Somavara shiva puje : ಸನಾತನ ಧರ್ಮದಲ್ಲಿ, ವಾರದ ಏಳು ದಿನಗಳನ್ನು ಒಂದೊಂದು ದೇವರ ಆರಾಧನೆಗೆ ಮೀಸಲಿಡಲಾಗಿದೆ. ಸೋಮವಾರದಂದು, ಶಿವನ ಆರಾಧನೆಯ ದಿನ ಎಂದು ಕರೆಯಲಾಗುತ್ತದೆ. ಅಂದು ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿದರೆ ನಿಮ್ಮ ಜೀವನದಲ್ಲಿರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷಿಗಳ ಪ್ರಕಾರ, ಸೋಮವಾರದಂದು ನೀವು ಕೆಲವು ವಿಶೇಷ ಪರಿಹಾರ ಕ್ರಮಗಳನ್ನು ಕೈಗೊಂಡರೆ, ನಿಮ್ಮ ಅದೃಷ್ಟವು ಕೆಲವೇ ಸಮಯದಲ್ಲಿ ಸುಧಾರಿಸುತ್ತದೆ. ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶದಿಂದ ನೀವು ತೊಂದರೆಗೊಳಗಾಗಿದ್ದರೆ, ಪ್ರತಿ ಸೋಮವಾರ ಬೆಳಿಗ್ಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ಮತ್ತು ಶಿವಲಿಂಗದ ಮೇಲೆ ಹಾಲು, ಗಂಗಾಜಲ, ಬಿಳಿ ಶ್ರೀಗಂಧ ಅರ್ಪಿಸಿ. ಇದರೊಂದಿಗೆ ದೇವಸ್ಥಾನದಲ್ಲಿ ಕುಳಿತು ಶಿವ ರಕ್ಷಾ ಸತಾರಂ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. 


ಇದನ್ನೂ ಓದಿ:ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!


ನಿಮ್ಮ ಉದ್ಯೋಗದಲ್ಲಿ ತೊಂದರೆ, ವ್ಯವಹಾರವು ನಿರೀಕ್ಷೆಯಂತೆ ನಡೆಯುತ್ತಿಲ್ಲವೇ..? ಹಾಗಿದ್ರೆ ತಾಮ್ರದ ಪಾತ್ರೆಯಲ್ಲಿ ಪಂಚಾಮೃತವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಅಭಿಷೇಕ ಸಮಯದಲ್ಲಿ ಸ್ವಲ್ಪ ನೀರು ಉಳಿಸಿ. ನಂತರ ಆ ನೀರನ್ನು ಮತ್ತೊಂದು ಪಾತ್ರೆಗೆ ತುಂಬಿಸಿ ಅದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಸಿಂಗಪಡಿಸಿ. ಇದನ್ನು ಮಾಡುವಾಗ, ಸಂಪೂರ್ಣ ಭಕ್ತಿಯಿಂದ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಲು ಮರೆಯಬೇಡಿ.  


ಜಾತಕದಲ್ಲಿ ಚಂದ್ರನ ದುರ್ಬಲ ಸ್ಥಾನವನ್ನು ಹೊಂದಿರುವ ಜನರು ಸೋಮವಾರ ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ದೈನಂದಿನ ಕೆಲಸ ಮತ್ತು ಸ್ನಾನದ ನಂತರ ಶಿವಲಿಂಗವನ್ನು ಪೂಜಿಸಬೇಕು. ಇದರ ನಂತರ 21 ಎಲೆಗಳ ಮೇಲೆ ಬಿಳಿ ಚಂದನವನ್ನು ಲೇಪಿಸಿ ಭೋಲೆನಾಥನಿಗೆ ಅರ್ಪಿಸಿ. ಶಿವಾಷ್ಟಕ ಅಥವಾ ಶಿವ ಚಾಲೀಸವನ್ನು ಪಠಿಸಿ. ಇದರಿಂದ ಜಾತಕದಲ್ಲಿ ಚಂದ್ರನ ಸ್ಥಾನವು ಕ್ರಮೇಣ ಬಲಗೊಳ್ಳುತ್ತದೆ. ಸ್ಥಗಿತಗೊಂಡ ನಿಮ್ಮ ಕೆಲಸಗಳು ತಾವಾಗಿಯೇ ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.


ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, Zee Kannada News ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ