ಇಂದು ಮಾಘ ಪೂರ್ಣಿಮೆ: ಈ ರೀತಿ ಸ್ನಾನ ಮಾಡಿದ್ರೆ ಪಾಪಗಳಿಂದ ಪರಿಹಾರ ಪಡೆಯುತ್ತೀರಿ..!
ಮಾಘ ಪೂರ್ಣಿಮೆಯ ಸ್ನಾನ ಮತ್ತು ದಾನ: ಪ್ರತಿ ತಿಂಗಳ ಕೊನೆಯ ದಿನಾಂಕ ಮಾಘ ಪೂರ್ಣಿಮೆ. ಒಂದು ವರ್ಷದಲ್ಲಿ 12 ಹುಣ್ಣಿಮೆಗಳಿರುತ್ತವೆ ಮತ್ತು ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ. ಮಾಘ ಮಾಸದ ಹುಣ್ಣಿಮೆಯನ್ನು ಮಾಘ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಮಾಘ ಪೂರ್ಣಿಮಾ ವ್ರತ: ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಾಘ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಹುಣ್ಣಿಮೆಯ ದಿನಾಂಕವನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಗೆ ಸಮರ್ಪಿಸಲಾಗುತ್ತದೆ. ಈ ದಿನ ಶಾಸ್ತ್ರೋಕ್ತವಾಗಿ ಪೂಜಿಸಿ ಸ್ನಾನ, ದಾನ ಮುಂತಾದವುಗಳಿಂದ ಭಕ್ತರು ಪಾಪಮುಕ್ತರಾಗಿ ಪುಣ್ಯ ಫಲವನ್ನು ಪಡೆಯುತ್ತಾರೆ. ಈ ಬಾರಿಯ ಮಾಘ ಪೂರ್ಣಿಮೆಯು ಶನಿವಾರ(ಫೆಬ್ರವರಿ 24) ಅಂದರೆ ಇಂದು ನಡೆಯಲಿದೆ. ಈ ದಿನ ಶುಭ ಮುಹೂರ್ತದಲ್ಲಿ ಪೂಜಿಸಿ ಶಾಸ್ತ್ರೋಕ್ತ ಸ್ನಾನ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ.
ಧಾರ್ಮಿಕ ಗ್ರಂಥಗಳಲ್ಲಿ ಮಾಘ ಪೂರ್ಣಿಮಾವನ್ನು ಸ್ನಾನ ಮತ್ತು ದಾನದ ಮಹಾ ಹಬ್ಬವೆಂದು ಕರೆಯಲಾಗುತ್ತದೆ. ಅಲ್ಲದೆ ಇಡೀ ವರ್ಷದ ಹುಣ್ಣಿಮೆಯಂದು ಮಾಘಸ್ನಾನ ಮಾಡುವುದು ಶ್ರೇಷ್ಟ ಎನ್ನುತ್ತಾರೆ. ಮಾಘ ಮಾಸದ ಹುಣ್ಣಿಮೆಯಂದು ಭಗವಾನ್ ವಿಷ್ಣುವು ಪವಿತ್ರ ನೀರಿನಲ್ಲಿ ನೆಲೆಸುತ್ತಾನೆಂದು ನಂಬಲಾಗಿದೆ. ಅಲ್ಲದೆ ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಅನೇಕ ಯಾಗ ಮಾಡಿದಷ್ಟೂ ಪುಣ್ಯ ಫಲ ಸಿಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕಿದ್ದರೆ ಈ ಗಿಡಗಳನ್ನು ನೆಡಬಾರದು! ಶ್ವಾನದ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಈ ಸಸ್ಯಗಳು
ಮಾಘ ಪೂರ್ಣಿಮೆಯ ಪೂಜಾ ಸಮಯ ಮತ್ತು ವಿಧಾನ
ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಪೂರ್ಣಿಮೆಯು ಫೆಬ್ರವರಿ 23ರಂದು ಮಧ್ಯಾಹ್ನ 3.36ರಿಂದ ಮರುದಿನ ಫೆಬ್ರವರಿ 24ರ ಸಂಜೆ 6.03ರವರೆಗೆ ಇರುತ್ತದೆ. ಆದ್ದರಿಂದ ಫೆಬ್ರವರಿ 24ರಂದು ಬೆಳಗ್ಗೆ ಗಂಗಾ ಸ್ನಾನವನ್ನು ಮಾಡುವ ಮೂಲಕ ಪುಣ್ಯ ಫಲಿತಾಂಶಗಳನ್ನು ಪಡೆಯಬಹುದು. ನಿಮಗೆ ಗಂಗಾಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನದ ನೀರಿಗೆ ಗಂಗಾಜಲವನ್ನು ಸೇರಿಸಿ ಮನೆಯಲ್ಲಿ ಸ್ನಾನ ಮಾಡುವುದು ಸಹ ಪುಣ್ಯವನ್ನು ನೀಡುತ್ತದೆ. ಮಾಘ ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ ʼಓಂ ಘೃಣಿ ಸೂರ್ಯಾಯ ನಮಃʼ ಎಂಬ ಮಂತ್ರವನ್ನು ಸ್ಮರಿಸುತ್ತಾ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರೊಂದಿಗೆ ಗಂಗೆ, ಗೋದಾನ, ಎಳ್ಳು, ಬೆಲ್ಲ, ಕಂಬಳಿ ಸ್ನಾನಕ್ಕೆ ಈ ದಿನ ವಿಶೇಷ ಮಹತ್ವ ನೀಡಲಾಗಿದೆ.
ಸ್ನಾನ ಮತ್ತು ದಾನದ ಮಹತ್ವ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಘ ಪೂರ್ಣಿಮೆಯಂದು ಭಗವಾನ್ ವಿಷ್ಣುವು ಗಂಗೆಯಲ್ಲಿ ನೆಲೆಸುತ್ತಾನೆ. ಆದ್ದರಿಂದ ಈ ದಿನ ಗಂಗಾ ಸ್ನಾನಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಈ ದಿನ ಗಂಗಾಸ್ನಾನ, ಜಪ, ದಾನ ಇತ್ಯಾದಿ ಮಾಡಿದ ಭಕ್ತರೆಲ್ಲರೂ ಲೌಕಿಕ ಬಂಧನಗಳಿಂದ ಮುಕ್ತಿ ಪಡೆಯುತ್ತಾರೆಂಬ ನಂಬಿಕೆ ಇದೆ. ಧಾರ್ಮಿಕ ಗ್ರಂಥಗಳಲ್ಲಿ ಮಾಘ ಮಾಸವನ್ನು ಭಗವಾನ್ ಭಾಸ್ಕರ್ ಮತ್ತು ಶ್ರೀಹರಿ ವಿಷ್ಣುವಿನ ತಿಂಗಳು ಎಂದು ವಿವರಿಸಲಾಗಿದೆ.
ಇದನ್ನೂ ಓದಿ: ರಾಮ ಜನ್ಮಭೂಮಿಯಿಂದ ತುಳಸಿ ಸ್ಮಾರಕ ಭವನವರೆಗೆ ಅಯೋಧ್ಯೆಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಸ್ಥಳಗಳಿವು
ಶನಿವಾರ ಬೆಳಗ್ಗೆ ಸೂರ್ಯೋದಯದೊಂದಿಗೆ ಪವಿತ್ರ ನದಿಗಳಲ್ಲಿ ಭಕ್ತರು ಮುಳುಗುತ್ತಾರೆ. ಮಾಘ ಪೂರ್ಣಿಮೆಯಂದು ಚಂದ್ರ ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನದಂದು ತಾಯಿ ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮಾಘ ಪೂರ್ಣಿಮೆಯಂದು ರಾತ್ರಿ ಚಂದ್ರೋದಯದ ಸಮಯದಲ್ಲಿ ಚಂದ್ರನನ್ನು ಪೂಜಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಬರುತ್ತದೆ ಎಂದು ಹೇಳಲಾಗಿದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.