Surya Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ದೇವನು 14 ಮಾರ್ಚ್ 2024ರಂದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಏಪ್ರಿಲ್ 14, 2024 ರವರೆಗೆ ಮೀನ ರಾಶಿಯಲ್ಲಿಯೇ ಸಂಚರಿಸಲಿರುವ ಸೂರ್ಯದೇವ ಈ ಸಮಯದಲ್ಲಿ ದ್ವಾದಶ ರಾಶಿಯವರ ಜೀವನದಲ್ಲಿ ಧನಾತ್ಮಕ-ಋಣಾತ್ಮಕ ಪರಿಣಾಮಗಳನ್ನು ಬೀರಲಿದ್ದಾನೆ. ಸದ್ಯ ರಾಹು ಕೂಡ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿದ್ದು, ಮೀನ ರಾಶಿಯಲ್ಲಿ ಸೂರ್ಯ-ರಾಹು ಯುತ್ತಿಯಿಂದ 'ಗ್ರಹಣ ಯೋಗ' ನಿರ್ಮಾಣವಾಗಲಿದೆ. ಇದರಿಂದಾಗಿ  ಐದು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು  ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


COMMERCIAL BREAK
SCROLL TO CONTINUE READING

ಸೂರ್ಯ ರಾಶಿ ಪರಿವರ್ತನೆ: ಈ ರಾಶಿಯವರ ಅದೃಷ್ಟವೇ ಬದಲು 
ವೃಷಭ ರಾಶಿ: 

ಸೂರ್ಯ ರಾಶಿ ಬದಲಾವಣೆಯಿಂದ ನಿರ್ಮಾಣವಾಗಲಿರುವ ಗ್ರಹಣ ಯೋಗವು ವೃಷಭ ರಾಶಿಯವರ ವೃತ್ತಿ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿದ್ದು, ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದಾಗಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. 


ಮಿಥುನ ರಾಶಿ: 
ಸೂರ್ಯದೇವನ ಆಶೀರ್ವಾದದಿಂದಾಗಿ ಈ ಸಮಯದಲ್ಲಿ ಮಿಥುನ ರಾಶಿಯವರು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಾಣುವಿರಿ. ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವೈವಾಹಿಕ ಜೀವನವೂ ಆನಂದದಾಯಕವಾಗಿರಲಿದೆ. 


ಇದನ್ನೂ ಓದಿ- Shukra Gochar 2024: ತಿಂಗಳಾಂತ್ಯದಲ್ಲಿ ಸಂಪತ್ತುಕಾರಕನ ರಾಶಿ ಬದಲಾವಣೆ, 5 ರಾಶಿಯವರಿಗೆ ಶುಕ್ರದೆಸೆ


ಕನ್ಯಾ ರಾಶಿ: 
ಸೂರ್ಯ ರಾಶಿ ಪರಿವರ್ತನೆ ಸೂರ್ಯ-ರಾಹು ಯುತಿಯಿಂದಾಗಿ ಕನ್ಯಾ ರಾಶಿಯವರ ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಿಗಲಿದೆ. 


ಧನು ರಾಶಿ: 
ಈ ವೇಳೆ ಧನು ರಾಶಿಯ ಜನರಿಗೆ ವಿತ್ತೀಯ ಲಾಭದಿಂದಾಗಿ ಸಾಲಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ಕಾಣುವಿರಿ. ವಿವಾಹಿತ ದಂಪತಿಗಳು ಮಕ್ಕಳಿಂದ ಸಂತೋಷವನ್ನು ಪಡೆಯುವರು. ಪ್ರೀತಿ-ಪ್ರೇಮದಲ್ಲಿರುವವರಿಗೆ ನಿಮ್ಮ ಪ್ರೀತಿಯನ್ನು ಮನೆಯವರು ಸಮ್ಮತಿಸುವ ಸಾಧ್ಯತೆ ಇದೆ. 


ಇದನ್ನೂ ಓದಿ- Budhaditya Rajyoga: ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, 4 ರಾಶಿಯವರಿಗೆ ಬಂಪರ್ ಧನಲಾಭ


ಮಕರ ರಾಶಿ: 
ಸೂರ್ಯ ಸಂಚಾರದಿಂದ ಮಕರ ರಾಶಿಯವರ ಜೀವನದಲ್ಲಿ ಒಳ್ಳೆಯ ದಿಂಗಳು ಆರಂಭವಾಗಲಿವೆ. ಸ್ವಂತ ಉದ್ಯೋಗ ಮಾಡುವವರಿಗೆ ಬಂಪರ್ ಆರ್ಥಿಕ ಲಾಭದ ಸಾಧ್ಯತೆ ಇದ್ದು, ನಿಮ್ಮ ಸಂಪತ್ತು ವೃದ್ದಿಯಾಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಅದೃಷ್ಟದ ಸಮಯ ಎಂದು ಹೇಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.