Shukra Gochar Bad Impact: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು-ಐಷಾರಾಮಿ ಮತ್ತು ಪ್ರೀತಿಯ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು ನಿನ್ನೆಯಷ್ಟೇ ಎಂದರೆ ಏಪ್ರಿಲ್ 06, 2023ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಕ್ರನು ಮೇ 02, 2023ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿಯವರೆಗೆ ಮುಂದಿನ 25 ದಿನಗಳ ಕಾಲ ಶುಕ್ರನು ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಶುಕ್ರ ರಾಶಿ ಪರಿವರ್ತನೆಯಿಂದ ಯಾವೆಲ್ಲಾ ರಾಶಿಯವರ ಜೀವನದಲ್ಲಿ ಕೆಟ್ಟ ದಿನಗಳು ಆರಂಭವಾಗಿವೆ. ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ... 


ಮುಂದಿನ 25 ದಿನಗಳು ಈ ರಾಶಿಯವರನ್ನು ಕಾಡಲಿದ್ದಾನೆ ಶುಕ್ರ: 
ಮಿಥುನ ರಾಶಿ: 

ಶುಕ್ರ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಆದಾಯಕ್ಕಿಂತ ಖರ್ಚನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ನಿಮ್ಮ ಖರ್ಚಿಗೆ ಕಡಿವಾಣ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. 


ಇದನ್ನೂ ಓದಿ- Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!


ತುಲಾ ರಾಶಿ:
ಈ ಸಮಯದಲ್ಲಿ ಶುಕ್ರನು ತುಲಾ ರಾಶಿಯವರ ಆರ್ಥಿಕ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ. ಮುಂದಿನ 25ದಿನಗಳವರೆಗೆ ನೀವು ಯಾವುದೇ ರೀತಿಯ ಸಾಲವನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡದೇ ಇರುವುದು ಒಳ್ಳೆಯದು. ಸಾಧ್ಯವಾದಷ್ಟು ಮೇ 02ರವರೆಗೆ ಯಾವುದೇ ರೀತಿಯ ಹೊಸ ವ್ಯವಹಾರಗಳಿಗೆ ಕೈ ಹಾಕಬೇಡಿ.  ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಅದಕ್ಕಾಗಿಯೇ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು.


ಧನು ರಾಶಿ: 
ಶುಕ್ರನ ರಾಶಿ ಬದಲಾವಣೆಯು ಧುನ ರಾಶಿಯವರಿಗೆ ಹಣಕಾಸಿನ ಮುಗ್ಗಟ್ಟನ್ನು ಹೆಚ್ಚಿಸಬಹುದು. ಇದು ನಿಮ್ಮ ಒತ್ತಡವನ್ನೂ ಸಹ ಹೆಚ್ಚಿಸಬಹುದು. ಈ ಸಮಯದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.  ಕಾನೂನು ವಿಷಯಗಳಲ್ಲಿ ಸಲಹೆ ಪಡೆದ ನಂತರವೇ ದೊಡ್ಡ ನಿರ್ಧಾರ ತೆಗೆದುಕೊಳ್ಳಿ. ಆದಾಯದ ಕೊರತೆಯಿಂದ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.  ಸಾಧ್ಯವಾದಷ್ಟು ಹೊರಗಿನ ಆಹಾರಗಳ ಸೇವನೆಯನ್ನು ತಪ್ಪಿಸಿ.


ಇದನ್ನೂ ಓದಿ-  ಮೇಷ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ


ಮೀನ ರಾಶಿ: 
ಶುಕ್ರ ರಾಶಿ ಪರಿವರ್ತನೆಯ ಪರಿಣಾಮವಾಗಿ ಮೀನ ರಾಶಿಯವರು ವೃತ್ತಿ-ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ವಲಯದಲ್ಲಿ ಏರಿಳಿತಗಳು ಉಂಟಾಗಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.