ನವದೆಹಲಿ: ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದಕ್ಕಾಗಿಯೇ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರಾದ್ಧ, ಪಿಂಡದಂತಹ ಆಚರಣೆಗಳನ್ನು ಮಾಡಲಾಗುತ್ತದೆ. ಪ್ರತಿ ತಿಂಗಳು ಬರುವ ಅಮವಾಸ್ಯೆಯ ತಿಥಿಯ ಹೊರತಾಗಿ ಪಿತೃ ಪಕ್ಷದ 15 ದಿನಗಳನ್ನು ಪೂರ್ವಜರಿಗೆ ಮಾತ್ರ ಮೀಸಲಿಡಲಾಗಿದೆ. ಈ ಸಮಯದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರಾದ್ಧ, ತರ್ಪಣ, ಪಿಂಡದಾನ, ದಾನ ಇತ್ಯಾದಿಗಳನ್ನು ಮಾಡಬೇಕು. ಇಲ್ಲದಿದ್ದರೆ ಪೂರ್ವಜರ ಅಸಮಾಧಾನವು ಜೀವನದಲ್ಲಿ ಅನೇಕ ತೊಂದರೆಗಳನ್ನು ನೀಡುತ್ತದೆ. ಮತ್ತೊಂದೆಡೆ ಜಾತಕದಲ್ಲಿ ಪಿತೃ ದೋಷದ ಉಪಸ್ಥಿತಿಯು ಅನೇಕ ಸಮಸ್ಯೆಗಳನ್ನು ನೀಡುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಸಾಧ್ಯವಾದಷ್ಟು ಬೇಗ ಪಿತೃ ದೋಷವನ್ನು ತೊಡೆದುಹಾಕಲು ಪರಿಹಾರ ಕ್ರಮಗಳ ಬಗ್ಗೆ ವಿವರಿಸಲಾಗಿದೆ.


COMMERCIAL BREAK
SCROLL TO CONTINUE READING

 ಪಿತೃ ದೋಷದ ಲಕ್ಷಣಗಳು


- ಜಾತಕದಲ್ಲಿ ಪಿತೃ ದೋಷವಿದ್ದರೆ ಯಾವುದೇ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪಿತೃ ದೋಷದಿಂದ ದಾಂಪತ್ಯದಲ್ಲಿ ಅಡೆತಡೆ, ಅವರ ಮದುವೆಯಲ್ಲಿ ವಿಳಂಬವಾಗಬಹುದು.


- ಪಿತೃ ದೋಷವು ಸಂಪತ್ತಿನ ನಷ್ಟ ಮತ್ತು ಪ್ರಗತಿಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಎಲ್ಲಾ ಪ್ರಯತ್ನಗಳ ನಂತರವೂ ವ್ಯಕ್ತಿಯು ಬಯಸಿದ ಯಶಸ್ಸನ್ನು ಪಡೆಯುವುದಿಲ್ಲ. ಪಿತೃಗಳ ಅಸಮಾಧಾನವು ಅವನನ್ನು ಬಡತನಕ್ಕೆ ತಳ್ಳುತ್ತದೆ. ಇಡೀ ಕುಟುಂಬ ಆರ್ಥಿಕ ಸಂಕಷ್ಟ ಮತ್ತು ಅಭಾವದಲ್ಲಿ ಬದುಕುತ್ತದೆ.


- ಪಿತೃ ದೋಷದಿಂದಾಗಿ ಕುಟುಂಬದ ಬೆಳವಣಿಗೆ ನಿಲ್ಲುತ್ತದೆ. ಮಗು ಪಡೆಯಲು ಅಡ್ಡಿ ಉಂಟಾಗುತ್ತದೆ ಅಥವಾ ಮಗು ದಾರಿ ತಪ್ಪುತ್ತದೆ.


- ಪಿತೃ ದೋಷವು ಮನೆಯಲ್ಲಿ ಜಗಳ ಮತ್ತು ಕಲಹಗಳನ್ನು ಉಂಟುಮಾಡುತ್ತದೆ. ಮನೆಯಲ್ಲಿ ವಿನಾಕಾರಣ ಆಗಾಗ ಜಗಳಗಳು ನಡೆಯುತ್ತಿದ್ದರೆ ಅದು ಪೂರ್ವಜರ ಅಸಮಾಧಾನದ ಸಂಕೇತ. ಇಂತಹ ಪರಿಸ್ಥಿತಿಯಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.


- ಪಿತೃ ದೋಷವಿದ್ದರೆ ಕುಟುಂಬದವರಲ್ಲಿ ಟೆನ್ಶನ್ ಹೆಚ್ಚಿರುತ್ತದೆ. ಇದರೊಂದಿಗೆ ಒಬ್ಬ ಅಥವಾ ಇತರ ಸದಸ್ಯರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.


- ಪಿತೃ ದೋಷವಿದ್ದರೆ ಯಾವುದೇ ವ್ಯಕ್ತಿಯ ಉದ್ಯೋಗದಲ್ಲಿ ಅಡಚಣೆ ಉಂಟಾಗುತ್ತದೆ.


ಇದನ್ನೂ ಓದಿ: ಸಂಗಾತಿ ಕೇವಲ ಶಾರೀರಿಕ ಸಂಬಂಧ ಬಯಸುತ್ತಾನೋ ಅಥವಾ ಪ್ರೀತಿಯನ್ನು ಕೂಡ ಮಾಡುತ್ತಾನೋ? ಹೇಗೆ ತಿಳಿದುಕೊಳ್ಳಬೇಕು?


ಪಿತೃ ದೋಷಕ್ಕೆ ಸುಲಭ ಪರಿಹಾರಗಳು  


- ಪಿತೃ ದೋಷವನ್ನು ತೊಡೆದುಹಾಕಲು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.


- ಪಿತೃ ದೋಷದಿಂದ ಪರಿಹಾರ ಪಡೆಯಲು ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಮತ್ತು ದಕ್ಷಿಣ ದಿಕ್ಕಿನಲ್ಲಿ ಅರ್ಘ್ಯವನ್ನು ಅರ್ಪಿಸಬೇಕು.


- ಪಿತೃ ದೋಷವನ್ನು ತೊಡೆದುಹಾಕಲು ಬಡವರಿಗೆ ದಾನ ಮಾಡಬೇಕು. ಅಮಾವಾಸ್ಯೆ ಮತ್ತು ಪಿತೃ ಪಕ್ಷದಲ್ಲಿ ಶ್ರಾದ್ಧ, ಪಿಂಡದಾನ ಇತ್ಯಾದಿಗಳನ್ನು ಮಾಡಿದ್ರೆ ಪೂರ್ವಜರು ಇದರಿಂದ ಸಂತೋಷಪಡುತ್ತಾರೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಇದನ್ನೂ ಓದಿ: ಮಳೆಗಾಲದಲ್ಲಿ ಸುಕ್ಕುಗಟ್ಟಿದ ಕೂದಲಿನಿಂದ ಪರಿಹಾರಕ್ಕಾಗಿ ಇಲ್ಲಿದೆ 5 ಟಿಪ್ಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.