Guru Uday Effect 2023 : ಜ್ಯೋತಿಷ್ಯದಲ್ಲಿನ ಎಲ್ಲಾ ಗ್ರಹಗಳಲ್ಲಿ, ಗುರು ಗ್ರಹವನ್ನು ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಗುರುವಿನ ಸಂಚಾರ ಅಥವಾ ಉದಯ ಅನೇಕ ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಏಪ್ರಿಲ್ 27 ರಂದು ಗುರುವು ಮೇಷ ರಾಶಿಯಲ್ಲಿ ಉದಯಿಸಿದ್ದಾನೆ. ಗುರುವನ್ನು ಆಧ್ಯಾತ್ಮಿಕತೆ, ಸಮೃದ್ಧಿ, ಸಂಸ್ಕೃತಿ, ಸಂಪತ್ತು ಮತ್ತು ಸಂತೋಷ ಮತ್ತು ಶಾಂತಿಯ ಅಂಶವೆಂದು ಪರಿಗಣಿಸಲಾಗಿದೆ. ಗುರುವು ತನ್ನ ಚಲನೆಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಳ ಕಂಡು ಬರುತ್ತದೆ. 


COMMERCIAL BREAK
SCROLL TO CONTINUE READING

ಗುರು ಗ್ರಹವು ಮೇಷ ರಾಶಿಯಲ್ಲಿ ಉದಯಿಸಿದೆ. ಗುರು ಉದಯದ ಪರಿಣಾಮ ಎಲ್ಲಾ ರಾಶಿಯವರ ಜೀವನದ ಮೇಲೆ ಗೋಚರಿಸುತ್ತದೆ. ಆದರೆ, ಮೂರು ರಾಶಿಯವರು ಮಾತ್ರ ಮುಂದಿನ ಒಂದು ವರ್ಷದವರೆಗೆ  ಸಾಕಷ್ಟು ಹಣ ಗಳಿಸಲಿದ್ದಾರೆ. 


ಇದನ್ನೂ ಓದಿ : Strong Moon Benefits: ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿಯ ಜೊತೆಗೆ ಧನಲಾಭ!


ಧನು ರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ ಗುರುವಿನ ಉದಯವು ಧನು ರಾಶಿಯವರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಗುರು ಗ್ರಹವು ಧನು ರಾಶಿಯ ಐದನೇ ಮನೆಯಲ್ಲಿ ಉದಯಿಸಿದೆ. ಈ ಸಮಯದಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಪ್ರಗತಿ ಸಿಗುತ್ತದೆ. ಮತ್ತೊಂದೆಡೆ, ನೀವು ಮಾಡುವ ಯಾವುದಾದರೂ ಕೆಲಸ ಅರ್ಧಕ್ಕೆ ನಿಂತು ಹೋಗಿದ್ದರೆ ಆ ಕೆಲಸ ಈ ಅವಧಿಯಲ್ಲಿ ಪೂರ್ಣಗೊಳ್ಳಬಹುದು.  ಈ ಸಮಯದಲ್ಲಿ, ಗುರುವಿನ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡುತ್ತದೆ. ಆಕಸ್ಮಿಕವಾಗಿ ಧನಲಾಭವಾಗುವುದು. ಅಷ್ಟೇ ಅಲ್ಲ, ಈ ಸಮಯದಲ್ಲಿ ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳು ನಡೆಯಬಹುದು.


ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಶುಭಕರವಾಗಿರಲಿದೆ. ಮೇಷ ರಾಶಿಯವರ ಲಗ್ನ ಮನೆಯಲ್ಲಿ ಗುರುವು ಉದಯಿಸಿದ್ದಾನೆ. ಹೀಗಿರುವಾಗ   ಈ ರಾಶಿಯವರ ಆರೋಗ್ಯವು ಉತ್ತಮವಾಗಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವೂ ಕೂಡಿ ಬರಲಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.  ವಿದ್ಯಾರ್ಥಿಗಳಿಗೂ ಈ ಸಮಯ ಅದ್ಭುತವಾಗಿರಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಉತ್ತಮವಾಗಿರುತ್ತದೆ.


ಇದನ್ನೂ ಓದಿ : ಮಂಗಳ ಗೋಚಾರ, ಬುಧ ಉದಯ: ನಾಳೆಯಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ


ಕಟಕ ರಾಶಿ :
ಮುಂಬರುವ ವರ್ಷವು ಕರ್ಕಾಟಕ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಗುರುವು  ಕಟಕ ರಾಶಿಯ ಹತ್ತನೇ ಮನೆಯಲ್ಲಿ ಉದಯಿಸಿದ್ದಾನೆ. ಹೀಗೆ ಉದಯಿಸಿರುವ ಗುರು ಮುಂದಿನ ಒಂದು ವರ್ಷ ಇದೇ ರಾಶಿಯಲ್ಲಿ ಕುಳಿತಿರಲಿದ್ದಾನೆ. ಈ ಸಮಯದಲ್ಲಿ ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಾಣಲಿದೆ. ನಿರುದ್ಯೋಗಿಗಳು ಬಯಸುವ ಉದ್ಯೋಗಾವಕಾಶಗಳನ್ನು ಪಡೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.