Surya Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ಗಣೇಶ ಚತುರ್ಥಿಗು ಒಂದು ದಿನ ಮೊದಲು ಎಂದರೆ ಸೆಪ್ಟೆಂಬರ್ 17, 2023ರಂದು ರಾಶಿ ಪರಿವರ್ತನೆ ಹೊಂದಿ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. 
17 ಸೆಪ್ಟೆಂಬರ್ 2023 ರಂದು ಬೆಳಿಗ್ಗೆ 07:11 ಕ್ಕೆ ಕನ್ಯಾರಾಶಿಗೆ ಪ್ರವೇಶಿಸಿರುವ ಸೂರ್ಯದೇವನು ಮುಂದಿನ ಒಂದು ತಿಂಗಳು ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಶುಭ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದೀಗ, ಕನ್ಯಾ ರಾಶಿಯಲ್ಲಿ ಸೂರ್ಯ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಮುಂದಿನ 30 ದಿನಗಳ ಕಾಲ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ...


ಇದನ್ನೂ ಓದಿ-   Ketu Gochar: ಈ ರಾಶಿಯವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಲಿದ್ದಾನೆ ಕೇತು


ಸೂರ್ಯ ರಾಶಿ ಪರಿವರ್ತನೆ: ಮುಂದಿನ 30 ದಿನ ಈ ಮೂರು ರಾಶಿಯವರಿಗೆ ಭಾರೀ ಸಂಕಷ್ಟ: 
ತುಲಾ ರಾಶಿ: 

ಸೂರ್ಯ ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ತುಲಾ ರಾಶಿಯವರ ಆರ್ಥಿಕ ಸಂಕಷ್ಟಗಳು ಹೆಚ್ಚಾಗಲಿವೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಬೇರೆಡೆ ಸಿಲುಕುವ ಸಾಧ್ಯತೆ ಇದೆ. ಎಲ್ಲಾದರೂ ಹಣ ಹೂಡಿಕೆ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಇರಿ. ಇಲ್ಲವೇ ಭಾರೀ ನಷ್ಟ ಉಂಟಾಗಬಹುದು. 


ಕುಂಭ ರಾಶಿ: 
ಸೂರ್ಯ ಸಂಚಾರವು ಕುಂಭ ರಾಶಿಯವರಿಗೆ ನಕಾರಾತ್ಮಕ ಪರಿಣಾಮಗಳನ್ನು ತರಲಿದ್ದು, ನಾನಾ ರೀತಿಯ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಒಡಹುಟ್ಟಿದವರೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನೀವು ತೆಗೆದುಕೊಂಡ ನಿರ್ಧಾರಗಳು ಭವಿಷ್ಯದಲ್ಲಿ ಭಾರಿಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಿ. 


ಇದನ್ನೂ ಓದಿ- Astro Tips: ಯಾರೇ ಆದರೂ ಈ 3 ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆ ಬಾಗಲೇಬೇಕಂತೆ!


ಮೀನ ರಾಶಿ: 
ಸೂರ್ಯ ರಾಶಿ ಪರಿವರ್ತನೆಯು ಮೀನ ರಾಶಿಯವರ ಜೀವನದಲ್ಲಿಯೂ ಪ್ರತಿಕೂಲ ಪರಿಣಾಮಗಳನ್ನು ತರಲಿದೆ. ಈ ಸಮಯದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಂಕಷ್ಟಗಳು ಹೆಚ್ಚಾಗಲಿದ್ದು, ಇದು ನಿಮ್ಮ ಮಾನಸಿಕ ಒತ್ತಡವನ್ನೂ ಹೆಚ್ಚಿಸಬಹುದು. ಉದ್ಯೋಗ ಕ್ಷೇತ್ರದಲ್ಲಿಯೂ ಒತ್ತಡದ ವಾತಾವರಣ ಇರುವುದರಿಂದ ಧ್ಯಾನ ಮಾಡುವುದು ಒಳಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.