ಈ ಐದು ರಾಶಿಯವರಿಗೆ ಸುವರ್ಣ ದಿನಗಳನ್ನು ತರಲಿದೆ ರಕ್ಷಾ ಬಂಧನ
Raksha Bandhan 2022: ಈ ವರ್ಷದ ರಕ್ಷಾಬಂಧನ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. 5 ರಾಶಿಚಕ್ರ ಚಿಹ್ನೆಗಳಿಗೆ ಈ ರಕ್ಷಾ ಬಂಧನವು ಸುವರ್ಣ ದಿನಗಳನ್ನು ತರಲಿದ್ದು, ಬಹಳಷ್ಟು ಹಣ ಮತ್ತು ಪ್ರಗತಿಯನ್ನು ನೀಡಲಿದೆ ಎಂಬ ನಂಬಿಕೆ ಇದೆ.
ಈ ರಾಶಿಯವರಿಗೆ ರಕ್ಷಾ ಬಂಧನದ ಶುಭ ಫಲ: ಸಹೋದರ-ಸಹೋದರಿಯರ ಬಂಧನ ಬೆಸೆಯುವ ಪವಿತ್ರ ರಕ್ಷಾಬಂಧನ ಹಬ್ಬವು 5 ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ರಕ್ಷಾ ಬಂಧನದ ಈ ಸಮಯದಲ್ಲಿ ಗ್ರಹಗಳ ಅಧಿಪತಿ ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಸಂಕ್ರಮಿಸಿದೆ. ಜ್ಯೋತಿಷ್ಯದ ಪ್ರಕಾರ, ಮಂಗಳನ ರಾಶಿಚಕ್ರದ ಬದಲಾವಣೆಯು 5 ರಾಶಿಚಕ್ರದ ಜನರಿಗೆ ಬಹಳ ಮಂಗಳಕರವೆಂದು ಹೇಳಲಾಗುತ್ತಿದೆ.
ರಕ್ಷಾ ಬಂಧನದ ಈ ಸಮಯದಲ್ಲಿ ಮಂಗಳನ ರಾಶಿ ಪರಿವರ್ತನೆಯು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ಈ ಸಮಯದಲ್ಲಿ ಅವರು ಬಹಳಷ್ಟು ಹಣ ಮತ್ತು ಪ್ರಗತಿಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಈ ಐದು ರಾಶಿಯವರಿಗೆ ಸುವರ್ಣ ದಿನಗಳನ್ನು ತರಲಿದೆ ರಕ್ಷಾ ಬಂಧನ :
ವೃಷಭ ರಾಶಿ:
ಮಂಗಳನ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ಆದಾಯ ಹೆಚ್ಚಾಗುವುದು ಖಚಿತ. ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿ ಕಂಡುಬರಲಿದೆ.
ಇದನ್ನೂ ಓದಿ- ರಕ್ಷಾ ದಾರ ಮೊದಲು ಕಟ್ಟಿದ್ದು ಯಾರು ಗೊತ್ತಾ? ಅಣ್ಣ ತಂಗಿಯರ ಸಂಬಂಧದಲ್ಲಿ ಇರಲಿಲ್ಲ ಈ ಪದ್ಧತಿ!
ಕರ್ಕಾಟಕ ರಾಶಿ: ಮಂಗಳ ಸಂಚಾರವು ಕರ್ಕ ರಾಶಿಯವರಿಗೆ ಅವರ ಜೀವನದಲ್ಲಿ ಮಂಗಳವನ್ನು ತರುತ್ತದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇದ್ದು ಹಣಕಾಸಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ.
ಸಿಂಹ ರಾಶಿ: ವೃಷಭ ರಾಶಿಯಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹಣವು ಪ್ರಯೋಜನಕಾರಿಯಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ತುಲಾ ರಾಶಿ: ಮಂಗಳನ ರಾಶಿ ಪರಿವರ್ತನೆಯಿಂದ ತುಲಾ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ. ನಿಮ್ಮ ದೀರ್ಘಕಾಲದ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ. ಹಠಾತ್ ಧನ ಲಾಭ ನಿಮ್ಮ ಜೀವನವನ್ನೇ ಬದಲಾಯಿಸಲಿದೆ. ವೃತ್ತಿರಂಗದಲ್ಲಿಯೂ ಪ್ರಗತಿ ಸಾಧ್ಯತೆ ಇದೆ.
ಇದನ್ನೂ ಓದಿ- Puneeth Rajkumar Rakhi: ರಕ್ಷಾ ಬಂಧನಕ್ಕೆ ಮಾರುಕಟ್ಟೆಗೆ ಬಂತು "ಅಪ್ಪು ರಾಖಿ"
ಕುಂಭ ರಾಶಿ : ಮಂಗಳನ ಸಂಚಾರವು ಕುಂಭ ರಾಶಿಯವರಿಗೆ ಹಲವು ರೀತಿಯ ಸಂತೋಷವನ್ನು ಹೊತ್ತು ತರಲಿದೆ. ದಾಂಪತ್ಯದಲ್ಲಿ ಮಧುರತೆ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹೊಸ ಮನೆ-ಕಾರು ಖರೀದಿಸುವ ಯೋಗವಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.