Vaishakha Month 2024 : ಜ್ಯೋತಿಷ್ಯದ ಪ್ರಕಾರ, ಹಿಂದೂ ಪಂಚಾಂಗದಲ್ಲಿ  ವರ್ಷದ ಎರಡನೇ ತಿಂಗಳು,ವೈಶಾಖ ಮಾಸ ಪ್ರಾರಂಭವಾಗುತ್ತದೆ. ವರ್ಷದ ಮೂರನೇ ತಿಂಗಳಾದ ಜ್ಯೇಷ್ಠ ಮಾಸವು ಮೇ 24 ರಿಂದ ಪ್ರಾರಂಭವಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ,ಪ್ರತಿ ತಿಂಗಳು ಒಂದೊಂದು ದೇವತೆಗಳಿಗೆ  ಸಮರ್ಪಿತವಾಗಿದೆ.ಹಾಗೆಯೇ ವೈಶಾಖ ಮಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ.ಈ ತಿಂಗಳಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು  ಪರಿಹಾರಗಳನ್ನು ಕೈಗೊಳ್ಳುವುದು ಅತ್ಯಂತ ಮಂಗಳಕರವಾಗಿರುತ್ತದೆ. 


COMMERCIAL BREAK
SCROLL TO CONTINUE READING

ತುಳಸಿ ಗಿಡದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎನ್ನುವುದು ಧಾರ್ಮಿಕ ನಂಬಿಕೆ.  ತುಳಸಿ ಗಿಡವನ್ನು ಶಾಸ್ತ್ರೋಕ್ತವಾಗಿ ಪೂಜಿಸುವ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ. ಆ ಮನೆ ಮತ್ತು ಮನೆ ಮಂದಿ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ನೆಲೆಸಿರುತ್ತದೆ. ಮನೆಯಲ್ಲಿರುವ ತುಳಸಿ ಗಿಡವು ನಕಾರಾತ್ಮಕತೆಯನ್ನು ಮನೆಯ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುವಂತೆ ಮಾಡುತ್ತದೆ.


ಇದನ್ನೂ ಓದಿ :   Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ತುಂಬುತ್ತೆ ಖಜಾನೆ


ವೈಶಾಖ  ಮಾಸದಲ್ಲಿ,ಸೂರ್ಯೋದಯಕ್ಕೆ ಮುಂಚಿತವಾಗಿ ಬೆಳಿಗ್ಗೆ ಸ್ನಾನ ಮಾಡಿ  ಉಪವಾಸ ಕೈಗೊಂಡರೆ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ವೈಶಾಖ ಮಾಸದಲ್ಲಿ ಸ್ನಾನ, ದಾನ ಮಾಡುವುದರಿಂದ  ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಮಾಸದಲ್ಲಿ ಮಾಡುವ ತುಳಸಿ ಪರಿಹಾರಗಳು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತವೆ. 


-ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಗುರುವಾರ ತುಳಸಿ ದೇವಿಗೆ ಸಮರ್ಪಣೆ. ಭಕ್ತರು ವೈಶಾಖ ಮಾಸದ ಪ್ರತಿ ಗುರುವಾರ ತುಳಸಿ ಮಾತೆಯ ವಿಶೇಷ ಪೂಜೆಯನ್ನು ಮಾಡುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಗುರುವಾರ ತುಳಸಿಯನ್ನು ಪೂಜಿಸುವಾಗ, 7 ತುಂಡು ಅರಿಶಿನವನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು 7 ಕಡಲೆ ಕಾಳುಗಳನ್ನು ಹಾಕಬೇಕು. ನಂತರ ಇದನ್ನು ತುಳಸಿ ಬಳಿ ಇಡಬೇಕು. ಹೀಗೆ ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆಯಂತೆ. 


ಇದನ್ನೂ ಓದಿ :   Shukraditya Yog: ದಶಕದ ಬಳಿಕ ಶುಕ್ರಾದಿತ್ಯ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭ


ವೈಶಾಖ ಮಾಸದಲ್ಲಿ ತುಳಸಿಗೆ ನೀರನ್ನು ಅರ್ಪಿಸುವಾಗ, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ.ಇದರ ನಂತರ ಈ ನೀರನ್ನು ತುಳಸಿಗೆ ಅರ್ಪಿಸಿ.ಕೈಯಲ್ಲಿ ಅರಿಶಿನ ನೀರನ್ನು ತೆಗೆದುಕೊಂಡು ಮನಸ್ಸಿನಲ್ಲಿ ಇಷ್ಟಾರ್ಥ ಹೇಳಿಕೊಳ್ಳುತ್ತಾ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.   


ವೈಶಾಖ ಮಾಸದ ಪ್ರತಿ ಗುರುವಾರದಂದು,ಗೋಧಿ ಹಿಟ್ಟಿನಿಂದ ದೀಪವನ್ನು ಮಾಡಿ ಅದೇ ದೀಪಕ್ಕೆ ತುಪ್ಪದ ಬತ್ತಿ ಇಟ್ಟು ಸಂಜೆ ತುಳಸಿಯ ಬಳಿ ಬೆಳಗಬೇಕು. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ.ಭಕ್ತರ ಮೇಲೆ ಸದಾ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾಳೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.