ದಿನಭವಿಷ್ಯ 02-10-2024: ಸರ್ವಪಿತೃ ಅಮಾವಾಸ್ಯೆಯಂದೇ ಸೂರ್ಯಗ್ರಹಣ, ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
Today Horoscope 02nd October 2024: ಸರ್ವಪಿತೃ ಅಮಾವಾಸ್ಯೆಯಂದೇ ಸೂರ್ಯಗ್ರಹಣ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆಯ ಈ ದಿನ ಬುಧವಾರ ಸೂರ್ಯಗ್ರಹಣ ಉತ್ತರಾ ನಕ್ಷತ್ರ, ಬ್ರಹ್ಮಾ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರಿಗೆ ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಅದೃಷ್ಟದ ಬಲದಿಂದ ಜಯ ಸಾಧಿಸುವಿರಿ. ಆದರೂ, ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ಸಂಜೆ ಸ್ನೇಹಿತರೊಂದಿಗೆ ಹೊರಗೆ ಹೋಗಲು ಯೋಜಿಸಬಹುದು. ದಿನದ ಉತ್ತರಾರ್ಧದಲ್ಲಿ ಶುಭ ಸುದ್ದಿ ಪಡೆಯುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮಗಿಂದು ಶುಭ ದಿನ. ದೂರದ ಊರಿನಿಂದ ಶುಭ ಸುದ್ದಿಯನ್ನು ಕೇಳುವಿರಿ. ಸ್ವಂತ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ಇದರಿಂದಾಗಿ ಹಣಕಾಸಿನ ಸ್ಥಿತಿ ಮೊದಲಿಗಿಂತಲೂ ಬಲಗೊಳ್ಳಲಿದೆ. ಹೂಡಿಕೆಯಿಂದ ಲಾಭವಾಗಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಉತ್ತಮ ಗಳಿಕೆಯ ದಿನ. ವ್ಯಾಪಾರಸ್ಥರು ಇಂದು ತಮ್ಮ ವ್ಯವಹಾರದಲ್ಲಿ ಯಶಸ್ಸು ಪಡೆಯುವರು. ಅದೃಷ್ಟದ ಬೆಂಬಲದಿಂದ ನಿಮ್ಮ ಬಹುದಿನದ ಆಸೆಗಳು ಈಡೇರಲಿವೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮನ್ನಣೆ ದೊರೆಯುವುದರಿಂದ ಮನಸ್ಸಿಗೆ ಖುಷಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಆಹ್ಲಾದಕರ ದಿನವನ್ನು ಆನಂದಿಸುವಿರಿ. ನಿಮ್ಮ ಸಂಗಾತಿಯ ಆಶ್ಚರ್ಯಕರ ಉಡುಗೊರೆಯೊಂದನ್ನು ಸ್ವೀಕರಿಸುವ ಸಾಧ್ಯತೆ ಇದೆ. ಅಪಾಯಕಾರಿ ಕೆಲಸ ಮತ್ತು ನಿರ್ಧಾರಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ಭಾರೀ ನಷ್ಟ ಅನುಭವಿಸಬೇಕಾಗಬಹುದು.
ಇದನ್ನೂ ಓದಿ- 200 ವರ್ಷಗಳ ಬಳಿಕ ಒಟ್ಟಿಗೆ ತ್ರಿವಳಿ ರಾಜಯೋಗ, ಈ ಜನರಿಗೆ ಸರ್ವ ಸುಖ, ಎಂದೂ ಕಂಡಿರದ ಸಂಪತ್ತು ಪ್ರಾಪ್ತಿ
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ ಬದುಕಿನಲ್ಲಿ ಕಠಿಣ ಪರಿಶ್ರಮಕ್ಕಿಂತ ಅದೃಷ್ಟವು ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಕಾರಣಾಂತರಗಳಿಂದ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹ್ದೂ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ವ್ಯವಹಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ನಿಮ್ಮ ಕಠಿಣ ಪರಿಶ್ರಮ ಇಂದು ನಿಮಗೆ ಯಶಸ್ಸನ್ನು ತರುತ್ತದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮಾಯವಾಗಿ ಸುಮಧುರವಾದ ಕ್ಷಣಗಳನ್ನು ಅನುಭವಿಸುವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ಜನರು ಇಂದು ಉದ್ಯೋಗದಲ್ಲಿ ಕೀರ್ತಿ, ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಮನೆಯಲ್ಲಿರುವ ಹಿರಿಯರಿಂದ ಪ್ರೀತಿಯಿಂದ ನಡೆದುಕೊಳ್ಳುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೆ, ನಿಮ್ಮ ಆರೋಗ್ಯವು ಇಂದು ಕಾಳಜಿಯ ವಿಷಯವಾಗಿರುತ್ತದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಈ ರಾಶಿಯ ಜನರು ಇಂದು ಕಠಿಣ ಪರಿಶ್ರಮದ ಸಂಪೂರ್ಣ ಪ್ರತಿಫಲವನ್ನು ಅನುಭವಿಸುವಿರಿ. ವ್ಯಾಪಾರಸ್ಥರು ಬಂಪರ್ ಆದಾಯವನ್ನು ಗಳಿಸುವರು. ಪ್ರೀತಿಯ ಜೀವನದಲ್ಲಿ ಅದೃಷ್ಟದ ದಿನ. ಸಂಜೆವೇಳೆಗೆ ನಿಮ್ಮ ಸ್ನೇಹಿತರು ಅಥವಾ ಅತಿಥಿಗಳು ಮನೆಗೆ ಆಗಮಿಸಬಹುದು.
ಇದನ್ನೂ ಓದಿ- Sarva Pitru Amavasya: ಅಮಾವಾಸ್ಯೆಯಂದೇ ಸೂರ್ಯ ಗ್ರಹಣ, ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
ಧನು ರಾಶಿಯವರ ಭವಿಷ್ಯ (Sagittarius Horoscope):
ಈ ರಾಶಿಯ ಜನರಿಗೆ ಇಂದು ನಿಮ್ಮ ಬಹುದಿನದ ಆಸೆ ಈಡೇರಬಹುದು. ನಿಮ್ಮ ಸಂಬಂಧಿಕರಿಂದ ಗೌರವ ಕೀರ್ತಿ ಹೆಚ್ಚಾಗಲಿದೆ. ಇಂದು ನೀವು ಕೆಲವು ಅನಗತ್ಯ ವೆಚ್ಚಗಳನ್ನು ಸಹ ಮಾಡಬೇಕಾಗಬಹುದು. ದಾನ ಮಾಡುವುರಿಂದ ಹೆಚ್ಚಿನ ಪ್ರಯೋಜನ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ನಿಮಗೆ ಒಳ್ಳೆಯ ದಿನ. ಮಕ್ಕಳೊಂದಿಗೆ ಮನರಂಜನೆಯ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯನ್ನು ಎಲ್ಲೋ ಹೊರಗೆ ಕರೆದುಕೊಂಡು ಹೋಗಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ಜನರಿಗೆ ಇಂದು ಉತ್ತೇಜನಕಾರಿ ದಿನವಾಗಿರುತ್ತದೆ. ನಿಮ್ಮ ಆಸೆಗಳು ಈಡೇರುವುದರಿಂದ ಮನಸ್ಸಿಗೆ ಸಂತೋಷ ಇರಲಿದೆ. ಇಂದು ವ್ಯಾಪಾರದಲ್ಲಿ ಉತ್ತಮ ಗಳಿಕೆ ಇರುತ್ತದೆ. ಇಂದು ಮನೆಯಲ್ಲಿ ವ್ಯವಸ್ಥೆಗಳನ್ನು ಸುಧಾರಿಸುವತ್ತ ಗಮನ ಹರಿಸುತ್ತೀರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ರಾಶಿಯ ಜನರು ವಿವಾದಾತ್ಮಕ ವಿಷಯಗಳಿಂದ ದೂರ ಉಳಿದರೆ ಒಳಿತು. ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ನೀವು ಸ್ನೇಹಿತರು ಮತ್ತು ನಿಕಟ ಸಂಬಂಧಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.
ಸಾಂಪ್ರದಾಯಿಕ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.