Money Tips: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಆರ್ಥಿಕ ಲಾಭಕ್ಕಾಗಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಪರ್ಸ್ ಅಥವಾ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಹೀಗೆ ಮಾಡುವುದರಿಂದ ಪರ್ಸ್ ಅಥವಾ ಪಾಕೆಟ್ ಎಂದಿಗೂ ಖಾಲಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರ ತಜ್ಞರು ಕೆಲ ವಸ್ತುಗಳನ್ನು ಪರ್ಸ್‌ʼನಲ್ಲಿ ಇಡಬೇಕೆಂದು ಸೂಚಿಸುತ್ತಾರೆ. ಅಂತಹ ವಸ್ತುಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.


ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿ ಮಗುವಾಗಿದ್ರೂ ನಟಿಯ ಜೊತೆ ಡೇಟಿಂಗ್! ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೀಂ ಇಂಡಿಯಾದ ಅಗ್ರೆಸ್ಸಿವ್‌ ಕ್ಯಾಪ್ಟನ್‌ ಈತ!


ಬೆಳ್ಳಿ ನಾಣ್ಯ: ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ನೀಡಲಾಗಿದ್ದರೂ, ವಿಶೇಷ ವಾಸ್ತು ನಿಯಮದ ಪ್ರಕಾರ, ಬೆಳ್ಳಿಯ ನಾಣ್ಯವನ್ನು ಪರ್ಸ್‌ʼನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ವಾಸ್ತು ನಿಯಮಗಳ ಪ್ರಕಾರ ಮೊದಲು ಈ ನಾಣ್ಯವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಅದರ ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಣೆಯನ್ನು ಕಾಣಲು ಪ್ರಾರಂಭಿಸುತ್ತದೆ


ಶ್ರೀ ಯಂತ್ರ:  ಇದನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಪರ್ಸ್‌ʼನಲ್ಲಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ಶ್ರೀಯಂತ್ರದ ಈ ಪರಿಹಾರವು ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.


ಗೋಮತಿ ಚಕ್ರ:  ಗೋಮತಿ ಚಕ್ರವನ್ನು ಲಕ್ಷ್ಮಿ ದೇವಿಯ ನೆಚ್ಚಿನ ವಸ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಗೋಮತಿ ಚಕ್ರವನ್ನು ಪರ್ಸ್‌ʼನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಾಲದಿಂದ ಮುಕ್ತರಾಗುತ್ತಾರೆ ಎಂಬುದು ಕೂಡ ನಂಬಿಕೆ.


ಅಕ್ಷತೆ: ಯಾಗ, ಧಾರ್ಮಿಕ ಆಚರಣೆ ಅಥವಾ ದೇವರಿಗೆ ಅರ್ಪಣೆ ಮಾಡುವಾಗ ನೀಡುವ ಅಕ್ಷತೆ (ಅಕ್ಕಿ) ಧಾನ್ಯಗಳನ್ನು ಪರ್ಸ್‌ʼನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ನಂಬಿಕೆಯ ಪ್ರಕಾರ, ಇದನ್ನು ಮಾಡುವ ಮೊದಲು, 21 ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಇದರ ನಂತರ, ಅದನ್ನು ಒಂದು ಶುದ್ಧ ಬಟ್ಟೆಯಿಂದ ಕಟ್ಟಿ ಪರ್ಸ್ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂಪತ್ತನ್ನು ಸುರಿಸುತ್ತಾಳೆ ಎಂದು ನಂಬಲಾಗಿದೆ.


ಒಂದು ರೂಪಾಯಿಯ ನೋಟು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಒಂದು ರೂಪಾಯಿಯ ನೋಟನ್ನು ಪರ್ಸ್‌ʼನಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ಅದನ್ನು ಎಂದಿಗೂ ಖರ್ಚು ಮಾಡಬಾರದು. ಹೀಗೆ ಮಾಡುವುದರಿಂದ ಹಣದ ಆಕರ್ಷಣೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಇದರಿಂದಾಗಿ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.


ಅಶ್ವತ್ಥ ಮರದ ಎಲೆ: ಸನಾತನ ಧರ್ಮದ ನಂಬಿಕೆಗಳ ಪ್ರಕಾರ, ದೇವರು ಅಶ್ವತ್ಥ ಮರದಲ್ಲಿ ನೆಲೆಸಿರುತ್ತಾರೆ. ಇದೇ ಕಾರಣಕ್ಕೆ ಜನರು ಈ ಮರವನ್ನು ಬಹಳ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಇನ್ನು  ಮರದ ಎಲೆಯನ್ನು ತೆಗೆದುಕೊಂಡು ಅದನ್ನು ಗಂಗಾಜಲದಿಂದ ಶುದ್ಧೀಕರಿಸಿ ಪರ್ಸ್‌ʼನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಲ್ಲದೆ ದೇವ-ದೇವತೆಗಳ ಆಶೀರ್ವಾದವೂ ಸಿಗುತ್ತದೆ.


ಲಕ್ಷ್ಮಿ ದೇವಿಯ ಫೋಟೋ: ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆಯಾಗಿ ಸ್ವೀಕರಿಸಲಾಗಿದೆ. ಲಕ್ಷ್ಮಿ ದೇವಿಯ ಅನುಗ್ರಹವಿಲ್ಲದೆ ಜೀವನದಲ್ಲಿ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಹೀಗಾಗಿ, ಲಕ್ಷ್ಮಿ ದೇವಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಇದಲ್ಲದೇ ಸಾಲದಿಂದ ಮುಕ್ತಿಯೂ ಸಿಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯವನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ಸಂಬಂಧಪಟ್ಟ ವಿಷಯದ ತಜ್ಞರನ್ನು ಸಂಪರ್ಕಿಸಿ.


ಇದನ್ನೂ ಓದಿ: ಎಲ್ಲೆಂದರಲ್ಲಿ ಇಡಬೇಡಿ ಕಸದ ಬುಟ್ಟಿ !ನಿಮಗರಿವಿಲ್ಲದೆ ಹರಿದು ಹೋಗಬಹುದು ಐಶ್ವರ್ಯ!ಮನೆಯ ಈ ದಿಕ್ಕಿನಲ್ಲಿಯೇ ಇಡಿ ಡಸ್ಟ್ ಬಿನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews