ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!
Money Astrology: ಕೆಲ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ ಯೋಗ ಉಂಟಾಗುತ್ತದೆ. ಈ ಎರಡು ಗ್ರಹಗಳ ಮಿಲನದಿಂದಾಗಿ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯ ಅನುಭವವೂ ಆಗಲಿದೆ.
Money Astrology: ಜುಲೈ 7 ರಿಂದ 18 ರವರೆಗೆ ಬುಧ ಮತ್ತು ಶುಕ್ರರು ಕರ್ಕ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ. ಈ ಎರಡು ಶುಭ ಗ್ರಹಗಳು ಯಾವಾಗ ಒಟ್ಟಾಗಿರುತ್ತಾರೋ, ಅಂತಹ ಸಂದರ್ಭದಲ್ಲಿ ಕೆಲ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ ಯೋಗ ಉಂಟಾಗುತ್ತದೆ. ಈ ಎರಡು ಗ್ರಹಗಳ ಮಿಲನದಿಂದಾಗಿ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯ ಅನುಭವವೂ ಆಗಲಿದೆ.
ಇದನ್ನೂ ಓದಿ: Vicks ಶೀತ, ಕೆಮ್ಮು ನಿವಾರಣೆಗೆ ಮಾತ್ರ ಅಲ್ಲ... ಹೀಗೆ ಬಳಸಿದರೆ ಸ್ಟ್ರೆಚ್ ಮಾರ್ಕ್ಸ್ ಕೂಡ ಮಾಯ
ಮೇಷ: ಈ ರಾಶಿಯ ನಾಲ್ಕನೇ ಸ್ಥಾನದಲ್ಲಿ ಈ ಎರಡು ಶುಭ ಗ್ರಹಗಳ ಸಂಯೋಗವಾಗಿದೆ. ಈ ಕಾರಣದಿಂದಾಗಿ ಆದಾಯವು ದಿನದಿಂದ ದಿನಕ್ಕೆ ಸುಧಾರಿಸುತ್ತದೆ. ಸಂಪತ್ತು ಹಲವು ರೀತಿಯಲ್ಲಿ ಆಗಮಿಸಲಿದೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯಲಿದ್ದು, ಹಬ್ಬದ ವಾತಾವರಣವೇ ಮನೆಮಾಡಲಿದೆ. ಇನ್ನೊಂದೆಡೆ ಸರ್ಕಾರಿ ಉದ್ಯೋಗ ಲಭಿಸಲಿದೆ.
ಮಿಥುನ: ಈ ರಾಶಿಯ ಧನಸ್ಥಾನದಲ್ಲಿ ಬುಧ ಮತ್ತು ಶುಕ್ರರ ಸಂಯೋಗವಾಗಿದೆ. ಹೀಗಿರುವಾಗಿ ಕನಸಿನಲ್ಲಿಯೂ ಅಂದುಕೊಂಡಿರದಷ್ಟು ಪ್ರಗತಿ ಕಂಡುಬರುವುದು. ಯಶಸ್ಸು ಸಿಗುತ್ತದೆ. ಮದುವೆಯ ಪ್ರಯತ್ನಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ.
ಕರ್ಕಾಟಕ: ಈ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಕ್ರಮಣ ಆರಂಭವಾಗುವುದರಿಂದ ಲಕ್ಷ್ಮಿ ಕಟಾಕ್ಷ ಖಂಡಿತ ಸಿಗುತ್ತದೆ. ಪ್ರತಿಯೊಂದು ಕೆಲಸವೂ ಲಾಭದಾಯಕವಾಗಿದೆ. ನಿರುದ್ಯೋಗಿಗಳಿಗೂ ವಿದೇಶಿ ಅವಕಾಶಗಳು ದೊರೆಯುತ್ತವೆ. ಸಂಬಳ ಹೆಚ್ಚಾಗುತ್ತದೆ. ವೃತ್ತಿ ಮತ್ತು ವ್ಯಾಪಾರ ಲಾಭದಾಯಕವಾಗಲಿದೆ.
ಕನ್ಯಾ: ಈ ರಾಶಿಯವರಿಗೆ ಬುಧ ಮತ್ತು ಶುಕ್ರನು ಲಾಭದ ಸ್ಥಾನದಲ್ಲಿ ಸಂಚಾರ ಮಾಡಲಿರುವುದರಿಂದ ಪ್ರತಿಯೊಂದು ಕೆಲಸವೂ ಕೂಡಿ ಬರುತ್ತದೆ. ವೃತ್ತಿ, ವ್ಯಾಪಾರದಲ್ಲಿ ಕ್ಷಣಕಾಲವೂ ಬಿಡುವಿಲ್ಲದ ಪರಿಸ್ಥಿತಿ ಬರಲಿದೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತವೆ.
ತುಲಾ: ಈ ರಾಶಿಯ ದಶಮಸ್ಥಾನದಲ್ಲಿ ಈ ಎರಡು ಶುಭ ಗ್ರಹಗಳ ಸಂಯೋಜನೆಯಿಂದಾಗಿ ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳ ಸಾಧ್ಯತೆ ಇದೆ. ಉದ್ಯೋಗ ನಿಮಿತ್ತ ಹೊರರಾಜ್ಯ, ದೂರದ ಊರುಗಳಿಗೆ ಹೋಗಬೇಕಾಗಬಹುದು. ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.
ಮಕರ: ಈ ರಾಶಿಯ 7ನೇ ಮನೆಯಲ್ಲಿ ಶುಭ ಗ್ರಹಗಳ ಸಂಚಾರದಿಂದಾಗಿ ಸಮಾಜದಲ್ಲಿ ಪ್ರಮುಖ ವ್ಯಕ್ತಿಯಾಗುವ ಸಾಧ್ಯತೆ ಇದೆ. ಉನ್ನತ ಮಟ್ಟದ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.
ಇದನ್ನೂ ಓದಿ: 2ನೇ T20ಯಲ್ಲಿ ಗೆಲುವು ಸಾಧಿಸಿದ್ದೇ ತಡ… ಈ ವಿಷಯದಲ್ಲಿ ಪಾಕ್, ಆಸೀಸ್ ಹಿಂದಿಕ್ಕಿದ ಟೀಂ ಇಂಡಿಯಾ
ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ