Surya Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ಸರ್ವಶಕ್ತ ಗ್ರಹ ಎಂತಲೇ ಪರಿಗಣಿಸಲಾಗಿರುವ ಸೂರ್ಯ ದೇವನು ವರ್ಷದ ಬಳಿಕ ತನ್ನದೇ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕಳೆದೊಂದು ತಿಂಗಳಿನಿಂದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದ ಸೂರ್ಯ ಇಂದು ಆಗಸ್ಟ್ 17, 2023ರಂದು ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ. ಮುಂದಿನ ಒಂದು ತಿಂಗಳುಗಳ ಕಾಲ ಎಂದರೆ ಸೆಪ್ಟೆಂಬರ್ 17, 2023ರವರೆಗೆ ಸೂರ್ಯ ಇದೇ ರಾಶಿಚಕ್ರದಲ್ಲಿ ಸಂಚರಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಸೂರ್ಯನ ರಾಶಿ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ ಒಂದು ತಿಂಗಳು ಐದು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 
 
ಸಿಂಹ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಐದು ರಾಶಿಯವರು ತುಂಬಾ ಜಾಗರೂಕರಾಗಿರಿ:-
ಮಿಥುನ ರಾಶಿ: 

ಸೂರ್ಯ ರಾಶಿ ಪರಿವರ್ತನೆಯು ಮಿಥುನ ರಾಶಿಯವರ ಜೀವನದಲ್ಲಿ ಅಷ್ಟು ಶುಭಕರವಾಗಿರುವುದಿಲ್ಲ. ಮುಂದಿನ ಒಂದು ತಿಂಗಳುಗಳ ಕಾಲ ಮಿಥುನ ರಾಶಿಯವರು ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಇನ್ನೊಂದು ತಿಂಗಳು ನೀವು ಮಾತನಾಡುವಾಗ ಬಹಳ ಸಂಯಮ ಅಗತ್ಯ. ಇಲ್ಲದಿದ್ದರೆ, ಇದರಿಂದಲೇ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ. ವ್ಯಾಪಾರಷ್ಟರಿಗೆ ಸಮಯ ಅಷ್ಟು ಉತ್ತಮವಾಗಿಲ್ಲದ ಕಾರಣ ಹೊಸ ಹೂಡಿಕೆಗಳನ್ನು ತಪ್ಪಿಸಿ.  


ಇದನ್ನೂ ಓದಿ- Surya Gochara: ನಿಮ್ಮ ರಾಶಿಗೆ ಅನುಗುಣವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಬದಲಾಗಲಿದೆ ಅದೃಷ್ಟ


ಕರ್ಕಾಟಕ ರಾಶಿ: 
ಸೂರ್ಯನ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರ ದಾಂಪತ್ಯ ಜೀವನದಲ್ಲಿ ಕಲಹವನ್ನು ಸೃಷ್ಟಿಸಬಹುದು. ಇದಲ್ಲಾದಎ, ನಿಮ್ಮ ಸಂಗಾತಿಯ ಆರೋಗ್ಯವೂ ಹದಗೆಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ನಿಗಾವಹಿಸಿ. ಒಂದೊಮ್ಮೆ ನೀವು ಪಾರ್ಟ್ನರ್ ಶಿಪ್ ವ್ಯವಹಾರ ಮಾಡುತ್ತಿದ್ದರೆ ತುಂಬಾ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಇಲ್ಲವೇ, ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  


ಧನು ರಾಶಿ: 
ಸ್ವ ರಾಶಿಯಲ್ಲಿ ಸೂರ್ಯನ ಸಂಚಾರವು ಧನು ರಾಶಿಯವರಿಗೂ ಕೂಡ ಅಮಂಗಳಕಾರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸುವ ಅವಶ್ಯಕತೆ ಇದೆ. ಇದಲ್ಲದೆ, ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯವಿದೆ. ಆರೋಗ್ಯದ ಬಗ್ಗೆ ಕೊಂಚ ನಿರ್ಲಕ್ಷ್ಯವೂ ಕೂಡ ಭವಿಷ್ಯದಲ್ಲಿ ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು. 


ಕುಂಭ ರಾಶಿ: 
ಸೂರ್ಯನ ರಾಶಿ ಬದಲಾವಣೆಯು ಕುಂಭ ರಾಶಿಯವರಿಗೆ ಆತ್ಮವಿಶ್ವಾಸವನ್ನು ಕುಂದಿಸಲಿದೆ. ಇದರಿಂದಾಗಿ ನಿಮ್ಮ ಕೆಲಸಗಳಲ್ಲಿ ವೈಫಲ್ಯವನ್ನು ಕಾಣಬಹುದು. ಈ ವೇಳೆ ನಿಮ್ಮ ಕೋಪವನ್ನು ನಿಯಂತ್ರಿಸಿ, ಇಲ್ಲವೇ ತೊಂದರೆಗಳು ಉಲ್ಬಣಿಸಬಹುದು.  ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕೂಡ ನಿಮ್ಮನ್ನು ಕಾಡಬಹುದು. 


ಇದನ್ನೂ ಓದಿ- Surya Gochar: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿ ಪರಿಹಾರ ಕೈಗೊಳ್ಳಿ


ಮೀನ ರಾಶಿ: 
ಸಿಂಹ ರಾಶಿಯಲ್ಲಿ ಸೂರ್ಯ ರಾಶಿ ಪರಿವರ್ತನೆಯು ದೈಹಿಕವಾಗಿ ನಿಮ್ಮನ್ನು  ಕುಂಠಿತಗೊಳಿಸಬಹುದು. ಇದನ್ನು ತಪ್ಪಿಸಲು ವ್ಯಾಯಾಮ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುವುದು ಉತ್ತಮವಾಗಿದೆ. ಯಾರೊಂದಿಗಾದರೂ ಮಾತನಾಡುವಾಗ ಅಹಂ ಭಾವ ತೋರದಿರಿ. ಇದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.  ಯಾವುದೇ ವ್ಯವಹಾರದಲ್ಲಿ ಬೇರೆಯವರನ್ನು ಕಣ್ಮುಚ್ಚಿ ನಂಬುವ ತಪ್ಪನ್ನು ಮಾಡಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.