Surya Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಸಹ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ನವಗ್ರಹಗಳಲ್ಲಿ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ದೇವ ಪ್ರತಿ ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಏಪ್ರಿಲ್ ತಿಂಗಳಿನಲ್ಲೂ ಸೂರ್ಯ ರಾಶಿ ಬದಲಾವಣೆ ಮಾಡುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. 


COMMERCIAL BREAK
SCROLL TO CONTINUE READING

ಜೋತಿಷ್ಯ ಶಾಸ್ತ್ರದ ಪ್ರಕಾರ, 2024ರ ಏಪ್ರಿಲ್ 13ರಂದು ಸೂರ್ಯ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಏಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಸೂರ್ಯ ರಾಶಿ ಬದಲಾವಣೆಯಿಂದ (Sun Transit)  ನಾಲ್ಕು ರಾಶಿಯವರಿಗೆ ಆಚ್ಛೇದಿನ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


ಏಪ್ರಿಲ್‌ನಲ್ಲಿ ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ: 
ಮೇಷ ರಾಶಿ: 

ಏಪ್ರಿಲ್‌ನಲ್ಲಿ ಸ್ವ ರಾಶಿಯಲ್ಲಿ ಸೂರ್ಯ ರಾಶಿ ಬದಲಾವಣೆಯು (Surya Gochar In April)   ಮೇಷ ರಾಶಿಯ ಜನರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ನಿಮ್ಮ ಯೋಜಿತ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿದ್ದು, ಇದರಿಂದ ಹಣಕಾಸಿನ ಹರಿವು ಕೂಡ ಹೆಚ್ಚಾಗಲಿದೆ. ಅದರಲ್ಲೂ, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಈ ವೇಳೆ ಬಂಪರ್ ಲಾಭವಾಗಲಿದೆ. 


ಇದನ್ನೂ ಓದಿ- Shukra Gochar 2024: ತಿಂಗಳಾಂತ್ಯದಲ್ಲಿ ಶುಕ್ರ ಸಂಚಾರ, ಮೂರು ರಾಶ್ಯ್ಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ 


ಮಿಥುನ ರಾಶಿ: 
ಸೂರ್ಯ ರಾಶಿ ಪರಿವರ್ತನೆಯು (Surya Rashi Parivartane) ಮಿಥುನ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ದೀರ್ಘಾವಧಿಯಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು ಇದು ಮನಸ್ಸನ್ನು ತುಂಬಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದ್ದು ಪ್ರಗತಿಯ ಹೊಸ ಹಾದಿ ತೆರೆಯಲಿದೆ. 


ಕನ್ಯಾ ರಾಶಿ: 
ಸೂರ್ಯ ಸಂಚಾರವು ಕನ್ಯಾ ರಾಶಿಯ ಜನರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟವನ್ನು ನೀಡಲಿದೆ. ಇದು ನಿಮಗೆ ಹೊಸ ಆದಾಯ ಮೂಲಗಳನ್ನು ಸೃಷ್ಟಿಸಲಿದ್ದು ಹಣಕಾಸಿನ ಸಮಸ್ಯೆಗಳಿಂದ ಮುಕ್ತಿಯನ್ನು ನೀಡಲಿದೆ. ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ. 


ಇದನ್ನೂ ಓದಿ- Mars Transit 2024: ಮೀನ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆದಾಯ ಹೆಚ್ಚಳ


ಧನು ರಾಶಿ: 
ಸೂರ್ಯ ರಾಶಿಚಕ್ರ ಬದಲಾವಣೆಯು ಧನು ರಾಶಿಯ ಜನರಿಗೆ ಅದರಲ್ಲೂ ರಾಜಕೀಯದಲ್ಲಿ ತೊಡಗಿರುವವರಿಗೆ ಒಳ್ಳೆಯ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ, ಕೀರ್ತಿ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಂಭವವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.