ಸೂರ್ಯ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಆಗಸ್ಟ್ ತಿಂಗಳಲ್ಲಿ, ಸೂರ್ಯನು ತನ್ನ ಸ್ವಂತ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯನ್ನು ಆಗಸ್ಟ್ 17 ರಂದು ಬೆಳಿಗ್ಗೆ 07:27 ಕ್ಕೆ ಪ್ರವೇಶಿಸುತ್ತಾನೆ. ಈ ದಿನ ಸೂರ್ಯನು ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 


COMMERCIAL BREAK
SCROLL TO CONTINUE READING

ಸೂರ್ಯನು ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರವರೆಗೆ ಅಂದರೆ ಒಂದು ತಿಂಗಳು ಸಿಂಹ ರಾಶಿಯಲ್ಲಿಇರಲಿದ್ದಾನೆ. ಈ ಸಮಯವು ಕೆಲವು ರಾಶಿಯವರಿಗೆ ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರವು ಕೆಲವು ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ...


ಈ ರಾಶಿಯವರಿಗೆ ಸೂರ್ಯನ ರಾಶಿ ಪರಿವರ್ತನೆಯಿಂದ ಹೆಚ್ಚು ಪ್ರಯೋಜನ:
ಕರ್ಕಾಟಕ ರಾಶಿ:
ಸೂರ್ಯನು ಆಗಸ್ಟ್ 17ರಂದು ಕರ್ಕಾಟಕ ರಾಶಿಯನ್ನು ಬಿಟ್ಟು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಸಿಂಹ ರಾಶಿಯಲ್ಲಿ ಸೂರ್ಯನ ಪ್ರವೇಶವು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮಧುರವಾದ ಮಾತಿನ ಮೂಲಕ ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಸಮಯ. ಈ ಸಮಯದಲ್ಲಿ ನೀವು ಬಯಸಿದ ಉದ್ಯೋಗ ಸಿಗುವ ಸಾಧ್ಯತೆ ಇದೆ. 


ಇದನ್ನೂ ಓದಿ- Mangal Gochar 2022: ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ


ತುಲಾ ರಾಶಿ: ಆಗಸ್ಟ್ ತಿಂಗಳಿನಲ್ಲಿ ಸೂರ್ಯನ ಬದಲಾವಣೆಯು ತುಲಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಣ ಗಳಿಸುವ ಹೊಸ ಮಾರ್ಗಗಳು ಸೃಷ್ಟಿಯಾಗಲಿದ್ದು ಆದಾಯವು ಮಹತ್ತರವಾಗಿ ಹೆಚ್ಚಾಗಲಿದೆ. ಈ ರಾಶಿಯ ವ್ಯಾಪಾರಿಗಳಿಗೆ ಸೂರ್ಯನ ರಾಶಿ ಪರಿವರ್ತನೆಯ ಬಲವಾದ ಲಾಭ ದೊರೆಯಲಿದೆ. 


ಇದನ್ನೂ ಓದಿ- ಆಗಸ್ಟ್ 7ರಂದು ಶುಕ್ರ ಸಂಕ್ರಮಣ: ಈ 5 ರಾಶಿಯವರಿಗೆ ಭಾರೀ ಲಾಭ


ವೃಶ್ಚಿಕ ರಾಶಿ: ಆಗಸ್ಟ್ ತಿಂಗಳ ಸೂರ್ಯ ಸಂಚಾರವು ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತದೆ. ವಿಶೇಷವಾಗಿ ವೃತ್ತಿಜೀವನದ ವಿಷಯದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಮೋಷನ್ ಅವಕಾಶಗಳಿವೆ. ಪ್ರಶಂಸೆಯೂ ದೊರೆಯಲಿದೆ. ಹಣದ ವಿಷಯದಲ್ಲಿ ಸಮಯವು ತುಂಬಾ ಚೆನ್ನಾಗಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಸರ್ವತೋಮುಖ ಅಭಿವೃದ್ದಿ ಹೊಂದುವಿರಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.