Sunday Born People Personality : ಭಾನುವಾರದಂದು ಜನಿಸಿದ ಮಕ್ಕಳ ಮೇಲೆ  ಸೂರ್ಯನ ಪ್ರಭಾವ ಹೆಚ್ಚಿರುತ್ತದೆ. ಸೂರ್ಯ ಬೆಳಕು, ಹೊಳಪು ಮತ್ತು ಶಕ್ತಿಯ ಮುಖ್ಯ ಮೂಲ. ಭಾನುವಾರದಂದು ಜನಿಸಿದವರು ಅದ್ಭುತ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು  ಪ್ರಕಾಶಮಾನವಾದ, ನಿರ್ಣಾಯಕ ಮತ್ತು ಉತ್ಸಾಹಭರಿತ ಸ್ವಭಾವವನ್ನು ಹೊಂದಿರುತ್ತಾರೆ. ಇವರಲ್ಲಿನ ಇನ್ನೊಂದು ವಿಶೇಷತೆ  ಅಂದರೆ ಇನ್ನೊಬ್ಬರಿಗೆ ಸಹಾಯ ಮಾಡುವುದು.   ಯಾರೇ ಕಷ್ಟದಲ್ಲಿ ಇದ್ದರೂ ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಾರೆ. ಇವರು ಸಹಾಯ ಮಾಡುವಾಗ ತನ್ನವರು, ಪರರು, ಮೇಲೂ ಕೀಳು ಎನ್ನುವುದನ್ನು ಯೋಚಿಸದೆ ಸಹಾಯ ಹಸ್ತ ಚಾಚಿ ಬಿಡುತ್ತಾರೆ. ಇವರ ಈ ಗುಣಗಳಿಂದಲೇ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. ಯಾರಿಗೆ ಸಹಾಯ ಮಾಡಬೇಕಾದರೂ ನಿಸ್ವಾರ್ಥ ಭಾವದಿಂದ ಸಹಾಯ ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ : 
ಭಾನುವಾರದಂದು ಜನಿಸಿದವರು ನಾಯಕತ್ವ, ಆತ್ಮ ವಿಶ್ವಾಸ ಮತ್ತು ಧೈರ್ಯದ ಗುಣಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಅವರು ಎಲ್ಲಾ ಕೆಲಸದ ನೇತೃತ್ವ ವಹಿಸುತ್ತಾರೆ. ಭಾನುವಾರದಂದು ಜನಿಸಿದವರು  ವಿಶೇಷ ಪ್ರತಿಭೆಯನ್ನು ಹೊಂದಿರುತ್ತಾರೆ. ಅವರು ಸಮಾಜ ಸೇವೆ, ರಾಜಕೀಯ ಮತ್ತು ವ್ಯಾಪಾರದಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು. ಭಾನುವಾರ ಜನಿಸಿದವರು ರಾಜಕೀಯ ಕ್ಷೇತ್ರದಲ್ಲಿ ಬಹಳ ಯಶಸ್ವಿಯಾಗುತ್ತಾರೆ.


ಇದನ್ನೂ ಓದಿ : Rahu Dosh: ನಿಮ್ಮ ಮನೆ ಬಾಗಿಲಿಗೂ ರಾಹುವಿಗೂ ಇದೆ ವಿಶೇಷ ನಂಟು, ಈ ವಿಷಯಗಳ ಬಗ್ಗೆ ಇರಲಿ ಎಚ್ಚರ


ಗುರಿ ಇಟ್ಟರೆ ಸಾಧಿಸಿಯೇ ತೀರುತ್ತಾರೆ :
ಭಾನುವಾರ ಜನಿಸಿದವರು ಉಜ್ವಲ ಮತ್ತು ಯಶಸ್ವಿ ಭವಿಷ್ಯವನ್ನು ಹೊಂದಿರುತ್ತಾರೆ. ಇವರು ಏನನ್ನಾದರೂ ಸಾಧಿಸಬೇಕು ಎಂದು ಅಂದುಕೊಂಡರೆ ಅದನ್ನು ಸಾಧಿಸಿಯೇ ತೀರುತ್ತಾರೆ. ಸಾಧನೆಯ ಹಾದಿಯಲ್ಲಿ ಬರುವ ಅಡೆತಡೆಗಳಿಗೆ ಬಗ್ಗದೆ ಮುಂದುವರಿಯುತ್ತಾರೆ. ಏನೇ ಆದರೂ ತಮ್ಮ ಗುರಿಯಿಂದ ಹಿಂದೆ ಸರಿಯುವ ಜಾಯಿಮಾನದವರಲ್ಲ ಭಾನುವಾರ ಜನಿಸಿದವರು.ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಿರುವುದರಿಂದ ಅವರಲ್ಲಿ ಒಂದಿಷ್ಟು ದುರಹಂಕಾರ ಕೂಡಾ ಇರುತ್ತದೆ. ಕೆಲವೊಮ್ಮೆ ಅವರ ದುರಹಂಕಾರ ಮತ್ತು ಹೆಚ್ಚಿನ ನಿರೀಕ್ಷೆಗಳಿಂದಾಗಿ ಅವರು ಇತರರೊಂದಿಗೆ  ಜಗಳಗಳು ಕೂಡಾ ಆಗಬಹುದು.   


ಇದನ್ನೂ ಓದಿ : Budh Gochar 2024: ವಾರದ ಬಳಿಕ ಈ ಮೂರು ರಾಶಿಯವರ ಜೀವನದಲ್ಲಿ ಹರಿದುಬರಲಿದೆ ಧನ-ಸಂಪತ್ತು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.