಸಿ
ಹಾನಿಗೊಳಗಾಗದೆ ಇರುವ 21 ಬೆಲ್ಪತ್ರಿಗಳನ್ನು ತೆಗೆದುಕೊಂಡು, ನೀರಿನಿಂದ ಅವುಗಳ ಶುದ್ಧೀಕರಣ ಮಾಡಬೇಕು. ನಂತರ ಗಂಧವನ್ನು ತೆಗೆದುಕೊಂಡು ಅವುಗಳ ಮೇಲೆ ಓಂ ನಮಃಶಿವಾಯ್ ಬರೆದು ಶಿವನಿಗೆ ಅರ್ಪಿಸಿ, ನಿಮ್ಮ ಇಷ್ಟಾರ್ಥ ನೆರವೇರಿಸಲು ಪ್ರಾರ್ಥನೆ ಸಲ್ಲಿಸಿ.

ತುಪ್ಪದ ದೀಪ ಬೆಳಗಿ
ಶ್ರಾವಣ ಶಿವರಾತ್ರಿಯ ದಿನ ಶಿವಾಲಯಕ್ಕೆ ಭೇಟಿ ನೀಡಿ ಶಿವನ ಮುಂದೆ ತುಪ್ಪದ ದೀಪ ಬೆಳಗಿ. ಈ ರೀತಿ ಮಾಡುವುದರಿಂದ ಮಹಾದೇವ ಶುಖ-ಶಾಂತಿ, ಧನ-ಸಂಪತ್ತು ಕರುಣಿಸಿ ಆಶೀರ್ವದಿಸುತ್ತಾನೆ. 

ಈ ಸಂಗತಿಗಳನ್ನು ದಾನ ಮಾಡಿ
ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಇದರ ಜೊತೆಗೆ ಮಾಸಿಕ ಶಿವರಾತ್ರಿಯ ದಿನ ನಿರ್ಗತಿಕರಿಗೆ ಹಾಗೂ ಬಡವರಿಗೆ ಅನ್ನದಾನ ಮಾಡಿ. ಇದಲ್ಲದೆ ನೀವು ವಸ್ತ್ರ ಇತ್ಯಾದಿಗಳನ್ನು ಕೂಡ ದಾನ ಮಾಡಬಹುದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಇರಲಿದೆ.


ಇದನ್ನೂ ಓದಿ-Shivratri 2023: ಈ ಬಾರಿಯ ಶ್ರಾವಣ ಶಿವರಾತ್ರಿಯ ದಿನ ನಿರ್ಮಾಣಗೊಳ್ಳುತ್ತಿದೆ 'ವೃದ್ಧಿ ಯೋಗ', ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

ಹಿಂದೂ ಪಂಚಾಂಗದ ಪ್ರಕಾರ ವರ್ಷದಲ್ಲಿ ಒಟ್ಟು 24 ಶಿವರಾತ್ರಿಗಳು ಬೀಳುತ್ತವೆ ಮತ್ತು ಪ್ರತಿ ತಿಂಗಳ ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷದ ಚತುರ್ದಶಿಯ ದಿನ ಶಿವರಾತ್ರಿ ಆಚರಿಸಲಾಗುತ್ತದೆ. 


ಇದನ್ನೂ ಓದಿ-ಆದಿತ್ಯನ ಮನೆಯಲ್ಲಿ ಮಂಗಳ-ಶುಕ್ರರ ಕೃಪೆಯಿಂದ ಅದ್ಭುತ ಯೋಗ, 3 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.