ಶುಕ್ರ ಮಹಾದಶಾ ಪ್ರಭಾವ: 20 ವರ್ಷಗಳವರೆಗೆ ಇಂತಹವರಿಗೆ ರಾಜಯೋಗ
Shukra Mahadasha: ಸುಖ-ಸಂಪತ್ತು, ಐಷಾರಾಮಿ ಜೀವನದ ಅಂಶವಾಗಿರುವ ಶುಕ್ರನು ಜಾತಕದಲ್ಲಿ ಮಹಾದಶ ಸ್ಥಾನದಲ್ಲಿದ್ದರೆ ಅದನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಮಹಾದಶಾ ಪ್ರಭಾವ ಇರುತ್ತದೋ, ಆತ ಪ್ರತಿ ಹಂತದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾನೆ ಎಂದು ಹೇಳಲಾಗುತ್ತದೆ.
Shukra Mahadasha Effect: ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು-ವೈಭವ, ಐಷಾರಾಮಿ, ಪ್ರೀತಿಯ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನನ್ನು ತುಂಬಾ ಶುಭಕರ ಗ್ರಹ ಎಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹವು ಉತ್ಕೃಷ್ಟನಾಗಿದ್ದಾಗ ಅದನ್ನು ಶುಕ್ರ ಮಹಾದಶಾ ಎಂತಲೂ ಕರೆಯಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲಿಷ್ಠನಾಗಿದ್ದರೆ ಶುಕ್ರನ ಮಹಾದಶಾ ಅದೃಷ್ಟವನ್ನು ಎಚ್ಚರಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಮಹಾದಶಾ ಪ್ರಭಾವವಿದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಈ ಸಮಯದಲ್ಲಿ ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನಾ ಮಹಾದಶಾ ಪ್ರಭಾವವು ಗರಿಷ್ಠ 20 ವರ್ಷಗಳವರೆಗೆ ಅಂದರೆ ಎರಡು ದಶಕಗಳವರೆಗೆ ಇರುತ್ತದೆ. ಈ ಲೇಖನದಲ್ಲಿ ಶುಕ್ರ ಮಹಾದಶಾ ಪ್ರಭಾವ ಮತ್ತು ಪರಿಹಾರಗಳ ಬಗ್ಗೆ ತಿಳಿಯೋಣ...
ಇದನ್ನೂ ಓದಿ- Astro Tips: ಬುಧ ಗ್ರಹದಿಂದ ಈ ರಾಶಿಯವರಿಗೆ ಸಿಗಲಿದೆ 5 ದೊಡ್ಡ ಪ್ರಯೋಜನಗಳು
ಶುಕ್ರ ಮಹಾದಶಾ ಪ್ರಭಾವ:
ವ್ಯಕ್ತಿಯ ಜಾತಕದಲ್ಲಿ ಶುಕ್ರನು ಉಚ್ಚ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ಶುಕ್ರನ ಮಹಾದಶಾ ಪ್ರಭಾವದಿಂದ ರಾಜಯೋಗವನ್ನು ಅನುಭವಿಸುತ್ತಾನೆ. ಅವರು ಸುಖ-ಸಂತೋಷದ ಪ್ರೀತಿಯ ಜೀವನವನ್ನು ಹೊಂದಿರುತ್ತಾರೆ. ಅಂತೆಯೇ, ಜಾತಕದಲ್ಲಿ ಶುಕ್ರನು ಅಶುಭ ಸ್ಥಾನದಲ್ಲಿದ್ದಾಗ ಅಂತಹ ವ್ಯಕ್ತಿ ಜೀವನದಲ್ಲಿ ನಾನಾ ರೀತಿಯ ಕಷ್ಟಗಳು, ಹಣಕಾಸಿನ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಮುಖ್ಯ. ಇದರಿಂದ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿದ್ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ- Astro Tips: ಬುಧ ಗ್ರಹದಿಂದ ಈ ರಾಶಿಯವರಿಗೆ ಸಿಗಲಿದೆ 5 ದೊಡ್ಡ ಪ್ರಯೋಜನಗಳು
ಶುಕ್ರ ದೋಷಕ್ಕೆ ಪರಿಹಾರಗಳು:
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಅಶುಭ ಸ್ಥಾನದಲ್ಲಿದ್ದಾಗ ಅಥವಾ ಶುಕ್ರ ದೋಷವಿದ್ದರೆ ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಶುಭ ಫಲಿತಾಂಶಗಳನ್ನು ಕಡಿಮೆ ಮಾಡಬಹುದು. ಈ ಕ್ರಮಗಳನ್ನು ಕೈಗೊಳ್ಳಲು ಶುಕ್ರವಾರವನ್ನು ತುಂಬಾ ಪ್ರಾಶಸ್ತ್ಯ. ಇದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಶುಕ್ರ ದೋಷಕ್ಕೆ ಸುಲಭ ಪರಿಹಾರಗಳೆಂದರೆ:
* ಜಾತಕದಲ್ಲಿ ಶುಕ್ರ ದೋಷದಿಂದ ಪರಿಹಾರವನ್ನು ಪಡೆಯಲು ಪ್ರತಿ ಶುಕ್ರವಾರ 'ಶುನ್ ಶುಕ್ರಾಯ ನಮಃ' ಬೀಜ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.
* ಶುಕ್ರವಾರದಂದು ಬಿಳಿ ವಸ್ತ್ರವನ್ನು ಧರಿಸಿ.
* ಪ್ರತಿ ಶುಕ್ರವಾರದಂದು ಮುಸ್ಸಂಜೆ ವೇಳೆಯಲ್ಲಿ ನಿಶಿತ ಕಾಲದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿ, ಹಾಲಿನ ಪಾಯಸವನ್ನು ನೇವೇದ್ಯವಾಗಿ ಅರ್ಪಿಸಿ.
* ಇದಲ್ಲದೆ, ಬಿಳಿ ಬಣ್ಣದ ಸಿಹಿ ಖಾದ್ಯಗಳನ್ನು ಸಹ ನೇವೇದ್ಯವಾಗಿ ಅರ್ಪಿಸಬಹುದು.
* ಶುಕ್ರವಾರದಂದು ಕೆಂಪು, ಕಪ್ಪು ಇರುವೆಗಳಿಗೆ ಸಕ್ಕರೆ ಹಾಕಿ.
* ಶುಕ್ರವಾರದ ದಿನ ಪೂಜೆ ಬಳಿಕ ಮದುವೆ ಆಗದ ಹೆಣ್ಣು ಮಕ್ಕಳನ್ನು ಕರೆದು ಕುಂಕುಮದ ಜೊತೆಗೆ ಹಾಲಿನಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ನೀಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.