19 ವರ್ಷಗಳ ಬಳಿಕ ಈ ಗ್ರಾಮದಲ್ಲಿ ನರಬಲಿ ಆಚರಣೆ.. 6 ತಾಸು ಉಸಿರಾಟ ನಿಲ್ಲಿಸ್ತಾರಂತೆ ವ್ಯಕ್ತಿ!
ಸೀಗಮಾರಮ್ಮ ದೇವಾಲಯದ ಅರ್ಚಕರು, ಸೀಗೆ ಮಾರಮ್ಮನ ಒಕ್ಕಲಿನ ವ್ಯಕ್ತಿಯೊಬ್ಬರ ಎದೆ ಮೇಲೆ ಕಾಲಿಟ್ಟಾಗ ಅವರ ಪ್ರಾಣ ಪಕ್ಷಿ ಹಾರಿಹೋಗಲಿದ್ದು ಬಳಿಕ ಆ ವ್ಯಕ್ತಿಯ ಶವ ಮೆರವಣಿಗೆ ರೀತಿ ನಡೆಸಲಾಗುತ್ತದೆ. ಮೆರವಣಿಗೆ ಎಲ್ಲ ಮುಗಿದ ಬಳಿಕ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.
ಚಾಮರಾಜನಗರ: ಪ್ರಾಣಿ ಬಲಿಗಳ ಹಬ್ಬಗಳನ್ನು ನೀವು ಕೇಳಿರುತ್ತೀರಿ. ಆದರೆ, ಮನುಷ್ಯನನ್ನೇ ಬಲಿ ಕೊಡುವ ಈ ಹಬ್ಬದ ಬಗ್ಗೆ ತಿಳಿದರೇ ಖಂಡಿತಾ ಹೌಹಾರುತ್ತೀರಿ, ಮೈ ರೋಮಾಂಚನಗೊಳಿಸುವ ಹಬ್ಬವೊಂದು 19 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿದೆ.
ಹೌದು..., ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಸೀಗಮಾರಮ್ಮನ ಬಲಿ ಹಬ್ಬ ಎಂಬ ಆಚರಣೆ ಇಂದು ನಡೆಯಲಿದ್ದು ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ ಬರೋಬ್ಬರಿ 6 ತಾಸು ಬಳಿಕ ಮತ್ತೇ ಬದುಕುತ್ತಾರಂತೆ. ಕಳೆದ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು ಇಂದು ತಡರಾತ್ರಿ ನರಬಲಿ ಆಚರಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ- ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮದ ದಂಗಲ್...!
ಸೀಗಮಾರಮ್ಮ ದೇವಾಲಯದ ಅರ್ಚಕರು, ಸೀಗೆ ಮಾರಮ್ಮನ ಒಕ್ಕಲಿನ ವ್ಯಕ್ತಿಯೊಬ್ಬರ ಎದೆ ಮೇಲೆ ಕಾಲಿಟ್ಟಾಗ ಅವರ ಪ್ರಾಣ ಪಕ್ಷಿ ಹಾರಿಹೋಗಲಿದ್ದು ಬಳಿಕ ಆ ವ್ಯಕ್ತಿಯ ಶವ ಮೆರವಣಿಗೆ ರೀತಿ ನಡೆಸಲಾಗುತ್ತದೆ. ಮೆರವಣಿಗೆ ಎಲ್ಲ ಮುಗಿದ ಬಳಿಕ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.
ಇದನ್ನೂ ಓದಿ- ಗುಳೇದಗುಡ್ಡ ಶೂಟ್ ಔಟ್ ಪ್ರಕರಣ : ರಕ್ತಸ್ರಾವದಿಂದ ಮಹಿಳೆ ಸಾವು
ಬಲಿ ಹೊಂದಿದಾತ 6 ತಾಸು ಉಸಿರಾಟ ನಿಲ್ಲಿಸಲಿದ್ದಾನೆ. ಆತನನ್ನು ದೇವಾಲಯದಲ್ಲಿ ಮಲಗಿಸಿದ್ದಾಗ ಆತನ ಕಿವಿ, ಕಣ್ಣಿಗೆ ಇರುವೆಗಳು ಮುತ್ತಿಕ್ಕುವುದಂತೆ. ಈ ವಿಶಿಷ್ಟ ಆಚರಣೆ ಇಂದು ಮಧ್ಯರಾತ್ರಿ 12.30ರಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೂ ನಡೆಯಲಿದ್ದು ಸಾವಿರಾರು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.