ಬೆಂಗಳೂರು : ರಾಶಿಗೆ ಅನುಗುಣವಾಗಿ 12 ರಾಶಿಯಲ್ಲಿ ಹುಟ್ಟಿದವರು ಬೇರೆ ಬೇರೆ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ. ಹುಟ್ಟಿದ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಗುಣಗಳು, ಸ್ವಭಾವ ಮತ್ತು ನಡವಳಿಕೆಯು ವಿಭಿನ್ನವಾಗಿರುತ್ತದೆ. ಜೊತೆಗೆ ಇತರ ಗ್ರಹಗಳ ಸ್ಥಾನವನ್ನು ಕೂಡಾ ಅವು ಅವಲಂಬಿಸಿರುತ್ತದೆ. ರಾಶಿ ನಕ್ಷತ್ರಗಳಿಂದ ವ್ಯಕ್ತಿಯ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಒಂದು ಅಂದಾಜಿನ ಪ್ರಕಾರ ತಿಳಿದುಕೊಳ್ಳಬಹುದಾಗಿದೆ.  


COMMERCIAL BREAK
SCROLL TO CONTINUE READING

ರಾಶಿಗಳ ಪ್ರಾಕಾರ ಮೂರು ರಾಶಿಯವರು ಸಂಬಂಧಗಳಿಗೆ ಭಾರೀ  ಮಹತ್ವ ನೀಡುತ್ತಾರೆಯಂತೆ. ಸಂಬಂಧ ಯಾವುದೇ ಆಗಲಿ ಅದನ್ನು ಜೋಪಾನವಾಗಿ ಕಾಪಾಡುತ್ತಾರೆಯಂತೆ. ಮಾತ್ರವಲ್ಲ ತಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಬಗ್ಗೆ ಅವರಿಗೆ ಸ್ಪಷ್ಟತೆ ಇರುತ್ತದೆ. 


ಇದನ್ನೂ ಓದಿ : Mars Transit 2023: 9 ದಿನಗಳ ನಂತರ ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಕುಬೇರನ ನಿಧಿ ಕೈ ಸೇರಲಿದೆ!


ತುಲಾ ರಾಶಿ : ತುಲಾ ರಾಶಿಯವರು ಸಾಮಾಜಿಕ, ನ್ಯಾಯಯುತ ಜೀವನವನ್ನು ನಡೆಸುತ್ತಾರೆ. ಎಲ್ಲರಿಗೂ ಜೀವನದಲ್ಲಿ ಸಮಾನ ಅವಕಾಶ ಸಿಗಬೇಕು ಎನ್ನುವ ನಂಬಿಕೆ ಇಟ್ಟುಕೊಂಡು ಬದುಕುತ್ತಾರೆ. ಇತರರ ಬಗ್ಗೆ ಸದಾ ಕಾಳಜಿ ಹೊಂದಿರುವ ಗುಣ ಇವರದ್ದು. ಇನ್ನೊಬ್ಬರಿಗಾಗಿ ಎಂಥಹ ತ್ಯಾಗಕ್ಕೆ ಬೇಕಾದರೂ ಮುಂದಾಗುತ್ತಾರೆ. ಈ ರಾಶಿಯವರು ಬಹಳ ಸಂವೇದನಾಶೀಲರು. ಯಾವುದೇ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರವೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ತಮ್ಮ ನಡವಳಿಕೆಯಲ್ಲಿಯೂ ಉತ್ತಮ ಸಂಸ್ಕಾರ ಯಾವರದ್ದು. ಯಾರಿಗೂ ಅನ್ಯಾಯವಾಗುವುದನ್ನು ಅವರು ಇಷ್ಟಪಡುವುದಿಲ್ಲ. ಅನ್ಯಾಯವಾಗುವುದನ್ನು ನೋಡಿ ಸುಮ್ಮನಿರುವುದೂ ಇಲ್ಲ. ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಎಲ್ಲಾ  ಸಂದರ್ಭದಲ್ಲಿಯೂ ಪ್ರತಿಯೊಬ್ಬರೂ ಸಂತೋಷವಾಗಿರಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಾರೆ. 


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರು ತೀವ್ರ, ಭಾವನಾತ್ಮಕ ಮತ್ತು ನೇರ ಸ್ವಭಾವದವರು. ಏನೇ ಆಗಲಿ, ಎದುರಿಗಿರುವವರು ಸಿಟ್ಟು ಮಾಡಿಕೊಂಡರೂ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.  ಅವರು ಧೈರ್ಯಶಾಲಿಗಳು ಆತ್ಮವಿಶ್ವಾಸವುಳ್ಳವರು. ತಾನು ಅಂದುಕೊಂಡ ಕೆಲಸ ಸಾಧಿಸಲು ಮತ್ತು ತನ್ನ ಗುರಿಯನ್ನು ಸಾಧಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗಾಗಿಯೇ ಎದುರಿಗಿರುವವರನ್ನು ನಿಯಂತ್ರಿಸುವ ಕಲೆ ಕೂಡಾ ಇವರಿಗೆ ಕರಗತವಾಗಿರುತ್ತದೆ. 


ಇದನ್ನೂ ಓದಿ : ಮುಂದಿನ ನಾಲ್ಕು ತಿಂಗಳು ಈ ರಾಶಿಯವರ ಜೀವನದಲ್ಲಿ ಹಣದ ಮಳೆ


ಧನು ರಾಶಿ : ಧನು ರಾಶಿಯವರು ಮನಸ್ಸಿನ ಯಜಮಾನರಾಗಿರುತ್ತಾರೆ. ಅವರು ಆವು ತೆಗೆದುಕೊಂಡ ನಿರ್ಧಾರದ ಬಗ್ಗೆ ಅತಿಯಾದ ನಂಬಿಕೆ ಇಟ್ಟುಕೊಂಡಿರುತ್ತಾರೆ. ಕಠಿಣವಾದ ಕೆಲಸಗಳನ್ನೂ ಕೂಡಾ ಅತಿಯಾದ ತಾಳ್ಮೆಯಿಂದ ಮಾಡಿ ಮುಗಿಸುತ್ತಾರೆ.  ತಾಳ್ಮೆಯ ವಿಷಯದಲ್ಲಿ ಇವರದ್ದು  ಸದಾ ಒಂದು ಕೈ ಮೇಲು. ಹೊಸತನ್ನು ಕಲಿಯಲು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿರುತ್ತಾರೆ. ತಮ್ಮ ಗುರಿ ಸಾಧಿಸಲು, ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ