Snake In Dream: ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ಕೆಲವು ದೃಶ್ಯಗಳು ನಮಗೆ ಭವಿಷ್ಯದ ಸಂಕೇತವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ನಡೆಯುವ ಘಟನೆಗಳು, ಇಲ್ಲವೇ ಕಾಣುವ ವಸ್ತುಗಳು ಭವಿಷ್ಯದಲ್ಲಿ ನಡೆಯಬಹುದಾದ ಶುಭ-ಅಶುಭ ಘಟನೆಗಳ ಸಂಕೇತ ಎಂದು ಬಣ್ಣಿಸಲಾಗುತ್ತದೆ.  ಅಂತೆಯೇ ಕನಸಿನಲ್ಲಿ ಹಾವನ್ನು ಕಂಡರೆ ಹಲವು ಅರ್ಥಗಳಿವೆ. 


COMMERCIAL BREAK
SCROLL TO CONTINUE READING

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾವನ್ನು ಕಾಣುವುದಕ್ಕೆ ಬಹಳ ವಿಶೇಷ ಅರ್ಥವಿದೆ. ಅದರಲ್ಲೂ, ಕನಸಿನಲ್ಲಿ ಕಾಣುವ ಹಾವಿನ ಬಣ್ಣದ ಆಧಾರದ ಮೇಲೆ ಇದು ಧನಲಾಭವನ್ನು ನೀಡುತ್ತದೆಯೇ? ಇಲ್ಲ ನಷ್ಟವನ್ನು ಸೂಚಿಸುತ್ತದೆಯೇ ಎಂದು ಹೇಳಲಾಗುತ್ತವೆ. ವಾಸ್ತವವಾಗಿ, ಹಾವುಗಳು ಅಥವಾ ಸರ್ಪಗಳನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಕನಸಿನಲ್ಲಿ ಹಾವಿನ ಗೋಚರ ಭವಿಷ್ಯದಲ್ಲಾಗಬಹುದಾದ ಹಣಕಾಸಿನ ಲಾಭ ಅಥವಾ ನಷ್ಟದ ಸಂಕೇತ ಎನ್ನಲಾಗುತ್ತದೆ. 


ಕನಸಿನಲ್ಲಿ ಯಾವ ಬಣ್ಣದ ಹಾವನ್ನು ಕಂಡರೆ ಧನಲಾಭ? ಯಾವ ಬಣ್ಣದ ಹಾವು ನಷ್ಟದ ಸಂಕೇತ:- 
ಕಪ್ಪು ಬಣ್ಣದ ಹಾವು: 

ಯಾವುದೇ ವ್ಯಕ್ತಿ ಕನಸಿನಲ್ಲಿ ಉದ್ದವಾದ ಕಪ್ಪು ಹಾವನ್ನು ಕಂಡರೆ ಅದನ್ನು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಪ್ಪು ಹಾವನ್ನು ಕಂಡರೆ ಉದ್ಯೋಗಸ್ಥರಿಗೆ ಬಡ್ತಿ, ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಶೀಘ್ರದಲ್ಲೇ ಆಫರ್ ಲೆಟರ್ ಸಿಗಬಹುದು. 


ಇದನ್ನೂ ಓದಿ- ಕನಸಿನಲ್ಲಿ ಈ ವಸ್ತುಗಳ ಗೋಚರ ಭಾಗ್ಯೋದಯದ ಸಂಕೇತ


ಗೋಲ್ಡ್ ಕಲರ್ ಹಾವು: 
ನಿಮ್ಮ ಕನಸಿನಲ್ಲಿ ಚಿನ್ನದ ಬಣ್ಣದ ಹಾವನ್ನು ಕಂಡರೆ ಅದು ಶೀಘ್ರದಲ್ಲೇ ನಿಮಗೆ ಧನಲಾಭವಾಗಲಿದೆ. ನಿಮ್ಮ ಇಷ್ಟಾರ್ಥ ಸಿದ್ದಿಯಾಗಲಿದೆ ಎಂದು ಸೂಚಿಸುತ್ತದೆ. 


ಬಿಳಿ ಹಾವು: 
ನೀವು ಕನಸಿನಲ್ಲಿ ಬಿಳಿ ಬಣ್ಣದ ಹವನ್ನು ಕಂಡರೆ ವ್ಯಾಪಾರದಲ್ಲಿ ಬಂಪರ್ ಪ್ರಗತಿ ಮತ್ತು ಭಾರೀ ಹಣಕಾಸಿನ ಲಾಭವನ್ನು ಇದು ಸಂಕೇತಿಸುತ್ತದೆ. 


ಹಸಿರು ಬಣ್ಣದ ಹಾವು: 
ಕನಸಿನಲ್ಲಿ ಹಸಿರು ಬಣ್ಣದ ಹಾವನ್ನು ಕಂಡರೆ ಶೀಘ್ರದಲ್ಲೇ ನೀವು ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳಿಂದ ಮುಕ್ತಿ ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ. 


ಕೆಂಪು ಬಣ್ಣದ ಹಾವು: 
ಕನಸಿನಲ್ಲಿ ನೀವು  ಕೆಂಪು ಬಣ್ಣದ ಹಾವನ್ನು ಕಂಡರೆ ಅತಿ ಶೀಘ್ರದಲ್ಲೇ ಬಹಳ ದೊಡ್ಡ ಜವಾಬ್ಧಾರಿಯೊಂದು ನಿಮ್ಮ ಹೆಗಲೇರಲಿದೆ ಎಂದರ್ಥ. 


ಇದನ್ನೂ ಓದಿ- Auspicious Dreams: ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಖುಲಾಯಿಸಲಿದೆ ಅದೃಷ್ಟ


ಹಳದಿ ಹಾವು: 
ಕನಸಿನಲ್ಲಿ ಹಳದಿ ಹಾವಿನ ಗೋಚರವು ಶೀಘ್ರದಲ್ಲೇ ಉದ್ಯೋಗ ನಿಮಿತ್ತ ನೀವು ನಿಮ್ಮ ಮನೆಯನ್ನು ತೊರೆಯಬೇಕಾಗಬಹುದು ಎಂಬುದನ್ನು ಸಂಕೇತಿಸುತ್ತದೆ. 


ಕನಸಿನಲ್ಲಿ ಬಣ್ಣಬಣ್ಣದ ಹಾವು : 
ಕನಸಿನಲ್ಲಿ ಬಣ್ಣಬಣ್ಣದ ಹಾವು ಕಂಡರೆ ಅತಿ ಶೀಘ್ರದಲ್ಲೇ ನಿಮ್ಮ ಬದುಕಿನಲ್ಲಿ ಸಂತೋಷದ ಕ್ಷಣಗಳು ಆರಂಭವಾಗಲಿವೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಿ, ಕೈತುಂಬಾ ಧನ ಲಾಭವನ್ನು ಕಾಣುವಿರಿ ಎಂದರ್ಥ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.