ಬೆಂಗಳೂರು: ಕೆಲ ವ್ಯಕ್ತಿಗಳ ಕೈಯಲ್ಲಿ ಇರುವ ರೇಖೆಗಳು ಹಾಗೂ ಚಿಹ್ನೆಗಳನ್ನು ವಿಶ್ಲೇಷಿಸುವ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ, ಭವಿಷ್ಯ ಹಾಗೂ ವೃತ್ತಿ ಜೀವನದ ಕುರಿತು ಸಾಕಷ್ಟು ಸಂಗತಿಗಳನ್ನು ತಿಳಿದುಕೊಳ್ಳಬಹುದು. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ  ವ್ಯಕ್ತಿಗಳ ಕೈಯಲ್ಲಿ ಕೆಲ ಶುಭಯೋಗಗಳಿದ್ದು, ಅವುಗಳ ಪ್ರಭಾವ ಆ ವ್ಯಕ್ತಿಯ ಜೀವನದ ಮೇಲೆ ಇರುತ್ತದೆ. ಇಲ್ಲಿ ನಾವು ಅಂತಹುದೇ ಒಂದು ಯೋಗಾದ ಕುರಿತು ಮಾಹಿತಿಯನ್ನು ನೀಡುತ್ತಿದ್ದು ಅದನ್ನು ಅಖಂಡ ಸಾಮ್ರಾಜ್ಞಪತಿ ಯೋಗ ಎಂದು ಕರೆಯಲಾಗುತ್ತದೆ (Spiritual News In Kannada). ಈ ಯೋಗ ಯಾರ ಕೈಯಲ್ಲಿರುತ್ತದೆಯೋ ಆ ವ್ಯಕ್ತಿ, ತನ್ನ ಜೀವನದಲ್ಲಿ ರಾಜನಂತೆ ಬದುಕುತ್ತಾನೆ. ಆತನಿಗೆ ಜೀವನದಲ್ಲಿ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಇದಲ್ಲದೆ ಆತನ ಆರ್ಥಿಕ ಸ್ಥಿತಿ ಕೂಡ ಸಾಕಷ್ಟು ಬಲವಾಗಿರುತ್ತದೆ. ಇವರ ವಿಶೇಷತೆ ಎಂದರೆ ಇವರು ದಾನಿಗಳು ಕೂಡ ಆಗಿರುತ್ತಾರೆ. ಬನ್ನಿ ಹಾಗಾದರೆ, ಅಂಗೈಯ ಯಾವ ಭಾಗದಲ್ಲಿ ಈ ಶುಭಯೋಗ ನಿರ್ಮಾಣಗೊಳ್ಳುತ್ತದೆ ಮತ್ತು ಅದರಿಂದ ಆಗುವ ಲಾಭಗಳ ಕುರಿತು ತಿಳಿದುಕೊಳ್ಳೋಣ, 


COMMERCIAL BREAK
SCROLL TO CONTINUE READING

ಅಂಗೈಯಲ್ಲಿ ಎಲ್ಲಿ ನಿರ್ಮಾಣಗೊಳ್ಳುತ್ತದೆ ಈ ರಾಜಯೋಗ?
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಒಂದು ವೇಳೆ ಎರಡು ಅಂಗೈಗಳಲ್ಲಿರುವ ಭಾಗ್ಯ ರೇಖೆಗಳು ಮಣಿಬಂಧದ ಬಳಿ ಬಂದು ಮತ್ಸ್ಯಾಕಾರ ರೂಪಿಸಿ, ಶನಿ ಪರ್ವತಕ್ಕೆ ಸಂಪರ್ಕಿಸಿದರೆ ಮತ್ತು ಒಂದು ವೇಳೆ ಸೂರ್ಯ ರೇಖೆ ನೀಳಾಕಾರದಲ್ಲಿದ್ದು, ತೆಳುವಾಗಿ ಸ್ಪಷ್ಟವಾಗಿದ್ದರೇ ಹಾಗೂ ಚಂದ್ರ ಪರ್ವತದಿಂದ ತೆಳುವಾದ ರೇಖೆ ಹೊರತು ಬುಧ ಪರ್ವತಕ್ಕೆ ಸ್ಪರ್ಶಿಸುತ್ತಿದ್ದು ಜೊತೆಗೆ ಸೂರ್ಯ, ಶನಿ ಹಾಗೂ ಶುಕ್ರ ಪರ್ವತಗಳು ಸಂಪೂರ್ಣವಾಗಿ ವಿಕಾಸಗೊಂಡಿದ್ದರೆ, ಅಂತಹ ವ್ಯಕ್ತಿಯ ಅಂಗೈಯಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇರುತ್ತದೆ. 


ಸಿಗುತ್ತೆ ಅಪಾರ ಧನ, ಐಶ್ವರ್ಯಾ ಹಾಗೂ ಭೌತಿಕ ಸುಖ
ಯಾವ ವ್ಯಕ್ತಿಯ ಜನ್ಮ ಈ ಯೋಗದಲ್ಲಿ ಸಂಭವಿಸುತ್ತದೆಯೋ, ಅಂತಹ ವ್ಯಕ್ತಿಗೆ ಜೀವನದಲ್ಲಿ ಸಕಲ ಐಶ್ವರ್ಯ ಹಾಗೂ ಭೋಗಗಳು ಪ್ರಾಪ್ತಿಯಾಗುತ್ತವೆ. ಈ ವ್ಯಕ್ತಿ ತನ್ನ ಕೆಲಸಗಳಿಂದ ವಿಶ್ವವಿಖ್ಯಾತಿ ಪಡೆದುಕೊಳ್ಳುತ್ತಾನೆ. ಇನ್ನೊಂದೆಡೆ ಈ ಜನರು ಐಷಾರಾಮಿ ಜೀವನ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ. ಇವರು ಅಪಾರ ಧನಸಂಪತ್ತಿನ ಒಡೆಯರಾಗಿರುತ್ತಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ತನ್ನ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಗಳಿಸುತ್ತಾರೆ. ತಮ್ಮ ಸ್ವಂತ ವರ್ಚಸ್ಸಿನಿಂದಲೇ ಇವರು ಸಮಾಜದಲ್ಲಿ ಕೆಲಸ ಗಿಟ್ಟಿಸುತ್ತಾರೆ. ಪ್ರಯಾಣ ಅಂದರೆ ಇವರಿಗೆ ತುಂಬಾ ಇಷ್ಟ. ಇವರ ಬಳಿ ಧನ-ವೈಭವಕ್ಕೆ ಯಾವುದೇ ಕೊರತೆ ಇರುವುದಿಲ್ಲ.


ಇದನ್ನೂ ಓದಿ-ಮುಂದಿನ 10 ದಿನಗಳ ಕಾಲ ಈ ರಾಶಿಗಳ ಜನರಿಗೆ ಅಷ್ಟೈಶ್ವರ್ಯ ಕರುಣಿಸಲಿದ್ದಾಳೆ ಐಶ್ವರ್ಯ ಲಕ್ಷ್ಮಿ!


ಸಮಾಜ ಸುಧಾರಕ ಹಾಗೂ ರಾಜಕೀಯ ಮುಖಂಡರಾಗುತ್ತಾರೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗಳ ಕೈಯಲ್ಲಿ ಈ ರೇಖೆ ಇರುತ್ತದೆಯೋ ಆ ವ್ಯಕ್ತಿ ಸಮಾಜ ಸುಧಾರಕ, ದೊಡ್ಡ ರಾಜಕೀಯ ಮುಖಂಡರಾಗುತ್ತಾರೆ ಎನ್ನಲಾಗುತ್ತದೆ . ಸಮಾಜದಲ್ಲಿ ಈ ಜನರಿಗೆ ಅಪಾರ ಘನತೆ ಗೌರವ, ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ. ಇವರು ತುಂಬಾ ಸಾಹಸ, ಪರಾಕ್ರಮಿಗಳಾಗಿರುತ್ತಾರೆ. ಅತ್ಯಂತ ಸಾಮಾಜಿಕ ಪ್ರವೃತ್ತಿಯವರಾದ ಇವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಲ್ಲಿ ಯಾವಾಗಲೂ ಮುಂದೆ ಇರುತ್ತಾರೆ. 


ಇದನ್ನೂ ಓದಿ-ಈ ಸ್ಪರ್ಧೆಯಲ್ಲಿ ನೀವು ನಿಮ್ಮ ಹೆಂಡ್ತಿನಾ ಹೆಗಲ ಮೇಲೆ ಹೊತ್ತು ಒಡ್ಬೆಕಂತೆ, ಗೆದ್ರೆ ಏನ್ ಸಿಗುತ್ತೆ ಗೊತ್ತಾ?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.