Vinayaka Chaturthi 2024: ಭಾದ್ರಪದ ಮಾಸದ ನಾಲ್ಕನೇ ದಿನದಂದು ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಪೂಜೆ ಮಾಡಲಾಗುತ್ತದೆ. ಇನ್ನು ಕೆಲವರು ಸಂಪ್ರದಾಯಕ್ಕನುಗುಣವಾಗಿ 3, 5, 11 ದಿನಗಳ ಕಾಲ ಗಣೇಶನನ್ನು ಪೂಜಿಸುತ್ತಾರೆ. ಇನ್ನು ಗಣಪಯ್ಯನಿಗೆ ಮೋದಕ ಎಂದರೆ ಎಲ್ಲಿಲ್ಲದ ಪ್ರೀತಿ. ಜೊತೆಗೆ ಗರಿಕೆಯೆಂದರೂ ಅಚ್ಚುಮೆಚ್ಚು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಶಮಿ ಬೋಳು ತಲೆಯಲ್ಲೂ ಕಡುಕಪ್ಪಾದ ಕೂದಲು ಬೆಳೆಯಲು ಫಾಲೋ ಮಾಡಿದ್ದು ಕೇವಲ ಇದೊಂದು ಟಿಪ್ಸ್‌!


ಆದರೆ ವರ್ಷದಲ್ಲಿ ಒಂದು ದಿನ ಮಾತ್ರ ಗಣೇಶನ ಪೂಜೆಯಲ್ಲಿ ತುಳಸಿ ದಳವನ್ನು ಬಳಸಲಾಗುತ್ತದೆ. ಇತರ ದಿನಗಳಲ್ಲಿ ಇದನ್ನು ಬಳಸಲಾಗುವುದಿಲ್ಲ. ಇದರ ಹಿಂದೆ ಒಂದು ಜನಪ್ರಿಯ ಕಥೆಯಿದೆ.


ಹಿಂದೆ... ಹಂಸಧ್ವಜುವಿನ ಮಗನಾದ ಧರ್ಮಧ್ವಜುವಿಗೆ ವಿಷ್ಣುವಿನ ಕೃಪೆಯಿಂದ ʼತುಳಸಿʼ ಎಂಬ ಮಗುವಾಗಿತ್ತು. ಆ ತುಳಸಿ ಗಂಗಾ ನದಿಯ ದಡದಲ್ಲಿ ಅಡ್ಡಾಡುತ್ತಿದ್ದಾಗ ಅದೇ ದಾರಿಯಲ್ಲಿ ಸಂಚಾರ ಹೊರಟ ಗಣಪತಿಯನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾಳೆ. ಅಷ್ಟೇ ಅಲ್ಲದೆ, ತನ್ನನ್ನು ಮದುವೆಯಾಗುವಂತೆ ಗಣಪತಿಯನ್ನು ಕೇಳುತ್ತಾಳೆ. ಆದರೆ ಗಣಪಯ್ಯನಿಗೆ ಆ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಇದರಿಂದ ಕುಪಿತಳಾದ ತುಳಸಿ "ನಿನಗೆ ನನ್ನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಲ್ಲಾ... ಹಾಗಾದರೆ ನೀನು ಬ್ರಹ್ಮಚಾರಿಯಾಗಿಯೇ ಉಳಿದುಬಿಡು" ಎಂದು ಶಪಿಸುತ್ತಾಳೆ. ಅಷ್ಟೇ ಅಲ್ಲದೆ, ಇದರಿಂದ ಕೋಪಗೊಂಡ ವಿನಾಯಕನು ತನ್ನನ್ನು ಶಪಿಸಿದ ತುಳಸಿಯನ್ನು "ನಿನ್ನ ಜೀವನದುದ್ದಕ್ಕೂ ರಾಕ್ಷಸನ ಸೆರೆಯಲ್ಲಿ ಇರುವಂತೆ" ಶಾಪ ನೀಡುತ್ತಾನೆ. ಅಂದಿನಿಂದ ಗಣಪನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುತ್ತಿಲ್ಲ.


ಇದಲ್ಲದೇ ಇನ್ನೊಂದು ಕಥೆಯೂ ಜನಪ್ರಿಯವಾಗಿದೆ. ತುಳಸಿಯು ಬ್ರಹ್ಮದೇವನ ವರದಿಂದ ಶಂಖಚೂಡು ಎಂಬ ರಾಕ್ಷಸನನ್ನು ಮದುವೆಯಾಗುತ್ತಾಳೆ. ಆತ ಅಹಂಕಾರದಿಂದ ಎಲ್ಲ ದೇವತೆಗಳನ್ನು ಪೀಡಿಸುತ್ತಾನೆ. ತುಳಸಿ ದೇವಿಯ ತ್ಯಾಗದ ಮಹಿಮೆಯಿಂದ ಅವನನ್ನು ಯಾರೂ ಗೆಲ್ಲಲು ಸಾಧ್ಯವಿರುವುಲ್ಲ. ಹೀಗಾಗಿ ಗಣೇಶನ ಸಹಾಯದಿಂದ, ವಿಷ್ಣುವು ತುಳಸಿಯ ಆಚರಣೆಗೆ ಅಡ್ಡಿಪಡಿಸುತ್ತಾನೆ. ಅದೇ ಸಂದರ್ಭದಲ್ಲಿ ರಾಕ್ಷಸನನ್ನು ನಾಶಪಡಿಸುತ್ತಾನೆ. ಆ ನಂತರ ಶ್ರೀಹರಿಯ ಆಶೀರ್ವಾದದಿಂದ ತುಳಸಿ ಗಿಡವಾಗಿ, ಧಾರ್ಮಿಕ ಸ್ಥಾನಮಾನ ಪಡೆಯುತ್ತಾರೆ.


ತುಳಸಿಯು ತನ್ನ ಧಾರ್ಮಿಕ ವ್ರತವನ್ನು ಮುರಿಯಲು ಸಹಾಯ ಮಾಡಿದ ಗಣಪತಿಯನ್ನು 'ತಲೆಯಿಲ್ಲದಾಗಲಿ' ಎಂದು ಶಪಿಸುತ್ತಾಳೆ. ತನಗೇ ಶಾಪವಿತ್ತಳೆಂದು  ಕೋಪಗೊಂಡ ಗಣಪತಿ, ನಿನ್ನ ಆತ್ಮೀಯತೆ ನನಗಿನ್ನು ಬೇಡ ಎನ್ನುತ್ತಾನೆ ಗಣಪತಿ. ಅದಾದ ಬಳಿಕ ಗಣಪತಿಯ ಚೌತಿ ದಿನ ಹೊರತುಪಡಿಸಿ ಬೇರೆ ಯಾವುದೇ ದಿನಗಳಲ್ಲಿ ಗಣಪತಿಯ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ. ಈ ದಿನ ಬಳಸಿದರೆ ಮಾತ್ರ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆ.


ಇದನ್ನೂ ಓದಿ: ಒಮ್ಮೆ ಖಾಲಿ ಹೊಟ್ಟೆಗೆ ಈ ನೀರು ಕುಡಿದರೆ ಮುಂದಿನ 30 ದಿನಗಳವರೆಗೆ ಸಂಪೂರ್ಣ ನಾರ್ಮಲ್‌ ಇರುತ್ತದೆ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ


(ಸೂಚನೆ: ಮೇಲೆ ತಿಳಿಸಿದ ಅಂಶಗಳು ಕೇವಲ ಸಾಮಾಜಿಕ ಮಾಧ್ಯಮದ ವೈರಲ್ ವಿಷಯವನ್ನು ಆಧರಿಸಿವೆ. ಇದನ್ನು Zee ಕನ್ನಡ ನ್ಯೂಸ್ ಪರಿಶೀಲಿಸಿಲ್ಲ ಮತ್ತು ಖಚಿತಪಡಿಸುವುದಿಲ್ಲ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ