ಶುಕ್ರವಾರದ ಉಪಾಯ: ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಇಂದು ಶುಭ ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಶುಕ್ರವಾರದಂದು ಶ್ರದ್ಧಾ-ಭಕ್ತಿಯಿಂದ ತಾಯಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಶುಕ್ರವಾರವನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಶುಕ್ರವಾರದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಸುಖ-ಸಮೃದ್ಧಿ-ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗಿ ಆಶೀರ್ವಾದವನ್ನು ಸುರಿಸುತ್ತಾಳೆ ಎಂಬ ನಂಬಿಕೆ ಇದೆ. 


ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಇಂದು ಈ ಕೆಲಸಗಳನ್ನು ಮಾಡಿ :
* ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿ:

ನೀವು ಶ್ರೀಮಂತರಾಗಲು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಶುಕ್ರವಾರದಂದು ತಾಯಿ ಲಕ್ಷ್ಮಿಯನ್ನು ಪೂಜಿಸುವಾಗ ಕೆಂಪು ವಸ್ತ್ರವನ್ನು ಅರ್ಪಿಸಿ. ಸಾಧ್ಯವಾದರೆ,  ಕೆಂಪು ಬಿಂದಿ, ಸಿಂಧೂರ ಮತ್ತು ಕೆಂಪು ಬಳೆಗಳಂತಹ ಐದು ಪದಾರ್ಥಗಳನ್ನು ಅರ್ಪಿಸಿ.


ಇದನ್ನೂ ಓದಿ- ಈ 3 ರಾಶಿಯ ಜನರಿಗೆ ಮುಂದಿನ ವಾರದಿಂದ ತೆರೆಯಲಿದೆ ಅದೃಷ್ಟದ ಬಾಗಿಲು


* ಶುಕ್ರವಾರದಂದು ಶ್ರೀ ಲಕ್ಷ್ಮೀ ನಾರಾಯಣ ಪಠಣ :
ಶುಕ್ರವಾರದಂದು ಶ್ರೀ ಲಕ್ಷ್ಮೀ ನಾರಾಯಣ ಪಠಣ ಮಾಡಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ಸಂಪತ್ತು ಮತ್ತು ಐಶ್ವರ್ಯದ ವರವನ್ನು ನೀಡುತ್ತಾಳೆ. ಶ್ರೀ ಲಕ್ಷ್ಮೀನಾರಾಯಣನನ್ನು ಪಠಿಸಿದ ನಂತರ ದೇವರಿಗೆ ಹಾಲಿನ ಖೀರು ಮಾಡಿ ನೇವೇದ್ಯ ಅರ್ಪಿಸಿ.


* ಐದು ಬಗೆಯ ಕೆಂಪು ಹೂವಿನ ಪರಿಹಾರ:
ಶುಕ್ರವಾರದಂದು ಐದು ಕೆಂಪು ಹೂವುಗಳನ್ನು ಕೈಯಲ್ಲಿ ತೆಗೆದುಕೊಂಡು ತಾಯಿ ಲಕ್ಷ್ಮಿಯನ್ನು ಸ್ಮರಿಸಿ. ಇದರ ನಂತರ, ಈ ಹೂವುಗಳನ್ನು ನೀವು ಹಣ ಇಡುವ ಬೀರುವಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಅಪಾರ ಆಶೀರ್ವಾದವನ್ನು ನೀಡುತ್ತಾಳೆ. ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು


* ಅಕ್ಕಿಯ ಪರಿಹಾರ:
ಆರ್ಥಿಕ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ, ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಒಂದೂವರೆ ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಇರಿಸಿ. ಆದರೆ, ಅಕ್ಕಿ ಮುಕ್ಕಾಗಿರಬಾರದು ಎಂಬುದನ್ನು ನೆನಪಿಡಿ. ನಂತರ ಇದನ್ನು ಗಂಟುಕಟ್ಟಿ ಕೈಯಲ್ಲಿ ಹಿಡಿದು 'ಓಂ ಶ್ರೀಂ ಶ್ರೀಯೇ ನಮಃ' ಎಂಬ ಮಂತ್ರವನ್ನು ಜಪಿಸಿ. ತಾಯಿ ಲಕ್ಷ್ಮಿ ಕಲಶದ ಬಲಭಾಗದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.