ಈ ಸುಳಿವು ನಿಮಗೂ ಸಿಕ್ಕರೆ ಮುಂದಿನ ದಿನಗಳಲ್ಲಿ ಲಕ್ಷ್ಮೀ ಕಟಾಕ್ಷ ಎನ್ನುವುದು ಪಕ್ಕಾ !
Maa Lakshmi Indication: ಲಕ್ಷ್ಮೀ ದೇವಿಯು ಪ್ರಸನ್ನಳಾಗುವ ಅಥವಾ ಮನೆಗೆ ಪ್ರವೇಶಿಸುವ ಮೊದಲು ಕೆಲವು ವಿಶೇಷ ಸೂಚನೆಗಳು ಮನೆ ಮಂದಿಗೂ ಸಿಗುತ್ತವೆ. ಮನೆಯಲ್ಲಿಲಕ್ಷ್ಮೀ ಆಗಮನದ ಮೊದಲು ಅಥವಾ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಆಗಮನದ ಮೊದಲು ಯಾವ ರೀತಿಯ ಮುನ್ಸೂಚನೆ ಸಿಗುತ್ತವೆ ನೋಡೋಣ.
Maa Lakshmi Indication : ಸಂಪತ್ತಿನ ಅಧಿದೇವತೆ ಮಹಾ ಲಕ್ಷ್ಮೀಯ ಆಶೀರ್ವಾದವಿದ್ದರೆ ಜೀವನದಲ್ಲಿ ಎಂದಿಗೂ ಸೋಲೇ ಇರುವುದಿಲ್ಲ. ಹಣಕಾಸಿನ ಕೊರತೆ ದೂರವಾಗಿ, ಎಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುವ ಮೂಲಕ ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನುಷ್ಯ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ಪರಿಹಾರ ತಂತ್ರಗಳನ್ನು ಅನುಸರಿಸುತ್ತಾನೆ. ಇನ್ನು ಲಕ್ಷ್ಮಿಯನ್ನು ಒಲೈಸಿಕೊಳ್ಳುವಂಥಹ ಕೆಲವು ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿಯೂ ಹೇಳಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಸಂತುಷ್ಟಗೊಳಿಸಬಹುದು.
ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಸಂಪತ್ತಿಗೆ ಕೊರತೆಯಿರುವುದಿಲ್ಲ ಎಂಬ ನಂಬಿಕೆ ಇದೆ. ಇದರೊಂದಿಗೆ ಯಾವಾಗಲೂ ಸಂತೋಷ ಇರುತ್ತದೆ. ಶಾಸ್ತ್ರಗಳ ಪ್ರಕಾರ, ಲಕ್ಷ್ಮೀ ದೇವಿ ಮುನಿಸಿಕೊಳ್ಳಲಿ ಅಥವಾ ಸಂತುಷ್ಟಳಾಗಲಿ ಇದರ ಪರಿಣಾಮ ನಮ್ಮ ಜೀವನದಲ್ಲಿ ಮುನ್ನವೇ ಗೋಚರಿಸುತ್ತದೆ. ಲಕ್ಷ್ಮೀ ದೇವಿಯು ಪ್ರಸನ್ನಳಾಗುವ ಅಥವಾ ಮನೆಗೆ ಪ್ರವೇಶಿಸುವ ಮೊದಲು ಕೆಲವು ವಿಶೇಷ ಸೂಚನೆಗಳು ಮನೆ ಮಂದಿಗೂ ಸಿಗುತ್ತವೆ. ಮನೆಯಲ್ಲಿ ಲಕ್ಷ್ಮೀ ಆಗಮನದ ಮೊದಲು ಅಥವಾ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಆಗಮನದ ಮೊದಲು ಯಾವ ರೀತಿಯ ಮುನ್ಸೂಚನೆ ಸಿಗುತ್ತವೆ ನೋಡೋಣ.
ಇದನ್ನೂ ಓದಿ : Samudrik Shastra: ದೇಹದ ಮೇಲೆ ಈ ಗುರುತುಗಳಿರುವ ಸ್ತ್ರೀಯರು ಲಕ್ಷ್ಮಿಯ ಪ್ರತಿರೂಪ.!
- ಹಕ್ಕಿ ಮನೆಯಲ್ಲಿ ಗೂಡು ಕಟ್ಟಿದರೆ ಇದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ.
- ಬಲಗೈಯಲ್ಲಿ ನಿರಂತರ ತುರಿಕೆಯಾಗುತ್ತಿದ್ದರೆ ಹಣವನ್ನು ಗಳಿಸುವ ಅವಕಾಶ ಮುಂದಿದೆ ಎಂದು ಹೇಳಲಾಗುತ್ತದೆ.
- ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳು ಕಾಣಿಸಿಕೊಳ್ಳುವುದು ಕೂಡಾ ಲಕ್ಷ್ಮೀ ದೇವಿಯ ಆಗಮನದ ಸಂಕೇತವಾಗಿದೆ.
- ಮನೆಯ ದೇವರ ಕೋಣೆಯ ಬಳಿ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಶುಭ.
- ದೀಪಾವಳಿಯ ದಿನದಂದು ಮನೆಯ ದೇವರ ಕೊನೆಯ ಬಳಿ ಅಥವಾ ತುಳಸಿ ಗಿಡದ ಬಳಿ ಹಲ್ಲಿ ಕಾಣಿಸಿಕೊಂಡರೆ, ಅದು ಲಕ್ಷ್ಮಿ ದೇವಿಯ ಅಪಾರ ಕೃಪೆಯ ಸಂಕೇತ ಎನ್ನಲಾಗುತ್ತದೆ.
- ಕನಸಿನಲ್ಲಿ ಪೊರಕೆ, ಗೂಬೆ, ಹೂಜಿ, ಆನೆ, ಕೊಳಲು, ಮುಂಗುಸಿ, ಶಂಖ, ಹಲ್ಲಿ, ಬಿಳಿ ಹಾವು, ಗುಲಾಬಿ ಮುಂತಾದವುಗಳು ಕಾಣಿಸಿಕೊಂಡರೂ ಕೂಡಾ ಧನ ಪ್ರಾಪ್ತಿಯ ಸಂಕೇತವಾಗಿರುತ್ತದೆ.
ಇದನ್ನೂ ಓದಿ : ‘ಪಿತೃ ದೋಷ ಯೋಗ’ದ ಕರಿನೆರಳು; ಈ 3 ರಾಶಿಗಳಿಗೆ ಮುಂದಿನ 30 ದಿನಗಳು ತುಂಬಾ ಸಂಕಷ್ಟ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.