Solar Eclipse: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಎರಡೂ ಸಹ ಖಗೋಳ ವಿದ್ಯಮಾನಗಳಾದರೂ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ. ಗ್ರಹಣಗಳ ಚಲನೆಗೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಜ್ಯೋತಿಷ್ಯ ಎರಡರ ದೃಷ್ಟಿಕೋನವೂ ಬೇರೆ ಬೇರೆಯದ್ದೇ ಆಗಿದೆ. ವಿಜ್ಞಾನದಲ್ಲಿ, ಗ್ರಹಣವನ್ನು ಕೇವಲ ಖಗೋಳ ವಿದ್ಯಮಾನ ಎಂದು ಪರಿಗಣಿಸಲಾಗಿದ್ದಾರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಣವನ್ನು ಪ್ರಮುಖ ಘಟನೆ ಎಂತಲೂ, ಇವು ವಿಶ್ವದ ಜೀವರಾಶಿಗಳ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ ಎಂತಲೂ ಬಣ್ಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಹಿಂದೂ ಧರ್ಮದಲ್ಲಿ ಸೂರ್ಯ ಕೇವಲ ಒಂದು ಗ್ರಹವಲ್ಲ. ಸೂರ್ಯನನ್ನು ದೇವರು, ಭಗವಾನ್ ಭಾಸ್ಕರ ಎಂತಲೂ ಪೂಜಿಸಲಾಗುತ್ತದೆ. ಹಾಗಾಗಿ, ಸೂರ್ಯ ಗ್ರಹಣಕ್ಕೆ ಅದರದ್ದೇ ಆದ ಮಹತ್ವವಿದೆ. ಗಮನಾರ್ಹವಾಗಿ, ಈ ವರ್ಷ (2023ರಲ್ಲಿ) ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈಗಾಗಲೇ ವರ್ಷದ ಮೊದಲ ಸೂರ್ಯ-ಚಂದ್ರ ಗ್ರಹನಗಳು ಕಳೆದಿದ್ದು, ಇನ್ನೂ 1 ಸೂರ್ಯಗ್ರಹಣ ಮತ್ತು 1 ಚಂದ್ರಗ್ರಹಣ ಸಂಭವಿಸಬೇಕಿದೆ. 


ವರ್ಷದ ಎರಡನೇ ಸೂರ್ಯ ಗ್ರಹಣ ಯಾವಾಗ ಸಂಭವಿಸಲಿದೆ? 
ಈ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಇನ್ನೆರಡು ತಿಂಗಳುಗಳಲ್ಲಿ ಸಂಭವಿಸಲಿದೆ. ಅಕ್ಟೋಬರ್ 14, 2023 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ, ಇದು ಸಂಪೂರ್ಣ ಸೂರ್ಯ ಗ್ರಹಣವಾಗಿರುವುದಿಲ್ಲ. ಈ ಗ್ರಹಣವು ಉಂಗುರದ ಆಕಾರದಲ್ಲಿ ಕಾಣಿಸಿಕೊಳ್ಳುವುದರಿಂದ ಇದನ್ನು ವಿಜ್ಞಾನದಲ್ಲಿ "ರಿಂಗ್ ಆಫ್ ಫೈರ್" ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ- Sun Transit: ಆಗಸ್ಟ್ 17ರವರೆಗೆ ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ


ಈ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ, ಅಕ್ಟೋಬರ್ 14, 2023 ರಂದು ರಾತ್ರಿ 8.34 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿ 2.25 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣ ರಾತ್ರಿ ವೇಳೆ ಸಂಭವಿಸುವುದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತದೆ. 


ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಎಲ್ಲೆಲ್ಲಿ ಸಂಭವಿಸುತ್ತದೆ? 
ಈ ವರ್ಷದ ಕೊನೆಯ ಸೂರ್ಯಗ್ರಹಣವು ಆಫ್ರಿಕಾದ ಪಶ್ಚಿಮ ಭಾಗ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಅಟ್ಲಾಂಟಿಕ್, ಪೆಸಿಫಿಕ್ ಮಹಾಸಾಗರ ಮತ್ತು ಆರ್ಕ್ಟಿಕ್ನಲ್ಲಿ ಮಾತ್ರ ಗೋಚರಿಸುತ್ತದೆ. 


ಇನ್ನು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ,  ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಸಹ ಇದು ಕೆಲವು ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ನಾಲ್ಕು ರಾಶಿಯವರ ಜೀವನದಲ್ಲಿ ಈ ಗ್ರಹಣವು ಭಾರೀ ನಷ್ಟವನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ. 


ವರ್ಷದ ಅಂತಿಮ ಸೂರ್ಯಗ್ರಹಣದಿಂದ ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಹಾನಿ: 
ಮೇಷ ರಾಶಿ: 

ವರ್ಷದ ಅಂತಿಮ ಸೂರ್ಯಗ್ರಹಣವು ಮೇಷ ರಾಶಿಯ ಜನರ ಜೀವನದಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ನೀವು ನಿಮ್ಮವರಿಂದಲೇ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಯಾವುದೇ ಕೆಲಸದಲ್ಲೂ ಬೇರೆಯವರನ್ನು ನಂಬಿ ಮೋಸ ಹೋಗಬೇಡಿ. 


ಇದನ್ನೂ ಓದಿ- Mangal Gochar 2023: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ, ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ


ವೃಷಭ ರಾಶಿ: 
ವೃಷಭ ರಾಶಿಯವರಿಗೆ ವರ್ಷದ ಕೊನೆಯ ಸೂರ್ಯಗ್ರಣದಿಂದ ಧನ ಹಾನಿ ಸಂಭವವಿದೆ. ಈ ಸಮಯದಲ್ಲಿ ನೀವು ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಿದರೆ ಒಳ್ಳೆಯದು. ಇಲ್ಲವಿದ್ದರೆ, ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. 


ಕನ್ಯಾ ರಾಶಿ: 
ಈ ವರ್ಷದ ಎರಡನೇ ಸೂರ್ಯಗ್ರಹಣವು ಕನ್ಯಾ ರಾಶಿಯವರ ದೃಷ್ಟಿಯಿಂದಲೂ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ನಿಮ್ಮ ಕೋಪವನ್ನು ನಿಯಂತ್ರಿಸಿ. 


ತುಲಾ ರಾಶಿ: 
ತುಲಾ ರಾಶಿಯವರಿಗೂ ಕೂಡ ಈ ಬಾರಿಯ ಸೂರ್ಯಗ್ರಹಣವನ್ನು ಅಷ್ಟು ಶುಭಕರ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಧ್ಯಾನವನ್ನು ಮಾಡುವುದು ಪ್ರಯೋಜನಕಾರಿ ಆಗಿದೆ. ಹಣಕಾಸಿನ ವಿಷಯದಲ್ಲಿ ಎಷ್ಟೇ ಆಪ್ತರಾಗಿದ್ದರೂ ತುಂಬಾ ಎಚ್ಚರಿಕೆಯಿಂದ ಇರಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.