ಈ ಗಿಡದ ಬೇರನ್ನು ತಿಜೋರಿಯಲ್ಲಿರಿಸಿ ಮ್ಯಾಜಿಕ್ ನೋಡಿ, ಹಣದ ಸುರಿಮಳೆಗೈಯುತ್ತಾಳೆ ತಾಯಿ ಲಕ್ಷ್ಮಿ!
Shankha Pushpi Vastu Tips: ಕೆಲವು ಸಸ್ಯಗಳನ್ನು ವಾಸ್ತು ಶಾಸ್ತ್ರದಲ್ಲಿ ತುಂಬಾ ಅದೃಷ್ಟ ತರುವ ಮತ್ತು ಮಂಗಳಕರವೆಂದು ವಿವರಿಸಲಾಗಿದೆ. ಮನೆಯಲ್ಲಿ ಈ ಗಿಡಗಳನ್ನು ತಂದು ನೆಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದದಿಂದ ಹಣದ ಸುರಿಮಳೆ ಆರಂಭವಾಗುತ್ತದೆ ಮತ್ತು ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ (Spiritual News In Kannada).
ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಜನರು ಅವುಗಳನ್ನು ಪೂಜಿಸುತ್ತಾರೆ. ಮತ್ತೊಂದೆಡೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಅಥವಾ ಸುತ್ತಲೂ ಕೆಲವು ಗಿಡಗಳನ್ನು ನೆಡುವುದು ತುಂಬಾ ಶ್ರೇಯಸ್ಕರ ಪರಿಗಣಿಸಲಾಗುತ್ತದೆ. ಒಂದೆಡೆ ಈ ಸಸ್ಯಗಳು ಮನೆಗೆ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ಅದೇ ಸಮಯದಲ್ಲಿ, ಅವು ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚರಿಸುವಂತೆ ಮಾಡುತ್ತವೆ. ಅವುಗಳನ್ನು ಮನೆಯಲ್ಲಿ ನೆಟ್ಟ ತಕ್ಷಣ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ.
ಸಮೃದ್ಧಿಗಾಗಿ ಈ ಉಪಾಯ ಮಾಡಿ
ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲು ಹೊರಟಿರುವ ಸಷ್ಯವನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಇದನ್ನು ತುಂಬಾ ಅದೃಷ್ಟ ತರುವ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ವಿಷ್ಣು, ಮಹಾದೇವ ಮತ್ತು ತಾಯಿ ಲಕ್ಷ್ಮಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ, ಈ ಮೂವರ ಆಶೀರ್ವಾದವು ಒಟ್ಟಿಗೆ ಸಿಗಲು ಪ್ರಾರಂಭಿಸುತ್ತದೆ. ಈ ಸಸ್ಯವು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಸಸ್ಯವನ್ನು ಶಂಖಪುಷ್ಪಿ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ-ಕೆಲವೇ ಗಂಟೆಗಳನ್ನು ಶುಕ್ರನ ವಕ್ರನಡೆ ಆರಂಭ, ಧನದ ಅಧಿದೇವತೆ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಧನವೃಷ್ಟಿ!
ಹಣ ಆಗಮನಕ್ಕೆ ಈ ಉಪಾಯ ಮಾಡಿ
ಗುರುವಾರದಂದು ವಿಷ್ಣುವನ್ನು ಪೂಜಿಸುವಾಗ, ಶಂಖಪುಷ್ಪಿಯ ಹೂವುಗಳನ್ನು ಅವನಿಗೆ ಅರ್ಪಿಸಲಾಗುತ್ತದೆ ಮತ್ತು ಅವರ ಆಶೀರ್ವಾದವನ್ನು ಪಡೆಯಲಾಗುತ್ತದೆ. ವಿಷ್ಣುವಿನ ಪೂಜೆಯಲ್ಲಿ ಈ ಸಸ್ಯದ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡದ ಹೂವುಗಳು ಬಿಳಿ ಬಣ್ಣಗಳಲ್ಲಿಯೂ ಲಭ್ಯವಾಗುತ್ತವೆ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಅರ್ಪಿಸಿದರೆ, ಮನೆಯಲ್ಲಿ ಹಣದ ಆಗಮನ ಹೆಚ್ಚಾಗುತ್ತದೆ ಮತ್ತು ಸಮೃದ್ಧಿ ಬರುತ್ತದೆ. ಮತ್ತೊಂದೆಡೆ, ಮಹಾದೇವನ ಪೂಜೆಯಲ್ಲಿ, ಶಂಖಪುಷ್ಪಿಯ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ಶಿವ ಬೇಗ ಪ್ರಸನ್ನನಾಗುತ್ತಾನೆ.
ಇದನ್ನೂ ಓದಿ-ವಕ್ರಾವಸ್ಥೆಯಲ್ಲಿ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!
ಬೇರಿನ ಉಪಾಯ
ಶಂಖಪುಷ್ಪಿ ಗಿಡದ ಬೇರನ್ನು ಪೂಜಿಸಿದ ನಂತರ ತಿಜೋರಿಯಲ್ಲಿ ಇರಿಸಬೇಕು. ಇದರಿಂದಾಗಿ ಲಕ್ಷ್ಮಿ ದೇವಿಯ ಕೃಪೆಯಿಂದ ತಿಜೋರಿ ಯಾವಾಗಲೂ ಹಣದಿಂದ ತುಂಬಿ ತುಳುಕುತ್ತದೆ. ಇನ್ನೊಂದೆಡೆ ಇದರ ಬೇರನ್ನು ಮನೆಯ ಪೂಜಾ ಸ್ಥಳದಲ್ಲಿಟ್ಟು ಪೂಜಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಈ ಸಸ್ಯವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು.
ಇದನ್ನೂ ಓದಿ-ತನ್ನ ಸ್ನೇಹಿತನ ರಾಶಿ ಪ್ರವೇಶಿಸಲಿದ್ದಾನೆ ಗ್ರಹಗಳ ರಾಜ, 3 ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ