ಬುಧ ಗ್ರಹ ಬಲಪಡಿಸಲು ಇಂದೇ ಈ ಕೆಲಸ ಮಾಡಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳೂ ಸಹ ದ್ವಾದಶ ರಾಶಿಗಳ ಮೇಲೆ ತಮ್ಮದೇ ಆದ ಪರಿಣಾಮ ಬೀರುತ್ತವೆ. ಅಂತೆಯೇ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧ ಗ್ರಹವನ್ನು ಬಲಪಡಿಸಲು ಬುಧವಾರ ವಿಶೇಷ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಬುಧನು ದುರ್ಬಲ ಸ್ಥಾನದಲ್ಲಿದ್ದರೆ ಅಥವಾ ಬುಧ ದೋಷವಿದ್ದರೆ ಬುಧಾಷ್ಟಮಿಯ ದಿನ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಪರಿಹಾರ ಪಡೆಯಬಹುದು ಎಂಬ ನಂಬಿಕೆ ಇದೆ. 


COMMERCIAL BREAK
SCROLL TO CONTINUE READING

ಯಾವುದೇ ತಿಂಗಳಿನ ಬುಧವಾರ ಅಷ್ಟಮಿ ತಿಥಿ ಬಂದರೆ ಅದನ್ನು ಬುಧಾಷ್ಟಮಿ ಎಂದು ಕರೆಯಲಾಗುತ್ತದೆ. ಇಂದು ಅಂದರೆ ಜುಲೈ 20 ರಂದು ಬುಧಾಷ್ಟಮಿ ಆಗಿದ್ದು, ಈ ದಿನ ಕೆಲವು ಕ್ರಮ ಕೈಗೊಳ್ಳುವುದರಿಂದ ಬುಧ ದೋಷ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ


ಬುಧ ದೋಷದ ಸಂಕೇತಗಳು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ, ವ್ಯಕ್ತಿಯು ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಂತಹ ವ್ಯಕ್ತಿಯು ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.


ಬುಧ ದೋಷ ನಿವಾರಣೆಗೆ ಪರಿಹಾರ:
ಇಂದು ಶಾಂತ ಸ್ಥಳದಲ್ಲಿ ಕುಳಿತು 17, 5 ಅಥವಾ 3 ಜಪಮಾಲೆಗಳಿಗೆ ಓಂ ಬ್ರಾಂ ಬ್ರಿಂ ಬ್ರೌನ್ಸ್: ಬುಧಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಸಂಜೆ ಉಪ್ಪಿಲ್ಲದ ಆಹಾರವನ್ನು ಸೇವಿಸಿ. ಸಾಧ್ಯವಾದರೆ ಹೆಸರುಕಾಳು ಅಥವಾ ಅದರಿಂದ ತಯಾರಿಸಿದ ಖಾದ್ಯವನ್ನು ಮಾತ್ರ ಸೇವಿಸಿ. ಇದರಿಂದ ಬುಧ ದೋಷ ನಿವಾರಣೆ ಆಗಲಿದೆ ಎಂಬ ನಂಬಿಕೆ ಇದೆ. 


ಇದನ್ನೂ ಓದಿ- Guru Gochar 2022: ಮೀನ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ! ಈ ರಾಶಿಗಳ ಜನರಿಗೆ ಸಮಯ ಕಠಿಣವಾಗಿರಲಿದೆ


ಬುಧಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಬುಧ ಗ್ರಹವು ದೋಷಪೂರಿತ ಗ್ರಹಗಳಿಂದ ಪೀಡಿತವಾಗಿದ್ದರೆ, ಬುಧಾಷ್ಟಮಿಯ ಶುಭ ಯೋಗದಲ್ಲಿ ಹಸುಗಳಿಗೆ ಹಸಿರು ಮೇವನ್ನು ತಿನ್ನಿಸುವುದರಿಂದ ಪರಿಹಾರ ಪಡೆಯಬಹುದು.


ಬುಧಾಷ್ಟಮಿಯ ಶುಭ ಸಂದರ್ಭದಲ್ಲಿ ವಿಘ್ನ ವಿನಾಶಕ ಗಣಪತಿಗೆ ಪ್ರಿಯವಾದ ಲಡ್ಡು ಮಾಡಿ ನೇವೇದ್ಯ ಮಾಡುವುದರಿಂದ ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಬಹುದು ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.