ಮಾರ್ಚ್ 12 ರವರೆಗೆ ಈ ರಾಶಿಯವರಿಗೆ ಸೋಲೇ ಇಲ್ಲ ! ಹೋದಲೆಲ್ಲಾ ಸಿಗುವುದು ಯಶಸ್ಸು
ಮೀನದಲ್ಲಿ ಗುರು ಮತ್ತು ಶುಕ್ರರ ಸಂಯೋಜನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ 3 ರಾಶಿಯವರಿಗೆ ವಿಶೇಷವಾಗಿ ಮಂಗಳಕರವಾಗಿರುತ್ತದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಇದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಕಾಣುತ್ತದೆ. ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವೆಂದು ಕರೆಯಲಾಗುತ್ತದೆ. ಫೆಬ್ರವರಿ 15, 2023 ರಂದು, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಭವನ್ನು ಕೊಡುವ ಗುರು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಮೀನದಲ್ಲಿ ಗುರು ಮತ್ತು ಶುಕ್ರರ ಸಂಯೋಜನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು 3 ರಾಶಿಯ ಜನರಿಗೆ ವಿಶೇಷವಾಗಿ ಮಂಗಳಕರವಾಗಿರುತ್ತದೆ.
ಶುಕ್ರ ಸಂಕ್ರಮವು ಅಪಾರ ಸಂಪತ್ತನ್ನು ನೀಡುತ್ತದೆ :
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶುಕ್ರ ಸಂಕ್ರಮಣ ಬಹಳ ಶುಭಕರವಾಗಿದೆ. ಮಾರ್ಚ್ 15 ರೊಳಗೆ, ಈ ರಾಶಿಯವರು ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಜನರ ಸಂಕ್ರಮಣ ಜಾತಕದಲ್ಲಿ ಮಾಳವ್ಯ ರಾಜಯೋಗವು ರೂಪುಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ದೊರೆಯುತ್ತದೆ. ಅಂದುಕೊಂಡ ಕೆಲಸ ಮಾಡಿ ಮುಗಿಸಲು ಈ ಸಮಯ ಉತ್ತಮವಾಗಿದೆ.
ಇದನ್ನೂ ಓದಿ : Guru Gochar 2023: ಈ 3 ರಾಶಿಯವರಿಗೆ 'ಕೇಂದ್ರ ತ್ರಿಕೋನ ರಾಜಯೋಗ' ದಿಂದ ತೆರೆಯಲಿದೆ ಅದೃಷ್ಟದ ಬಾಗಿಲು
ಕನ್ಯಾ ರಾಶಿ : ಕನ್ಯಾರಾಶಿಯಲ್ಲಿ ಶುಕ್ರನ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಬಹು ದಿನಗಳಿಂದ ನಿಮ್ಮ ಮನಸಿನಲ್ಲಿರುವ ಆಸೆ ಈಡೇರ ಬಹುದು. ಹಣಕಾಸಿನ ಪ್ರಯೋಜನವಾಗಲಿದೆ. ವ್ಯಾಪಾರದಲ್ಲಿ ಲಾಭವಾಗುವುದು. ಇದ್ದಕ್ಕಿದ್ದಂತೆ ಹಣ ಸಿಗಬಹುದು.
ಮೀನ ರಾಶಿ : ಶುಕ್ರ ಸಂಕ್ರಮಣದ ನಂತರ ಮೀನರಾಶಿಗೆ ಪ್ರವೇಶಿಸಿದ್ದು ಇಲ್ಲಿ ಗುರು-ಶುಕ್ರ ಸಂಯೋಗ ಆಗುತ್ತಿದೆ. ಆದ್ದರಿಂದ, ಶುಕ್ರನ ರಾಶಿ ಬದಲಾವಣೆಯ ಅತ್ಯಂತ ಮಂಗಳಕರ ಪರಿಣಾಮವು ಮೀನ ರಾಶಿಯವರ ಮೇಲೆ ಇರುತ್ತದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ.
ಇದನ್ನೂ ಓದಿ : Surya Shani Yuti : ಮಾರ್ಚ್ 15 ರವರೆಗೆ ಈ 3 ರಾಶಿಯವರು ಎಚ್ಚರ! ಖಾಲಿಯಾಗುತ್ತೆ ನಿಮ್ಮ ವಾಲ್ಟ್
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.